ಕಂಠಪೂರ್ತಿ ಕುಡೀರಿ... ಲವ್​ ಶುರು ಹಚ್ಕೊಳಿ... ಏನಪ್ಪಾ ಇದು ಧಾರಾವಾಹಿಗಳ ಗೋಳು?

ಸೀರಿಯಲ್​ಗಳಲ್ಲಿ ಗಂಡ-ಹೆಂಡ್ತಿ ನಡುವೆ ಪ್ರೀತಿ ಹುಟ್ಟಲು ಕುಡಿಯುವುದು ಅನಿವಾರ್ಯನಾ? ಏನಿದು ಟ್ರೆಂಡ್​?
 

Is drinking necessary for love to develop between husband and wife in serials

ಈಗಿನ ಸೀರಿಯಲ್​ಗಳಲ್ಲಿ ಗಂಡ-ಹೆಂಡತಿ ನಡುವೆ ದೈಹಿಕ ಸಂಬಂಧ ಇಲ್ಲದೇ ದಾಂಪತ್ಯ ಜೀವನ ಶುರುವಾಗುವುದನ್ನು ತೋರಿಸುವುದು ಮಾಮೂಲಾಗಿದೆ. ಆದರೆ, ಪತಿ-ಪತ್ನಿ ನಡುವೆ ಪ್ರೀತಿಯ ನಿವೇದನೆ ಮಾಡಿಕೊಳ್ಳಲು ನಿರ್ದೇಶಕರು ಆಯ್ಕೆ ಮಾಡಿಕೊಳ್ತಿರೋ ಮಾರ್ಗ ಮಾತ್ರ ಎಣ್ಣೆ ಪಾರ್ಟಿ! ಈ ಹಿಂದೆ ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ಮತ್ತು ಗೌತಮ್​ ನಡುವೆ ಲವ್​ ಶುರುವಾದದ್ದು, ಮದ್ಯ ಸೇವನೆಯಿಂದಲೇ.  ಭೂಮಿಕಾಗೆ ಗೊತ್ತಿಲ್ಲದೇ  2-3 ಸಲ ಡ್ರಿಂಕ್ಸ್​ ಕೊಟ್ಟಾಗ ಆಕೆ ಪ್ರೀತಿ ನಿವೇದನೆ ಮಾಡಿಕೊಂಡಿದ್ದಳು.  ಪತಿ-ಪತ್ನಿಯನ್ನು ಒಂದು ಮಾಡಲು, ಪತಿಯ ಬಗ್ಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿ ಅವನ ಮನಸ್ಸನ್ನು ಪರಿವರ್ತನೆ ಮಾಡುವ ಸಂಬಂಧ ಈ ಸನ್ನಿವೇಶಗಳನ್ನು ಪದೇ ಪದೇ ತುರುಕಲಾಗಿತ್ತು. ಇದನ್ನು ತಮಾಷೆಯ ರೂಪದಲ್ಲಿ ಮಾಡಿದರೂ, ಪದೇ ಪದೇ ಅದನ್ನೇ ತೋರಿಸುವುದು ತುಂಬಾ ಅಸಭ್ಯ ಎನಿಸುವ ಹೊತ್ತಿನಲ್ಲಿಯೇ ಇದೇ ತಂತ್ರವನ್ನು  ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿಯೂ ತೋರಿಸಲಾಗಿತ್ತು.

 
ಈ ಸೀರಿಯಲ್​ನಲ್ಲಿ ಲಕ್ಷ್ಮೀ ಕೂಡ ಕೂಲ್​ಡ್ರಿಂಕ್ಸ್​ನಲ್ಲಿ ಮದ್ಯ ಸೇವಿಸಿದ್ದು ಗೊತ್ತಾಗದೇ ಕುಡಿದಿದ್ದಳು. ಆಮೇಲೆ ತನ್ನ ಗಂಡ ವೈಷ್ಣವ್​ಗೆ ಪ್ರೀತಿಯ ಕುರಿತು ಹೇಳಿದ್ದಳು. ತನ್ನ ಪತ್ನಿ ತನ್ನನ್ನು ಇಷ್ಟೆಲ್ಲಾ ಲವ್​ ಮಾಡ್ತಾ ಇದ್ದಾಳೆ ಎಂದು ಗಂಡನಿಗೆ ತಿಳಿದದ್ದು ಅವಳು ಡ್ರಿಂಕ್ಸ್​ ಮಾಡಿ ಮಾತನಾಡಿದ ಮೇಲೆ. ಇಲ್ಲಿ ಸ್ವಲ್ಪ ಕಥೆ ಭಿನ್ನವಾಗಿದೆ ಅಷ್ಟೇ.  ಆದರೆ ಪತ್ನಿ ಎಷ್ಟು ಲವ್​ ಮಾಡ್ತಾಳೆ ಎಂದು ತಿಳಿಯಲು ಈ ರೀತಿ ಹೆಣ್ಣುಮಕ್ಕಳಿಗೆ ಡ್ರಿಂಕ್ಸ್​ ಕುಡಿಸುವುದು ಅನಿವಾರ್ಯನಾ ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೆ ಇದೀಗ ಬ್ರಹ್ಮಗಂಟು ಸೀರಿಯಲ್​ನಲ್ಲಿಯೂ ಇದೇ ಡ್ರಿಂಕ್ಸ್​ ದೃಶ್ಯ ತುರುಕಲಾಗಿದೆ. ಅಲ್ಲಿ ಹೆಂಡತಿಯರಿಗೆ ಕುಡಿಸಿದ್ದರೆ, ಇಲ್ಲಿ ಗಂಡ ಚಿರುಗೆ ಕುಡಿಸಲಾಗಿದೆ.

ಭಾಗ್ಯಲಕ್ಷ್ಮೀ ಸೀರಿಯಲ್​ ಅಮ್ಮ- ಮಗಳು ಭಾಗ್ಯಾ-ತನ್ವಿ ಭರ್ಜರಿ ರೀಲ್ಸ್​ಗೆ ಅಭಿಮಾನಿಗಳು ಫಿದಾ

ಸೌಂದರ್ಯಳ ಕುತಂತ್ರದಿಂದ ಚಿರು ಮಾಡಿದ್ದ ಡಿಸೈನ್​ ರಿಜೆಕ್ಟ್​ ಆಗಿತ್ತು. ಇದರ ಆರೋಪ ದೀಪಾಳ ಮೇಲೆ ಬಂದಿತ್ತು. ಆದರೆ ದೀಪಾ ಆ ಪಾರ್ಟಿಗಳ ಮನಸ್ಸನ್ನು ಒಲಿಸಿ, ಆ ಪ್ರಾಜೆಕ್ಟ್​ ಚಿರುಗೆ ಸಿಗುವ ಹಾಗೆ ಮಾಡಿದಳು. ಇದರಿಂದ ಚಿರುಗೆ ದೀಪಾಳ ಮೇಲೆ ಪ್ರೀತಿ ಹುಟ್ಟಿದೆ. ಆದರೆ ಗಂಡ-ಹೆಂಡತಿ ಒಟ್ಟಿಗೇ ಇರುವುದನ್ನು ಸೌಂದರ್ಯ ಸಹಿಸುವುದಿಲ್ಲವಲ್ಲ. ಅದೇ ಕಾರಣಕ್ಕೆ ಚಿರುನ ತಲೆ ತಿರುಗಿಸುತ್ತಲೇ ಇರುತ್ತಾಳೆ. ತನ್ನ ಅತ್ತಿಗೆ ಸೌಂದರ್ಯ ಎಂಥ ಕುತಂತ್ರಿ ಎನ್ನುವುದನ್ನು ತಿಳಿಯದ ಚಿರು ಆಕೆಯನ್ನೇ ತನ್ನ ಸರ್ವಸ್ವ ಎಂದುಕೊಂಡಿದ್ದಾನೆ. ತಾಯಿಯ ಸ್ಥಾನಮಾನ ಅತ್ತಿಗೆಗೆ ನೀಡಿರುವ ಕಾರಣ, ದೀಪಾಳನ್ನು ಸದಾ ದೂಷಿಸುತ್ತಲೇ ಬಂದಿದ್ದಾನೆ.

ಆದರೆ ಒಳಗೆ ಗುಂಡು ಸೇರಿದಾಗ, ಮನಸ್ಸಿನಲ್ಲಿ ಇರುವ ಪ್ರೀತಿ ಹೊರಕ್ಕೆ ಬರುತ್ತದೆ ಎನ್ನುವ ಅರ್ಥದಲ್ಲಿ, ಚಿರುಗೆ ಕುಡಿಸಲಾಗಿದೆ. ಆಗ ಆತ ದೀಪಾಳನ್ನು ಹತ್ತಿರ ಕರೆದು ತಬ್ಬಿಕೊಂಡಿದ್ದಾನೆ. ಆರಂಭದಲ್ಲಿ ಆಕೆ ತಬ್ಬಿಬ್ಬಾದರೂಕೊನೆಗೆ ಖುಷಿಯಿಂದ ಪತಿಯನ್ನು ಆಲಂಗಿಸಿಕೊಂಡಿದ್ದಾಳೆ. ಆದರೆ ಇದು ನಶೆ ಇರುವವರೆಗೆ ಮಾತ್ರ, ನಶೆ ಇಳಿದ ಮೇಲೆ ಎಲ್ಲವೂ ಮಾಯ ಆಗುತ್ತದೆ ಎನ್ನುವುದು ತಿಳಿದಿದ್ದರೂ, ಈ ದೃಶ್ಯವನ್ನು ಸೀರಿಯಲ್​ ಪ್ರೇಮಿಗಳು ಇಷ್ಟಪಡುತ್ತಿದ್ದಾರೆ. ಕುಡಿದ ಅಮಲಿನಲ್ಲಿ ಏನೇನೋ ಮಾಡಿ, ಆಮೇಲೆ ಮಗು ನನ್ನದಲ್ಲ ಅನ್ನಬೇಡಪ್ಪ ಎಂದೂ ಸಲಹೆ ಕೊಡ್ತಿದ್ದಾರೆ ನೆಟ್ಟಿಗರು. 

ನಟನೆಯಿಂದ ಸುದೀಪ್‌ ನಿವೃತ್ತಿ? ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಕಿಚ್ಚನ ಹೇಳಿಕೆ- ಹೇಳಿದ್ದೇನು ಕೇಳಿ..

Latest Videos
Follow Us:
Download App:
  • android
  • ios