ಮತ್ತೆ ಕಿರುತೆರೆಗೆ ಕಾಲಿಟ್ಟ ನಟಿ ಮಯೂರಿ ಕ್ಯಾತರಿ. ಮಗ ಮತ್ತು ಕೆಲಸವನ್ನು ಹೇಗೆ ಮ್ಯಾನೇಜ್ ಮಾಡೋದು ..... 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಜುಲೈ 8ರಿಂದ ನನ್ನ ದೇವ್ರು ಧಾರಾವಾಹಿ ಪ್ರಸಾರವಾಗಲಿದೆ. ಈಗಾಗಲೆ ರಿಲೀಸ್ ಆಗಿರುವ ಎರಡು ಮೂರು ಪ್ರೋಮೋಗಳು ಸಖತ್ ಸುದ್ದಿ ಮಾಡುತ್ತಿದೆ. ಮಗ ಹುಟ್ಟಿದ ಮೇಲೆ ಮಯೂರಿ ಕ್ಯಾತರಿ ಸೀರಿಯಲ್ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ನನ್ನನ್ನು ಲಾಂಚ್ ಮಾಡಿದ ವಾಹಿನಿಯಲ್ಲಿ ಮತ್ತೆ ಕಮ್ ಬ್ಯಾಕ್ ಮಾಡುತ್ತಿರುವ ಖುಷಿ ಇದೆ ಎಂದಿದ್ದಾರೆ ನಟಿ.

ಪ್ರತಿಯೊಂದು ಹೆಣ್ಣಿನ ಜೀವನದಲ್ಲೂ ತಾಯಿತನ ಬ್ಯೂಟಿಫುಲ್ ಹಂತವಾಗಿರುತ್ತದೆ. ಪ್ರೆಗ್ನೆಂಟ್ ಆಗಿದ್ದಾಗ ನಾನು ತುಂಬಾ ದಪ್ಪ ಕೂಡ ಆಗಿದ್ದ ಹಾಗಂತ ನೋಡೋಕೆ ಚೆನ್ನಾಗಿ ಕಾಣಿಸುವುದಿಲ್ಲ ಅನ್ನೋ ಯೋಚನೆ ಬಂದಿಲ್ಲ ಏಕೆಂದರೆ ನನ್ನ ಬದಲಾವಣೆಗಳನ್ನು ನಾನು ಗೌರವಿಸಿದ್ದೀನಿ. ಈಗಲೂ ನನಗೆ ಸ್ಟ್ರೆಚ್‌ ಮಾರ್ಕ್‌ಗಳು ಇದೆ ಅದನ್ನು ನಾನು ನೋಡಿ ಖುಷಿ ಪಡುತ್ತೀನಿ ಏಕೆಂದರೆ ಅದು ಒಂದು ಒಳ್ಳೆಯ ನೆನಪು. ಕೆಲವು ದಪ್ಪನೇ ಆಗಲ್ಲ ಕೆಲವರು ದಪ್ಪ ಆಗುತ್ತಾರೆ...ಅದೆಲ್ಲಾ ಅವರು ಬಂದಿರುವ ಕುಟುಂಬದ ಮೇಲೆ ಹೋಗುತ್ತದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಯೂರಿ ಮಾತನಾಡಿದ್ದಾರೆ.

'ನನ್ನ ಬಾಣಂತನವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ..ಕೆಲವು ತಿಂಗಳ ನಂತರ ನಮ್ಮ ದೇಹ ಮೊದಲಿನಂತೆ ಆಗುತ್ತದೆ ಎನ್ನುತ್ತಾರೆ ಅದು ನಿಜವೇ. ನಾನು ಬದಲಾಗಬೇಕು ಎಂದು ದೇಹದ ಮೇಲೆ ಒತ್ತಡ ಹಾಕಿಲ್ಲ ಆದರೆ ಆರೋಗ್ಯದ ಮೇಲೆ ಗಮನ ಹರಿಸಿದಾಗ ಎಲ್ಲವೂ ಮೊದಲಿನಂತೆ ಆಗಿದೆ. ವರ್ಕೌಟ್ ಮತ್ತು ಯೋಗದಲ್ಲಿ ಪಳಗಿರುವ ಕಾರಣ ಅದು ನನಗೆ ಸಹಾಯ ಮಾಡಿದೆ. ತಪ್ಪದೆ ಡಯಟ್ ಫಾಲೋ ಮಾಡುತ್ತೀನಿ. ಚಂದ ಕಾಣಬೇಕು ಅನ್ನೋದಕ್ಕಿಂತ ನನ್ನ ಆರೋಗ್ಯ ಕಾಪಾಡಿಕೊಳ್ಳಬೇಕು ಅನ್ನೋದು ಮುಖ್ಯವಾಗುತ್ತದೆ' ಎಂದು ಮಯೂರಿ ಕ್ಯಾತರಿ ಹೇಳಿದ್ದಾರೆ.

ನೆಗೆಟಿವ್ ಕಾಮೆಂಟ್‌ಗೆ ಯಾವಾಗ ರಿಯಾಕ್ಟ್ ಮಾಡುತ್ತೀವಿ ಅಂದ್ರೆ ನಾವು ಅದರ ಬಗ್ಗೆ ತಲೆ ಕೆಡಿಸಿಕೊಂಡಾ. ಆ ಕ್ಷಣಕ್ಕೆ ಈ ರೀತಿ ಕಾಮೆಂಟ್ ಮಾಡಬಾರದಿತ್ತು ಅನ್ಸುತ್ತೆ ಆದರೆ ತಕ್ಷಣವೇ ನಾನು ಅದನ್ನು ನೆಗಲೆಕ್ಟ್ ಮಾಡುತ್ತೀನಿ ಎಂದಿದ್ದಾರೆ ಮಯೂರಿ.