ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ ಇಸ್ಮಾರ್ಚ್‌ ಜೋಡಿ. ಗೋಲ್ಡನ್‌ಸ್ಟಾರ್‌ ಗಣೇಶ್‌ ನಿರೂಪಣೆ, ಜು.16ರಿಂದ ವಾರಾಂತ್ಯ ರಾತ್ರಿ 9 ಗಂಟೆಗೆ

ಗೋಲ್ಡನ್‌ಸ್ಟಾರ್‌ ಗಣೇಶ್‌ ಇನ್ನು ಮುಂದೆ ಪ್ರತೀ ಶನಿವಾರ- ಭಾನುವಾರ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 16ರಿಂದ ರಾತ್ರಿ 9 ಗಂಟೆಗೆ ಗಣೇಶ್‌ ನಿರೂಪಣೆಯ ಹೊಸ ರಿಯಾಲಿಟಿ ಶೋ ‘ಇಸ್ಮಾರ್ಚ್‌ ಜೋಡಿ’ ಆರಂಭವಾಗಲಿದೆ. 10 ಮಂದಿ ಸೆಲೆಬ್ರಿಟಿ ದಂಪತಿ ಈ ಶೋದಲ್ಲಿ ಭಾಗವಹಿಸಲಿದ್ದಾರೆ.

ಸೆಲೆಬ್ರಿಟಿ ದಂಪತಿಗಳಿಗೆ ಟಾಸ್‌್ಕಗಳನ್ನು ನೀಡಲಾಗುತ್ತದೆ. ಗೆದ್ದವರಿಗೆ ಅಂಕಗಳು ಲಭಿಸುತ್ತವೆ. ಮೊದಲ ಐದು ಕಂತುಗಳು ಎಲಿಮಿನೇಷನ್‌ ಇರುವುದಿಲ್ಲ. ನಂತರ ಅಂಕಗಳ ಆಧಾರದಲ್ಲಿ ಎಲಿಮಿನೇಷನ್‌ ಪ್ರಕ್ರಿಯೆ ಆರಂಭವಾಗುತ್ತದೆ. ಗೆದ್ದವರಿಗೆ ರು.10 ಲಕ್ಷ ಬಹುಮಾನ ಸಿಗಲಿದೆ. ವಿನಯ್‌ ಗೌಡ ಮತ್ತು ಅಕ್ಷತಾ ಗೌಡ, ಸುಮನ್‌ ನಗರ್‌ಕರ್‌ ಮತ್ತು ಗುರುದೇವ್‌, ದಿಶಾ ಮದನ್‌ ಮತ್ತು ಶಶಾಂಕ್‌, ಪ್ರತೀಕ್‌ ಮತ್ತು ಮೌಲ್ಯಶ್ರೀ, ಶ್ರೀರಾಮ್‌ ಸುಳ್ಯ ಮತ್ತು ಪುನೀತ ಆಚಾರ್ಯ, ರಘು ಮತ್ತು ವಿದ್ಯಾಶ್ರೀ, ಇಂಪನಾ ಜಯರಾಜ್‌ ಮತ್ತು ಅಜಿತ್‌ ಜಯರಾಜ್‌, ಸಪ್ನ ದೀತ್‌ ಮತ್ತು ಅಶ್ವಿನ್‌ ದೀತ್‌, ಜೈಜಗದೀಶ್‌ ಮತ್ತು ವಿಜಯಲಕ್ಷ್ಮೀ ಸಿಂಗ್‌, ರಿಚರ್ಡ್‌ ಲೂಯಿಸ್‌ ಮತ್ತು ಹ್ಯಾರಿಯೆಟ್‌ ಲೂಯಿಸ್‌ ಶೋದಲ್ಲಿ ಸ್ಪರ್ಧಿಗಳಾಗಿರುತ್ತಾರೆ.

5 ಎಪಿಸೋಡ್‌ ಆದ್ಮೇಲೆ ಎಲಿಮಿನೇಷನ್ ಶುರುವಾಗುತ್ತೆ; ಇಸ್ಮಾರ್ಟ್‌ ಜೋಡಿ ಶೋ ಬಗ್ಗೆ ಗಣೇಶ್!

ರಿಯಾಲಿಟಿ ಶೋ ಕುರಿತು ಗೋಲ್ಡನ್‌ಸ್ಟಾರ್‌ ಗಣೇಶ್‌, ‘ಮೊದಲ ಬಾರಿಗೆ ಸೆಲೆಬ್ರಿಟಿ ಜೋಡಿಗಳ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಇಲ್ಲಿ ಹೊಸತಾಗಿ ಮದುವೆಯಾದವರಿಂದ ಹಿಡಿದು 40 ವರ್ಷ ದಾಂಪತ್ಯ ನಡೆಸಿದ ಜೋಡಿಗಳೂ ಇವೆ. ತೀರ್ಪುಗಾರರು ಇರುವುದಿಲ್ಲ. ಅಂಕಗಳೇ ಎಲಿಮಿನೇಷನ್‌ಗೆ ಮಾನದಂಡ. ಪ್ರಸ್ತುತ ಸಣ್ಣ ಸಣ್ಣ ವಿಚಾರಗಳಿಗೆ ದಂಪತಿ ದೂರಾಗುತ್ತಿದ್ದಾರೆ. ಆದರೆ ಜೀವನ ಎಂದರೆ ಅದಲ್ಲ, ಏಳು ಬೀಳು ಸುಖ ದುಃಖ ಎಲ್ಲವೂ ಇರುತ್ತದೆ. ಎಲ್ಲರೂ ಪ್ರೀತಿಯಿಂದ ಬದುಕಿ ಎಂಬ ಸಂದೇಶ ಸಾರುವ ಕಾರ್ಯಕ್ರಮ ಇದು’ ಎನ್ನುತ್ತಾರೆ. ಈ ಕಾರ್ಯಕ್ರಮವನ್ನು ಪ್ರಶಾಂತ್‌ ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚಿಗೆ ಪ್ರೆಸ್‌ಮಿಟ್‌ ನಡೆಯಿತ್ತು, ಶೋ ಹೇಗಿರುತ್ತದೆ ಯಾರೆಲ್ಲಾ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ ಎಂದು ಸಣ್ಣ ಸುಳಿವನ್ನು ಗಣೇಶ್ ನೀಡಿದ್ದಾರೆ. ಒಂದೆರಡು ಎಪಿಸೋಡ್ ಆದ್ಮೇಲೆ ಎಲಿಮಿನೇಷನ್‌ ತುಂಬಾನೇ ಕಾಮನ್ ಆದರೆ ಸೆಲೆಬ್ರಿಟಿ ಜೋಡಿಗಳು ಜನರಿಗೆ ಹತ್ತಿರ ಆಗಬೇಕು ಎಂದು 5 ಎಪಿಸೋಡ್‌ಗಳ ಕಾಲ ಎಲಿಮಿನೇಷನ್‌ ಇರುವುದಿಲ್ಲ ಎಂದಿದ್ದಾರೆ. 

ಎಲ್ಲರ ಮನೆ ದೋಸೆ ತೂತೇ, 15 ದಿನಕ್ಕೆ 1 ವರ್ಷಕ್ಕೆ ಇಷ್ಟ ಇಲ್ಲ ಅಂತಾರೆ: ಗಣೇಶ್

ಅನೇಕ ಜನಪ್ರಿಯ ರಿಯಾಲಿಟಿ ಶೋಗಳನ್ನು ಪಿಕ್ಸಲ್‌ ಪ್ರೊಡಕ್ಷನ್‌ ನೀಡಿದೆ. ಅಲ್ಲದೆ ಸೂಪರ್ ಮಿನಿಟ್ ಮತ್ತು ಗೋಲ್ಡನ್ ಗ್ಯಾಂಗ್‌ ಕಾರ್ಯಕ್ರಮದಲ್ಲಿ ಗಣೇಶ್‌ ನಿರೂಪಣೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಈ ಸೂಪರ್ ಆಂಡ್ ಸ್ಮಾರ್ಟ್‌ ರಿಯಾಲಿಟಿ ಶೋ ಇಸ್ಮಾರ್ಟ್‌ ಜೋಡಿ ಶೋಗೆ ಗಣೇಶ್ ಸೂಕ್ತ ಎನ್ನಲಾಗಿದೆ. 

ಸೆಲೆಬ್ರಿಟಿ influencer ಅಗಿರುವ ದಿಶಾ ಮದನ್ ಮತ್ತು ಅವರ ಪತಿ ಶಶಾಂಕ್‌ರನ್ನು ಮೊದಲ ಸೆಲೆಬ್ರಿಟಿ ಕಪಲ್ ಆಗಿ ಜನರಿಗೆ ಪರಿಚಯಿಸಿಕೊಟ್ಟಿದ್ದಾರೆ.