Asianet Suvarna News Asianet Suvarna News

'ಎರಡು ಕನಸು' ಕಲ್ಪನಾ ಲುಕ್ ರೀ-ಕ್ರಿಯೇಟ್ ಮಾಡಿದ ಬಿಗ್ ಬಾಸ್ ವೈಷ್ಣವಿ ಗೌಡ!

ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದೆ ವೈಷ್ಣವಿ ಗೌಡ ರೆಟ್ರೋ ಲುಕ್. ಸೆಲೆಬ್ರಿಟಿಗಳ ಹಾದಿಯಲ್ಲಿ ಫಾಲೋವರ್ಸ್....

Kannada Bigg boss fame Vaishnavi Gowda recreates Yaradu Kanasu Kalpana look vcs
Author
Bangalore, First Published Nov 2, 2021, 3:53 PM IST
  • Facebook
  • Twitter
  • Whatsapp

ಸಿನಿಮಾ, ಧಾರಾವಾಹಿ (Kannada Serial) ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಟಿಯರು ಇದೀಗ ಯುಟ್ಯೂಬ್‌ನಲ್ಲಿಯೂ ಚಾನೆಲ್‌ (Youtube Channel) ತೆರೆದು, ತಮ್ಮ ಜೀವನದ ಅನೇಕ ವಿಚಾರಗಳ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಕಾಮೆಂಟ್ (Comment) ಮತ್ತು ಮೆಸೇಜ್ (Messgae) ಮೂಲಕ ಅಭಿಮಾನಿಗಳು ಕಳುಹಿಸುವ ಬೇಡಿಕೆಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಅಗ್ನಿಸಾಕ್ಷಿ (Agnisakshi) ಖ್ಯಾತಿಯ ವೈಷ್ಣವಿ ಗೌಡ ಕೂಡ ಅದೇ ಕೆಲಸ ಮಾಡುತ್ತಿದ್ದಾರೆ. 

ಹೌದು! ಇತ್ತೀಚಿನ ದಿನಗಳಲ್ಲಿ ರೆಟ್ರೋ ಲುಕ್ (Retro look) ಕ್ರಿಯೇಟ್ ಮಾಡುವುದು ತುಂಬಾನೇ ಕಾಮನ್ ಆಗಿದೆ. ಆದರೆ ಅದರಲ್ಲೂ ಏನಾದರೂ ವಿಭಿನ್ನ ಪ್ರಯತ್ನಿಸಬೇಕು ಎಂದು ವೈಷ್ಣವಿ (Vaishnavi Gowda) ಅವರು ದಿವಂಗತ ನಟಿ ಕಲ್ಪನಾ (Kalpana) ಅವರ ಲುಕ್ ಕ್ರಿಯೇಟ್ ಮಾಡಿದ್ದಾರೆ. ಎರಡು ಕನಸು (Yaradu Kanasu) ಚಿತ್ರದಲ್ಲಿ ಕಲ್ಪನಾ ಅವರು ಧರಿಸಿದ್ದ ರೀತಿಯ ಹಸಿರು ಮತ್ತು ಕೆಂಪು ಸೀರೆ ಧರಿಸಿ, ಅದೇ ಲುಕ್ ಅನ್ನು ಕ್ರಿಯೇಟ್ ಮಾಡಿ, ಅಪ್ಲೋಡ್ ಮಾಡಿದ್ದಾರೆ. 

1 ಮಿಲಿಯನ್ ಫಾಲೋವರ್ಸ್ ಮುಟ್ಟಿದ ಬಿಗ್ ಬಾಸ್ ವೈಷ್ಣವಿ ಗೌಡ!

ವಿಡಿಯೋ ಆರಂಭದಲ್ಲಿ ಹೇರ್‌ ಸ್ಟೈಲ್ (Hair Style) ಮತ್ತು ಮೇಕಪ್ (Makeup) ಮಾಡುವವರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಅಲ್ಲದೇ ತಾವು ಬಳಸುವ ಫೇಸ್ ವಾಶ್ (Face wash) ಮತ್ತು ಕ್ರೀಮ್ ಯಾವುದು ಎಂದು ಮೊದಲ ಬಾರಿ ರಿವೀಲ್ ಮಾಡಿದ್ದಾರೆ.  ವೈಷ್ಣವಿ ಅವರ ಮೇಕಪ್ ಮತ್ತು ಸ್ಟೈಲಿನ ಸಂಪೂರ್ಣ ವಿಡಿಯೋವನ್ನು ತೋರಿಸಲಾಗಿದೆ. 'ಕಲ್ಪನಾ ಮೇಡಂ ಅಂತ ಹೇಳಿದ ತಕ್ಷಣ ಅವರು ಮಾಡುತ್ತಿದ್ದ ಸ್ಟೈಲ್ ನೆನಪಾಗುತ್ತದೆ. ಈಗ ಎಲ್ಲರೂ ಅದನ್ನೇ ಫಾಲೋ ಮಾಡಿ, ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಅದರಲ್ಲೂ ಅವರ ಹೇರ್‌ಸ್ಟೈಲ್, ಬ್ಲೌಸ್ ಮತ್ತು ಬಿಂದಿ ಈಗಲೂ ಫಾಲೋ ಮಾಡುತ್ತಾರೆ. Old is back ಅಂತ ಹೇಳಬೇಕು ಈಗ. ಈ ರೀತಿ ಟ್ರೆಂಡ್ ಸೆಟ್ ಮಾಡಿದಕ್ಕೆ ತುಂಬಾನೇ ಥ್ಯಾಂಕ್ಸ್' ಎಂದಿದ್ದಾರೆ ವೈಷ್ಣವಿ. 

ರೇಷ್ಮೆ ಸೀರೆಯಿಂದ ಹೊಡೆದ ಹಾಗೆ; ವೈಷ್ಣವಿ ಕಾಲೆಳೆದ ಕಿಚ್ಚ ಸುದೀಪ್!

'ಸಾಮಾನ್ಯವಾಗಿ ನಾನು ಕಣ್ಣಿಗೆ (Kajol) ಕಾಡಿಗೆ ಅಥವಾ ಕೆಲ ಭಾಗಕ್ಕೆ ಐ -ಲೈನರ್ (Eyeliner) ಬಳಸುವುದಿಲ್ಲ. ಸೀರಿಯಲ್ ದಿನಗಳಿಂದ ನನಗೆ ಇದು ಅಭ್ಯಾಸ. ನನ್ನನ್ನು ನಾನೇ ಈ ರೀತಿ ನೋಡಿಕೊಳ್ಳುವುದಕ್ಕೆ ಶಾಕ್ ಆಗುತ್ತಿದೆ. ಡ್ಯಾನ್ಸ್ ಮಾಡುತ್ತಿದ್ದ ದಿನಗಳಲ್ಲಿ ಮಾತ್ರ ನಾನು ಈ ರೀತಿ ಮೇಕಪ್ ಮಾಡಿಕೊಳ್ಳುತ್ತಿದ್ದೆ. ಕಲ್ಪನಾ ಅವರ ಹೇರ್‌ಸ್ಟೈಲ್ ತುಂಬಾ ಚೆನ್ನಾಗಿ ಮಾಡಿಕೊಳ್ಳುತ್ತಿದ್ದರಂತೆ. ಅನೇಕ ಸಿನಿಮಾಗಳಲ್ಲಿ ಅವರಾಗೇ ಅವರೇ ಮೇಕಪ್ ಮಾಡಿಕೊಳ್ಳುತ್ತಿದ್ದರಂತೆ, ಎಂದು ಅಗ್ನಿಸಾಕ್ಷಿ ಚಿತ್ರೀಕರಣ ಸಮಯದಲ್ಲಿ ಮುಖ್ಯಮಂತ್ರಿ ಚಂದ್ರು ಸರ್ (Mukyamantri Chandru) ಹೇಳುತ್ತಿದ್ದರು,' ಎಂದಿದ್ದಾರೆ ವೈಷ್ಣವಿ.  

ಈ ಹಿಂದೆ ರಾಜ ರಾಣಿ (Raja Rani) ಕಾರ್ಯಕ್ರಮದಲ್ಲಿ ನಿರೂಪಕಿ ಅನುಪಮಾ ಗೌಡ (Anupama Gowda) ಕೂಡ ರಾಮಚಾರಿ ಚಿತ್ರದಲ್ಲಿ ಮಾಲಾಶ್ರೀ ಅವರ ಹಳ್ಳಿ ಹುಡುಗಿ ಲುಕ್ ಕ್ರಿಯೇಟ್ ಮಾಡಿದ್ದರು. ಅವರು ಕೂಡ ಯುಟ್ಯೂಬ್ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ತಾಯಿ ಬಟ್ಟೆ ಹೊಲಿದಿದ್ದಾರೆ. ಅನುಪಮಾ ಅವರೇ ಮೇಕಪ್ ಮಾಡಿಕೊಂಡು ಮ್ಯಾಚ್ ಮಾಡಿಕೊಂಡಿದ್ದಾರೆ.  ಸೆಲೆಬ್ರಿಟಿಗಳು ರೀ-ಕ್ರಿಯೇಷನ್‌ ಲುಕ್‌ ನೋಡಿ ಅಭಿಮಾನಿಗಳು ಕೂಡ ಫಾಲೋ ಮಾಡುತ್ತಿದ್ದಾರೆ.

 

Follow Us:
Download App:
  • android
  • ios