ರಿಜಿಸ್ಟರ್ ಮ್ಯಾರೇಜ್ ಆದ 'ಕಾಮಿಡಿ ಕಿಲಾಡಿ' ಸಂಜು ಬಸಯ್ಯ; ಕುಟುಂಬದ ಒಪ್ಪಿಗೆಗೆ ಕಾಯುತ್ತಿರುವ ಜೋಡಿ
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಮಾತಾಗಿದ್ದ ಕುಳ್ಳ ಮಿಂಡ್ರಿ ಖ್ಯಾತಿಯ ಸಂಜು ಬಸಯ್ಯ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ ಜೊತೆ ಸಂಜು ಬಸಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಂಜು ಮತ್ತು ಪಲ್ಲವಿ ಜೋಡಿಯ ಫೋಟೋಗಳು ವೈರಲ್ ಆಗಿವೆ. ಅಂದಹಾಗೆ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.
ನಾಟಕ ಕಂಪನೆಯಲ್ಲಿ ಗುರುತಿಸಿಕೊಂಡಿದ್ದ ಸಂಜು ಬಸಯ್ಯ ಬಳಿಕ ಕಾಮಿಡಿ ಕಿಲಾಡಿ ಶೇಗೆ ಎಂಟ್ರಿ ಕೊಟ್ಟರು. ತನ್ನ ಅದ್ಭುತ ಪ್ರತಿಭೆ ಮೂಲಕವೇ ಕನ್ನಡಿಗರ ಮನೆಮಾತಾಗಿರುವ ಸಂಜು ಇದೀಗ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಸಂಜು ಮದುವೆಯಾಗಿರುವ ಹುಡುಗಿ ಪಲ್ಲವಿ ಕೂಡ ಕಲಾವಿದೆ. ಅನೇಕ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರೂ ಮದುವೆಯಾಗಿ ನಾಲ್ಕು ವಾರಗಳು ಕಳೆದಿವೆ. ಇಬ್ಬರ ಮದುವೆಗೆ ಕುಟುಂಬದವರ ಒಪ್ಪಿಗೆ ಸಿಕ್ಕಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಕುಬುಂಬದವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ಮದುವೆಯಾಗಲು ಸಜ್ಜಾಗಿದೆ ಈ ಜೋಡಿ.
ಹನಿಮೂನ್‌ಗೆ ಎಲ್ಲಿ ಹೋಗ್ತೀರಾ ಅಂತ ಕೇಳಿದ್ರೆ ಬಾತ್‌ರೂಮ್‌ಗೆ ಹೋಗಬೇಕು ಬಿಟ್ಟುಬಿಡಿ ಎಂದ ಅಭಿಷೇಕ್ ಅಂಬರೀಶ್!
ಈ ಬಗ್ಗೆ ಸಂಜು ಬಸಯ್ಯ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
'ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ' ಎಂದು ಹೇಳಿದ್ದಾರೆ.
Matte Maduve Review: ನಟ, ನಟಿಯ ಲವ್ವು, ಲೈಫು ಮತ್ತು ಮೀಡಿಯಾ ಹೈಪು
'ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ, ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ' ಎಂದು ಬರೆದುಕೊಂಡಿದ್ದಾರೆ.
