ಮೇ.6 ಎಂಎಕ್ಸ್‌ ಪ್ಲೇಯರ್‌ನಲ್ಲಿ ಬಿಡುಗಡೆಯಾದ 'ರಾಮ ಯುಗ್' ವೆಬ್ ಸೀರಿಸ್‌ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಮೊದಲ ಬಾರಿ ನಟ ದಿಗಂತ್ ವೆಬ್‌ ಸೀರಿಸ್‌ನಲ್ಲಿ ಅಭಿನಯಿಸಿದ್ದು, ರಾಮನ ಅವತಾರದಲ್ಲಿ ಕಾಣಿಸಿ ಕೊಂಡಿದ್ದಾರೆ. 

ಕುನಾಲ್‌ ಕೊಹ್ಲಿ ನಿರ್ದೇಶನ ಮಾಡಿರುವ ಈ ವೆಬ್ ಸೀರಿಸ್‌ನಲ್ಲಿ ನಟ ದಿಗಂತ್, ಐಶ್ವರ್ಯ ಬಜಾ, ವಿವಾನ್ ಭಾತೆನಾ, ಅನೂಪ್ ಸೋನಿ, ಕಬೀರ್ ದುಹಾನ್ ಸಿಂಗ್ ಸೇರಿದಂತೆ ಅನೇಕ ನಟ, ನಟಿಯರು ಅಭಿನಯಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾಡಿರುವ ಈ ಬೆಸ್ ಸೀರಿಸ್‌ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕೊರೋನಾ ತಡೆಗೆ ಕನ್ನಡದಲ್ಲೇ ಸಲಹೆ ಕೊಟ್ಟ ಟಾಲಿವುಡ್ ಸೂಪರ್‌ಸ್ಟಾರ್ 

ನಟ ದಿಗಂತ್ ಪಾತ್ರ ಹೆಚ್ಚಾಗಿ ಹೈಲೈಟ್ ಆಗಿದೆ. ಆದರೆ ಸೀರಿಸ್‌ ಡಿಟ್ಟೋ ಧಾರಾವಾಹಿ ತರ ಇದೆ ಎನ್ನಲಾಗಿದೆ.  ವಿಶೇಷ ಏನೆಂದರೆ ವೆಬ್‌ ಸೀರಿಸ್‌ ಬಹುತೇಕ ಚಿತ್ರೀಕರಣ ನಡೆದದ್ದು, ಮಾರಿಷಸ್‌ನಲ್ಲಿ. 'ರಾಮಯುಗ್' ವೆಬ್‌ ಸೀರಿಸ್‌ನ ಪ್ರತಿಯೊಂದೂ ಟ್ರೈಲರ್‌ ಅನ್ನು ದಿಗಂತ್ ಹಂಚಿ ಕೊಳ್ಳುತ್ತಿದ್ದಾರೆ. 'ದಿಗಂತ್ ಅದ್ಭುತವಾಗಿ ಅಭಿನಯಿಸಿದ್ದಾರೆ. ನೀವು ತುಂಬಾ ಸ್ವೀಟ್ ರಾಮ ಆಗಿದ್ರಿ. ಈ ವೆಬ್‌ ಸೀರಿಸ್‌ ನಮ್ಮ ಮುಂದಿನ ಪೀಳಿಗೆ ನೋಡಬಹುದು,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.