Asianet Suvarna News Asianet Suvarna News

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ತಾಂಡವ್ ಊಸರವಳ್ಳಿ ಬುದ್ಧಿ ನೋಡಿ ಉಗಿದು ಉಪ್ಪಿನ‌ಕಾಯಿ ಹಾಕ್ತಿರೋ ವೀಕ್ಷಕರು!

ಮೊನ್ನೆ ತಾನೇ ತನ್ನ ಮೂವತ್ತೇಳನೇ ಬರ್ತ್ ಡೇ ಆಚರಿಸಿಕೊಂಡ ನಟ ಸುದರ್ಶನ್‌ಗೆ ಸೀರಿಯಲ್‌ನಲ್ಲಿ ಮಾತ್ರ ಹಿಗ್ಗಾಮುಗ್ಗಾ ಝಾಡಿಸ್ಕೊಳ್ಳೋದು ತಪ್ತಿಲ್ಲ. ಇವರು ನಟಿಸುತ್ತಿರೋ ತಾಂಡವ್ ಪಾತ್ರದ ಕಂತ್ರಿ ಬುದ್ಧಿಗೆ ಜನ ಉಗಿದು ಉಪ್ಪಿನ್‌ಕಾಯಿ ಹಾಕ್ತಿದ್ದಾರೆ.

In Bhagyalakshmi serial Tandav in trouble
Author
First Published Sep 21, 2023, 1:01 PM IST

ಬಾಗ್ಯಲಕ್ಷ್ಮೀ ಸೀರಿಯಲ್ ತಾಂಡವ್ ಸದ್ಯ ಫಚೀತಿ ಪುಟ್ಟ ಆಗ್ಬಿಟ್ಟಿದ್ದಾನೆ. ಶ್ರೇಷ್ಠಳ ವಿಚಾರಕ್ಕೆ ಮಾಡಬಾರದ್ದೆಲ್ಲ ಮಾಡಿದ ಕಾರಣ ಈಗ ಆಗಬಾರದ್ದೆಲ್ಲ ಆಗ್ತಿದೆ. ತನ್ನ ಧರ್ಮಪತ್ನಿ ಭಾಗ್ಯಗಳನ್ನು ಮನೆಯಿಂದ ಆಚೆ ಹಾಕಿ ಶ್ರೇಷ್ಠ ಜೊತೆ ಬದುಕಬೇಕು ಅನ್ನೋ ದುರಾಸೆ ತಾಂಡವ್‌ದು. ಹಾಗಂತ ಈ ಪುಣ್ಯಾತ್ಮ ಎಳೇ ಹುಡುಗ ಏನಲ್ಲ, ಮದುವೆ ಆಗಿ ಹದಿನೇಳು ವರ್ಷ ಆಗಿದೆ. ಎಬ್ಬರು ಮಕ್ಕಳೂ ಇದ್ದಾರೆ. ಈ ಟೈಮಲ್ಲಿ ತನ್ನ ಆಫೀಸಲ್ಲಿ ಕೆಲಸ ಮಾಡೋ ಶ್ರೇಷ್ಠ ಜೊತೆ ಆಕರ್ಷಣೆಯಲ್ಲಿ ಬಿದ್ದು ಮಾಡಬಾರದ ಕೆಲಸ ಮಾಡೋ ಹಾಗಾಗಿದೆ. ಸದ್ಯ ಈತನ ಡವ್ ಶ್ರೇಷ್ಠಾಳ ಮನೆಯವರಿಗೆ ಈ ವ್ಯಕ್ತಿಗೆ ಮದುವೆ ಆಗಿರೋ ವಿಷಯ ಗೊತ್ತಿಲ್ಲ. ಮಗಳ, ತಾಂಡವ್‌ನ ಕಂತ್ರಿ ಬುದ್ಧೀಯೂ ತಿಳಿದಿಲ್ಲ. ಮಗಳಿಗೆ ಮದುವೆ ಮಾಡಬೇಕು ಅಂತಷ್ಟೇ ಅವರು ಯೋಚಿಸ್ತಿದ್ದಾರೆ. ಮಗಳು ತಾಂಡವ್‌ನ ಪ್ರೀತಿಸ್ತಿರೋದಾಗಿ ಹೇಳಿದಾಗ ಆತನ ಜೊತೆಗೆ ಮದುವೆ ಮಾತುಕತೆಗೂ ಮುಂದಾಗಿದ್ದಾರೆ.

ತನ್ನ ತಂದೆ ತಾಯಿ ಒತ್ತಡ ತಡೆಯಲಾರದೇ ಶ್ರೇಷ್ಠ ಅವರನ್ನು ತಾಂಡವ್ ಮನೆಗೆ ಕರೆತರುತ್ತಾಳೆ. ಮನೆಯ ಹಿಂಬಾಗಿಲಿಂದ ಹೋಗಬೇಕಾಗುತ್ತದೆ. ಹಿಂಬಾಗಿಲಿನಿಂದ ನಮ್ಮನ್ನು ಕರೆತರುವ ಶ್ರೇಷ್ಠಳ ಬಗ್ಗೆ ತಂದೆ ತಾಯಿ ಕೋಪಗೊಳ್ಳುತ್ತಾರೆ. ಹಿಂದೆಯಿಂದ ತಪ್ಪಿಸಿಕೊಂಡು ಬರುವ ಪರಿಸ್ಥಿತಿ (Situation) ಏನಿದೆ? ಒಮ್ಮೆ ತರುಣ್‌ಗೆ ಫೋನ್‌ ಮಾಡು ಎಂದು ಶ್ರೀವರ ಮಗಳಿಗೆ ತಾಕೀತು ಮಾಡುತ್ತಾರೆ. ಇತ್ತ ಭಾಗ್ಯ, ಮಗಳು ತನ್ವಿ ಜೊತೆ ಕಾರಿನಲ್ಲಿದ್ದ ತಾಂಡವ್‌, ಶ್ರೇಷ್ಠ ಕಾಲ್‌ ಅವಾಯ್ಡ್‌ ಮಾಡುತ್ತಾನೆ. ಆಗ ಭಾಗ್ಯ ತಾನೇ ಫೋನ್‌ ರಿಸೀವ್‌ ಮಾಡಲು ಟ್ರೈ ಮಾಡುತ್ತಾಳೆ. ನಾನೇ ನೋಡುತ್ತೇನೆ ಎಂದು ತಾಂಡವ್‌ ಕಾಲ್‌ ರಿಸೀವ್‌ ಮಾಡುತ್ತಾನೆ. ಆಕಸ್ಮಿಕವಾಗಿ ಹನಿ ಎಂಬ ಹೆಸರು ಕಾರಿನ ಸಿಸ್ಟಮ್‌ನಲ್ಲಿ ಡಿಸ್ಪ್ಲೇ (Display) ಆಗುತ್ತದೆ. ಜೊತೆಗೆ ಲೌಡ್‌ ಸ್ಪೀಕರ್‌ ಆನ್‌ ಆಗುತ್ತದೆ.

ಭಾಗ್ಯಲಕ್ಷ್ಮಿ ಧಾರವಾಹಿ ನಟನಿಗೆ ಬಾಟಲಿಯಿಂದ ಹೊಡೆದ ಅಭಿಮಾನಿಗಳು: ತಬ್ಬಿಬ್ಬಾದ ನಟ

ತಾಂಡವ್‌ ಕಾಲ್‌ ರಿಸೀವ್‌ ಮಾಡುತ್ತಿದ್ದಂತೆ ಅತ್ತ ಶ್ರೀವರ, ಅವನಿಗೆ ಹಿಗ್ಗಾಮುಗ್ಗಾ ಜಾಡಿಸುತ್ತಾರೆ. ಮನೆಗೆ ಬಂದವರನ್ನು ಹೀಗಾ ನೋಡಿಕೊಳ್ಳುವುದು ಎಂದು ಬೈಯ್ಯುವಾಗ ತಾಂಡವ್‌ ಕಾಲ್‌ ಕಟ್‌ (Call cut) ಮಾಡುತ್ತಾನೆ. ಡಿಸ್ಪ್ಲೇಯಲ್ಲಿ ಹನಿ ಎಂಬ ಹೆಸರನ್ನು ನೋಡಿ ಭಾಗ್ಯ ಶಾಕ್‌ ಆಗುತ್ತಾಳೆ. ಯಾರದು ಹನಿ, ಕಾಲ್‌ ಮಾಡಿದವರು ನಿಮಗೆ ಆ ರೀತಿ ಏಕೆ ಬಯ್ಯುತ್ತಿದ್ದಾರೆ ಎಂದು ಕೇಳುತ್ತಾಳೆ. ತಾಂಡವ್‌ ಸುಳ್ಳಿನ ಮೇಲೆ ಸುಳ್ಳು ಹೆಣೆಯುತ್ತಾನೆ. ಅವರು ನನ್ನ ಕ್ಲೈಂಟ್‌ ಬಹಳ ಕ್ಲೋಸ್‌, ಅವರ ಹೆಸರು ಹನೀಫ್‌ ಎಂದು ಸುಳ್ಳು ಹೇಳುತ್ತಾನೆ. ಆದರೆ ಭಾಗ್ಯಳಿಗೆ ತಾಯಿ ಸುನಂದಾ ಹೇಳಿದ ಮಾತು ನೆನಪಾಗುತ್ತದೆ. ತಾಂಡವ್ ಅಡ್ಡದಾರಿ ಹಿಡಿದಿರೋದನ್ನು ಸುನಂದಾ ಹೇಳಿರುತ್ತಾರೆ.

ಮತ್ತೊಂದು ಕಡೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ಬರುವ ಕುಸುಮಾ ಹಾಗೂ ಜೊತೆಯಲ್ಲಿದ್ದವರಿಗೆಲ್ಲಾ ಮನೆ ಒಳಗೆ ಯಾರೋ ಮಾತನಾಡುವಂತೆ ಕೇಳಿಸುತ್ತದೆ. ಗಾಬರಿಯಿಂದ ಬಾಗಿಲು ತೆಗೆದಾಗ ಅಲ್ಲಿ ಯಾರೂ ಇರುವುದಿಲ್ಲ. ಆದರೆ ಟೇಬಲ್‌ ಮೇಲಿದ್ದ ಟೀ ಕಪ್‌ ನೋಡಿ ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾರೆ. ಆ ಟೀ ಕಪ್‌ ನೋಡುವ ಕುಸುಮಾ, ನಮ್ಮ ಮನೆಯಲ್ಲಿ ಇಷ್ಟು ಕೆಟ್ಟದಾಗಿ ಟೀ ಮಾಡುವುದಿಲ್ಲ, ಯಾರೋ ಬಂದು ಹೋಗಿದ್ಧಾರೆ ಎಂದು ಅನುಮಾನ ವ್ಯಕ್ತಪಡಿಸುತ್ತಾಳೆ. ಮತ್ತೆ ಸುನಂದಾ ತಾಂಡವ್‌ ವಿಚಾರ ಎತ್ತುತ್ತಾಳೆ. ನಿಮ್ಮ ಮಗ ಮನೆಯಲ್ಲೇ ಇದ್ದರೂ ನಿಮ್ಮನ್ನು ನೋಡಲು ಏಕೆ ಬರಲಿಲ್ಲ? ಮಗಳನ್ನು ಏಕೆ ರೂಮ್‌ನಲ್ಲಿ ಕೂಡಿ ಹಾಕಿದ್ದ ಎಂದು ಪ್ರಶ್ನಿಸುತ್ತಾಳೆ. ಸುನಂದಾ ಮಾತಿಗೆ ದನಿಗೂಡಿಸುವ ಧರ್ಮರಾಜ್‌, ತಾಂಡವ್‌ ನಮಗೆ ತಿಳಿಯದಂತೆ ಏನೋ ಮಸಲತ್ತು ನಡೆಸುತ್ತಿದ್ದಾನೆ. ನನಗೆ ಹಾರ್ಟ್‌ ಅಟ್ಯಾಕ್‌ ಆದಾಗಲೂ ಅವನು ಬಂದಿರಲಿಲ್ಲ ಎನ್ನುತ್ತಾನೆ. ಇಬ್ಬರ ಮಾತು ಕೇಳಿ ಕುಸುಮಾಗೆ ಮನಸಿನಲ್ಲಿ ಏನೋ ಕಳವಳ. ನಿನ್ನಿಂದ ನಾನು ಬೀಗತ್ತಿಯಿಂದ ಮಾತು ಕೇಳುವಂತೆ ಆದೆ ನೀನು ಬಾ ನಿನ್ನ ಜನ್ಮ ಜಾಲಾಡುತ್ತೇನೆ ಎಂದು ಮನಸಿನಲ್ಲೇ ಬೈದುಕೊಳ್ಳುತ್ತಾಳೆ

ತಾಂಡವ್ ಮನೆಗೆ ಬರುತ್ತಿದ್ದಂತೆ ಕುಸುಮಾಳಿಂದ ಬೈಗುಳದ ಸುರಿಮಳೆ. ಮನೆಯೊಳಗೆ ಇರುವ ಶ್ರೇಷ್ಠ ಇವರ ಕಣ್ಣಿಗೆ ಬೀಳ್ತಾಳ ಅಥವಾ ಎಸ್ಕೇಪ್ ಆಗ್ತಾಳ? ತಾಂಡವ್ ಸುಳ್ಳಿನ ಜರ್ನಿ ಹೇಗೆ ಮುಂದುವರಿಬಹುದು ಅನ್ನುವುದು ಸದ್ಯದ ಕುತೂಹಲ. ಆದರೆ ಜನ ಮಾತ್ರ ತಾಂಡವ್ ಊಸರವಳ್ಳಿ ಬುದ್ಧಿ ನೋಡಿ ಉಗಿದು ಉಪ್ಪು ಹಾಕ್ತಿದ್ದಾರೆ.

ರಾಮಾಚಾರಿ ಧಾರವಾಹಿ: 'ಚಾರು'ಗೆ ಅಳುವ ಪಾತ್ರ ಬೇಡ, ಸರಪಟಾಕಿ ಪಾತ್ರ ಕೊಡಿ! ಅಭಿಮಾನಿಗಳ ಡೈರೆಕ್ಟ್‌ ಹಿಟ್

Follow Us:
Download App:
  • android
  • ios