ನಟಿ ಜ್ಯೋತಿ ರೈ ತಮ್ಮ ಮುಂದಿನ ಚಿತ್ರ 'ಕಿಲ್ಲರ್' ಚಿತ್ರಕ್ಕಾಗಿ ಹೇರ್ ಸ್ಟೈಲಿಸ್ಟ್ ಮತ್ತು ಮೇಕಪ್ ಆರ್ಟಿಸ್ಟ್‌ಗಳನ್ನು ಹುಡುಕುತ್ತಿದ್ದಾರೆ. ಡಿಸೆಂಬರ್ 9 ರಿಂದ 20 ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ಚಿತ್ರೀಕರಣಕ್ಕೆ ಸೇರಲು ಆಸಕ್ತರು ಅರ್ಜಿ ಸಲ್ಲಿಸಬಹುದು.

ಸೋಶಿಯಲ್‌ ಮೀಡಿಯಾದ ಹಾಟ್‌ ಬ್ಯೂಟಿ ಜ್ಯೋತಿ ರೈ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆಯೂ ಅವರು ತಮ್ಮ ಇನ್ಸ್‌ಟಾಗ್ರಾಮ್‌ ಅಭಿಮಾನಿಗಳಿಗೆ ಚಂದನೆಯ ಫೋಟೋ ಪೋಸ್ಟ್‌ ಮಾಡೋದನ್ನ ಮಾತ್ರ ನಿಲ್ಲಿಸೋದಿಲ್ಲ. ಎರಡು ದಿನಗಳ ಹಿಂದೆ ಯಾವುದೇ ಡಾನ್ಸ್‌ ಅಭ್ಯಾಸ ಮಾಡದೇ ಸೊಂಟ ಬಳುಕಿಸೋ ವಿಡಿಯೋ ಪೋಸ್ಟ್‌ ಮಾಡಿದ್ದ ಸೀರಿಯಲ್‌ಗಳ ಗೌರಮ್ಮ, ಈಗ ಮತ್ತೊಂದು ಹೊಸ ಆಫರ್‌ ನೀಡಿದ್ದಾರೆ. ಹಾಗಂತ ಇದು ಅವರ ಅಭಿಮಾನಿಗಳಿಗೆ ಮಾತ್ರವಲ್ಲ. ನಿಜವಾಗಿಯೂ ಕೆಲಸದ ನಿರೀಕ್ಷೆ ಇದ್ದವರೂ ಕೂಡ ಅವರ ಆಫರ್‌ಅನ್ನು ಒಮ್ಮೆ ಪರಿಶೀಲನೆ ಮಾಡಬಹುದು. ಇನ್ಸ್‌ಟಾಗ್ರಾಮ್‌ನ ಸ್ಟೋರೀಸ್‌ನಲ್ಲಿ ಅವರು ಈ ಅನೌನ್ಸ್‌ಮೆಂಟ್‌ ಹಾಕಿದ್ದಾರೆ. ಅವರ ಮುಂದಿನ ಚಿತ್ರ ಕಿಲ್ಲರ್‌ನ ಭಾಗವಾಗಲು ಹೇರ್‌ ಸ್ಟೈಲಿಸ್ಟ್‌ ಹಾಗೂ ಮೇಕಪ್‌ ಆರ್ಟಿಸ್ಟ್‌ ಬಗ್ಗೆ ಅವರು ಪೋಸ್ಟ್‌ ಮಾಡಿದ್ದಾರೆ.

'ನಮಗೆ ಮೇಕಪ್‌ ಆರ್ಟಿಸ್ಟ್‌ ಹಾಗೂ ಹೇರ್‌ ಸ್ಟೈಲಿಸ್ಟ್‌ ಅಗತ್ಯವಿದೆ. ಯಾರಾದರೂ ವೃತ್ತಿಪರರಿದ್ದರೆ, ನಾನು ಪ್ರತಿಭಾನ್ವಿತ ಹಾಗೂ ಅನುಭವಿ ಮೇಕಪ್‌ ಆರ್ಟಿಸ್ಟ್‌ ಹಾಗೂ ಹೇರ್‌ ಸ್ಟೈಲಿಸ್ಟ್‌ ಹುಡುಕಾಟದಲ್ಲಿದ್ದೇನೆ. ಸಖತ್‌ ಆಗಿರೋ ಶೂಟ್‌ ಶೆಡ್ಯುಲ್‌ನಲ್ಲಿ ಅವರು ನನ್ನೊಂದಿಗೆ ಭಾಗವಹಿಸಬೇಕಿದೆ. ಅದರ ಡಿಟೇಲ್‌ಗಳು ಇಲ್ಲಿವೆ' ಎಂದು ಅವರು ಬರೆದುಕೊಂಡಿದ್ದಾರೆ. ಡಿಸೆಂಬರ್‌ 9 ರಿಂದ 20ರವರೆಗೆ ಈ ಕೆಲಸ ಇರಲಿದೆ ಎಂದು ತಿಳಿಸಿದ್ದು, ಹೈದರಾಬಾದ್‌ನಲ್ಲಿ ಕೆಲಸ ಇರಲಿದೆ. ಶೂಟ್‌ ಶೆಡ್ಯುಲ್‌ ಪ್ರಕಾರ ಕೆಲಸದ ಟೈಮಿಂಗ್‌ ಇರಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಸಾಕಷ್ಟು ಕನ್ನಡ ಹಾಗೂ ತೆಲುಗು ಸೀರಿಯಲ್‌ಗಳಲ್ಲಿ ನಟಿಸಿ ಫೇಮಸ್‌ ಆಗಿರುವ ಜ್ಯೋತಿ ರೈ, ನಿರ್ದೇಶಕ ಸುಕ್ಕು ಪೂರ್ವಜ್‌ ಅವರನ್ನು ವಿವಾಹವಾಗಿ ಹೈದರಾಬಾದ್‌ನಲ್ಲಿ ಸೆಟಲ್‌ ಆಗಿದ್ದಾರೆ. ಜ್ಯೋತಿ ರೈಗೆ ಈಗ ಅಂದಾಜು 40 ವರ್ಷ ವಯಸ್ಸಾದರೂ ಯಾವ ಯುವ ನಟಿಗಿಂತಲೂ ಕಡಿಮೆ ಇಲ್ಲದಷ್ಟು ಮಾದಕವಾಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಬೋಲ್ಡ್‌ ಫೋಟೋಗಳ ಮೂಲಕ ಅಭಿಮಾನಿಗಳ ಎದೆಯಲ್ಲಿ ಮಿಂಚು ಹರಿಸುತ್ತಿರುವ ನಟಿ.

ಇತ್ತೀಚೆಗೆ ಆಕೆ ಹಂಚಿಕೊಂಡ ಫೋಟೋಗೆ ಪತಿ ಸುಕ್ಕು ಪೂರ್ವಜ್‌ ಕೂಡ ಮುದ್ದಾಗಿ ಕಾಮೆಂಟ್‌ ಮಾಡಿದ ಸುದ್ದಿ ವೈರಲ್‌ ಆಗಿತ್ತು. ಅದರೊಂದಿಗೆ ಅವರು ಜೀವನದ ಕುರಿತಾಗಿ ಕೆಲವೊಂದು ಕೋಟ್ಸ್‌ ಶೇರ್‌ ಮಾಡಿಕೊಂಡಿದ್ದು ಕುತೂಹಲ ಹುಟ್ಟಿಸಿತ್ತು. ಕೆಲವೊಮ್ಮೆ ಜೀವನವನ್ನು ಬದಲಾಯಿಸುವ ಆ ಒಂದು ವರ್ಷವನ್ನು ಪಡೆಯೋದಕ್ಕೆ 10 ವರ್ಷಗಳೇ ಬೇಕಾಗುತ್ತೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಇಂಟರ್ನೆಟ್ ನೋಡಿ ಮೋಸ ಹೋಗಬೇಡಿ, ಯಾರೂ ಕೂಡ ಅವರ ಸೋಲನ್ನು ಪೋಸ್ಟ್ ಮಾಡೋದಕ್ಕೆ ಇಷ್ಟ ಪಡೋದಿಲ್ಲ ಎಂದು ಬರೆದುಕೊಂಡಿದ್ದರು.

ಕೈಯಲ್ಲಿ ಕೊಡಲಿ ಹಿಡಿದು 'ಕಿಲ್ಲರ್' ಆದ ಜ್ಯೋತಿ ರೈ, ಬ್ಯೂಟಿ ಲುಕ್‌ಗೆ ಫ್ಯಾನ್ಸ್‌ ಬೋಲ್ಡ್‌!‌

ಕನ್ನಡ ಕಿರುತೆರೆ ಬಳಿ, ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ನಟಿ, ನಂತರ ಕನ್ನಡ ಸಿನಿಮಾ, ತೆಲುಗು ವೆಬ್ ಸೀರೀಸ್ (Telugu Webseries) ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಅದರ ಜೊತೆಗೆ ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಎರಡನೇ ಬಾರಿ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದರು. 

'ಗಂಡನೊಂದಿಗೆ ಹೀಗೆ ವರ್ಕ್ಔಟ್ ಮಾಡಿದ್ರೆ ನನ್ನಂತೆ ಫಿಟ್ ಆಗ್ತೀರಿ..‌' ವಿಡಿಯೋ ಮಾಡಿ ತೋರಿಸಿದ‌ ಜ್ಯೋತಿ ರೈ!