Asianet Suvarna News Asianet Suvarna News

ಸ್ಪೈಡರ್ ವುಮೆನ್ ಮೇಘಾಶೆಟ್ಟಿ ಜಿಮ್‌ನಲ್ಲಿ ಸೂಪರ್ ವರ್ಕೌಟ್! ಜೊತೆ ಜೊತೆಯಲಿ ಅನು ಅಂದ ನೋಡಿ ಫ್ಯಾನ್ಸ್ ಖುಷ್!

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬೆಣ್ಣೆ ಮುದ್ದೆಯಂತಿದ್ದ ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ಈಗ ಕನ್ನಡ ಚಿತ್ರರಂಗದ ಸ್ಪೈಡರ್ ವುಮೆನ್ ಆಗಿದ್ದಾಳೆ.

Kannada Actress Megha Shetty hard workout in Gym then she climb pillar like spider Man sat
Author
First Published Aug 1, 2024, 7:03 PM IST | Last Updated Aug 1, 2024, 7:03 PM IST

ಬೆಂಗಳೂರು (ಆ.01): ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬೆಣ್ಣೆ ಮುದ್ದೆಯಂತಿದ್ದ ನಟಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಈಗ ಜಿಮ್ ನಲ್ಲಿ ಹಾರ್ಡ್‌ ವರ್ಕೌಟ್ ಮೂಲಕ ಕನ್ನಡದ ಸ್ಪೈಡರ್ ವುಮೆನ್ ಆಗಿ ಕಾಣಿಸಿಕೊಂಡಿದ್ದಾಳೆ.

ಕನ್ನಡ ಚಿತ್ರರಂಗದ ಬೇಡಿಕೆ ನಟಿಯಾಗಿ ಗುರುತಿಸಿಕೊಳ್ಳುತ್ತಿರುನ ನಟಿ ಮೇಘಾ ಶೆಟ್ಟಿ ತನ್ನ ಸೌಂದರ್ಯ ಹಾಗೂ ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳದು ಭರ್ಜರಿ ವರ್ಕೌಟ್ ಮಾಡುತ್ತಿದ್ದಾರೆ. ಕೇವಲ ಜಿಮ್ ಮಾತ್ರ ಮಾಡದೇ ಸ್ಪೈಡರ್‌ಮ್ಯಾನ್ ರೀತಿಯಲ್ಲಿ ಕಂಬವನ್ನು ಹತ್ತುವ ಮೂಲಕ ಸ್ಪೈಡರ್ ವುಮೆನ್ ರೀತಿ ಕಾಣಿಸಿಕೊಂಡಿದ್ದಾಳೆ. ಆದರೆ, ಜಿಮ್ ವರ್ಕೌಟ್‌ನಲ್ಲಿಯೂ ಮೇಘಾ ಶೆಟ್ಟಿ ಅಂದವನ್ನು ನೋಡಿದ ಅಭಿಮಾನಿಗಳು ಮಾತ್ರ ಕನ್ನಡ ಚಿತ್ರರಂಗಕ್ಕೆ ಸಿಕ್ಕೇಬಿಟ್ಲು ಸೆಕ್ಸಿಯಷ್ಟ್ ಸ್ಪೈಡರ್ ವುಮೆನ್ ಎಂದು ಕಾಮೆಂಟ್ ಮಾಡಿದ್ದಾರೆ.

ಸಿನಿಮಾ ಹೀರೋಯಿನ್ ಎಂದಾಕ್ಷಣ ಅದಕ್ಕೆ ತನ್ನದೇ ತಯಾರಿಯನ್ನೂ ಮಾಡಿಕೊಳ್ಳುವುದು ಅಗತ್ಯವಾಗಿದೆ. ದೇಹದ ಸೌಂದರ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಮುಖ ಸೌಂದರ್ಯದ ಜೊತೆಗೆ ದೇಹವನ್ನು ತೆಳ್ಳಗೆ ಬಳುಕುವ ಬಳ್ಳಿಯಂತೆ ಕಾಪಾಡಿಕೊಳ್ಳಲು ತರಹೇವಾರಿ ಕಸರತ್ತು ಕೂಡ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಟಿ ಮೇಘಾ ಶೆಟ್ಟಿ ಕೂಡ ಪ್ರತಿನಿತ್ಯ ಜಿಮ್‌ನಲ್ಲಿ ಸಖತ್ ವರ್ಕೌಟ್ ಮಾಡಿ ಬೆವರಿಳಿಸುತ್ತಾಳೆ. ಈಗ ತಾನು ಜಿಮ್‌ನಲ್ಲಿ ವರ್ಕೌಟ್ ಮಾಡಿದ ನಂತರ ಜಿಮ್‌ನಲ್ಲಿರುವ ಶೆಡ್‌ನ ಕಬ್ಬಿಣದ ಕಂಬವನ್ನು ಹಿಡಿದು ಮೇಲಕ್ಕೆ ಹತ್ತಿದ್ದಾಳೆ. ಸ್ಪೈಡರ್ ಮ್ಯಾನ್ ರೀತಿಯಲ್ಲಿ ಕಂಬವನ್ನು ಬರಿಗಾಲಿನಿಂದ ಹತ್ತಿದ ನಟಿ ಮೇಘಾ ಶೆಟ್ಟಿಗೆ ಅಭಿಮಾನಿಗಳಿ ನೀನು ಸ್ಪೈಡರ್ ವುಮೆನ್ ಎಂದು ಹಾಡಿ ಹೊಗಳಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್ ಮಾಡೋ ವೀಡಿಯೋ ಹಂಚಿಕೊಂಡ ಮೇಘಾ ಶೆಟ್ಟಿ, 'ಡಿ ಬಾಸ್' ಬಗ್ಗೆ ಮಾತಾಡಿ ಎಂದ ದರ್ಶನ್ ಫ್ಯಾನ್ಸ್!

ಜೊತೆ ಜೊತೆಯಲಿ ಧಾರಾವಾಹಿ ಅನು ಸಿರಿಮಮನೆ ಆಗಿ ಕನ್ನಡದ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡ ಮೇಘಾ ಶೆಟ್ಟಿ ಹಿಂದೆ ತಿರುಗಿ ನೋಡಲೇ ಇಲ್ಲ. ಅದು ಕೂಡ ಸಿನಿಮಾ ನಾಯಕ ನಟ ಅನಿರುದ್ಧ ಅವರೊಂದಿಗೆ ಧಾರಾವಾಹಿಯಲ್ಲಿ ನಟಿಸಿ ತಾನೊಬ್ಬ ಹೀರೋಯಿನ್ ಎಂಬಂತೆ ಕಾಣಿಸಿಕೊಂಡಿದ್ದಳು. ಆಗ ಕನ್ನಡ ಧಾರಾವಾಹಿ ಪ್ರೇಕ್ಷಕರು ಕೂಡ ಅನು ಅಂದವನ್ನು ನೀಡಿ, ನೀನು ಧಾರಾವಾಹಿಯು ಬದಲು ಸಿನಿಮಾ ಕ್ಷೇತ್ರಕ್ಕೆ ಹೋಗಬೇಕು. ನಟನೆಯಲ್ಲಿ ಇನ್ನೂ ಹೆಚ್ಚಿನ ಪ್ರಾವೀಣ್ಯತೆ ಪಡೆಯುವ ಮೂಲಕ ಸಿನಿಮಾ ಆಫರ್‌ಗಳನ್ನು ಗಿಟ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

ನಟ ಅನಿರುದ್ಧ ಜೊತೆಗೆ ನಟಿಸಿದ ಮೇಘಾ ಶೆಟ್ಟಿಗೆ ಸಿನಿಮಾ ರಂಗದ ಹಲವು ನಿರ್ದೇಶಕರು ಹಾಗೂ ಸಿನಿಮಾ ರಂಗದ ಗಣ್ಯರ ಪರಿಚಯವೂ ಆಗುತ್ತದೆ. ಜೊತೆಗೆ, ಧಾರಾವಾಹಿ ಕುರಿತ ಹಲವು ಕಾರ್ಯಕ್ರಮಗಳಲ್ಲಿ ಸಿನಿಮಾ ಕ್ಷೇತ್ರದವರ ಕಣ್ಣಿಗೆ ಬಿದ್ದ ಸುಂದರಿಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದೇ ವೇಳೆಗೆ ಜೊತೆ ಜೊತೆಯಲಿ ಧಾರಾವಾಹಿಯ ನಾಯಕ ಪಾತ್ರಧಾರಿ ಅನಿರುದ್ಧ ಜತ್ಕರ್ ಅವರಿಗೂ ಧಾರಾವಾಹಿ ತಂಡದವರ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಕಂಡುಬಂದು ಅನಿರುದ್ಧ ಧಾರಾವಾಹಿಯಿಂದ ಹೊರಗೆ ಬಂದರು. ಇದಾದ ಕೆಲವೇ ಎಪಿಸೋಡ್‌ಗಳಿಗೆ ಜೊತೆ ಜೊತೆಯಲಿ ಧಾರಾವಾಹಿಗೆ ಅಂತ್ಯ ಹಾಡಲಾಯಿತು.

ಜೊತೆ ಜೊತೆಯಲಿ ಧಾರಾವಾಹಿಯ ಅನುಗೆ ಕನ್ನಡ ಮಾತ್ರವಲ್ಲದೇ ತೆಲುಗು ಧಾರಾವಾಹಿಗಳಿಂದಲೂ ಆಫರ್ ಬರುತ್ತಿವೆ ಎಂಬ ಮಾಹಿತಿ ಕೇಳಿಬಂದಿತ್ತು. ಇದಕ್ಕೆ ತಾಳ್ಮೆಯಿಂದಲೇ ಕಾದು ಉತ್ತರ ನೀಡುವುದಾಗಿ ಮೇಘಾ ತಿಳಿಸಿದ್ದಳು. ಇದರ ಬೆನ್ನಲ್ಲಿಯೇ ಕನ್ನಡ ಸಿನಿಮಾಗಳಿಗೆ ಮೇಘಾ ನಟನೆಗೆ ಬುಲಾವ್ ಬಂದವು. ಆಗ ಆತುರಾತುರದಲ್ಲಿ ಸಿನಿಮಾಗಳನ್ನು ಒಪ್ಪಿಕೊಳ್ಳದೇ ತನಗಿಷ್ಟದ ಕಥೆಗಳು ಹಾಗೂ ಪಾತ್ರಕ್ಕೆ ಹೊಂದಾಣಿಕೆ ಆಗುವಂತಹ ಸಿನಿಮಾಗಳಲ್ಲಿ ನಟಿಸುವುದಾಗಿ ಒಪ್ಪಿಕೊಂಡರು. ಇದರಿಂದ ನಟಿ ಮೇಘಾ ಶೆಟ್ಟಿ ಈಗಾಗಲೇ ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಹಾಗೂ ಕೈವ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾಳೆ.

ಕ್ರಾಪ್ ಟಾಪ್ ಪ್ಯಾಂಟ್ ಧರಿಸಿ ಮೋಹಕ ಭಂಗಿಯಲ್ಲಿ ಪಡ್ಡೆಗಳ ನಿದ್ದೆ ಕದ್ದ ಮೇಘಾ

ಈಗ ಮೇಘಾ ಶೆಟ್ಟಿ ಕೈಯಲ್ಲಿ ಮೂರು ಸಿನಿಮಾಗಳಿವೆ. ಹೊಸ ಪ್ಯಾನ್ ಇಂಡಿಯಾ ಸಿನಿಮಾ 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಚೀತಾ' ಸಿನಿಮಾಗೂ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಗ್ರಾಮಾಯಣ ಸಿನಿಮಾ ಕೂಡ ಒಪ್ಪಿಕೊಂಡಿದ್ದಾಳೆ. ಜೊತೆಗೆ, ದಕ್ಷಿಣ ಭಾರತದ ವಿವಿಧ ಭಾಷೆಗಳಿಗೂ ಆಫರ್ ಬಂದರೆ ಒಪ್ಪಿಕೊಂಡು ಹೋಗುವುದಾಗಿ ಮೇಘಾ ಶೆಟ್ಟಿ ಸಿದ್ಧವಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟಿಸಿ ತೆಲುಗು, ತಮಿಳು ಚಿತ್ರರಂಗಕ್ಕೆ ಹಾರಿ ದೊಡ್ಡ ಅವಕಾಶ ಗಿಟ್ಟಿಸಿದ ನಟಿಯರಾದ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಶ್ರೀಲೀಲಾ ಸೇರಿದಂತೆ ಹಲವರ ಸಾಲಿಗೆ ಕನ್ನಡತಿ ಮೇಘಾ ಶೆಟ್ಟಿ ಕೂಡ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಕಾದು ನೋಡಿದರೆ ಇದಕ್ಕೆ ಕಾಲವೇ ಉತ್ತರ ಕೊಡಲಿದೆ.

Latest Videos
Follow Us:
Download App:
  • android
  • ios