ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಗಟ್ಟಿಮೇಳ' ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ.  ವೇದಾಂತ್‌- ಅಮೂಲ್ಯ ಕಾಂಬಿನೇಷನ್‌ ಪ್ರೇಕ್ಷಕರ ಪ್ರೀತಿ ಗಿಟ್ಟಿಸಿಕೊಂಡಿದೆ. 

ಬಾಸ್‌- ಅಮೂಲ್ಯ ಸ್ಟೋರಿಗೆ ಹೊಸ ತಿರುವು ಕೊಡಲು ಚಿನ್ನಾರಿ ಮುತ್ತ ಬರ್ತಿದ್ದಾರೆ. ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಪ್ರಸಾರವಾಗುತ್ತಿರುವ ಸಂಚಿಕೆಯಲ್ಲಿ ವಿಜಯ್‌ ರಾಘವೇಂದ್ರ ಮಿಂಚಲಿದ್ದಾರೆ. ಗುಲಾಬ್ ಜಾಮೂನ್‌ ಮತ್ತು ಚಾಕಲೇಟ್‌ ಬಾಯ್‌ ಎಂದು ಕರೆಸಿಕೊಂಡಿರುವ ವಿಜಯ್ ಧಾರಾವಾಹಿಗೆ ಹೊಸ ತಿರುವು ಕೊಡಲಿದ್ದಾರಾ ಎಂದು ಕಾದು ನೋಡಬೇಕಿದೆ. 

'ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌', 'ಡ್ರಾಮಾ ಜೂನಿಯರ್ಸ್‌' ಹಾಗೂ ಅವಾರ್ಡ್‌ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿಕೊಂಡು ಪ್ರೇಕ್ಷಕರ ಮನಸ್ಸು ಗೆದ್ದಿರುವ ವಿಜಯ್ ಅವರನ್ನು ಕಿರುತೆರೆ ಮೇಲೆ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 

ಇತ್ತೀಚಿಗೆ ವಿಜಯ್ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್‌' ರಾಜ್ಯದಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

"