ನಟ ಸರಿಗಮ ವಿಜಿ ಇನ್ನಿಲ್ಲ: ಹಿರಿಯ ನಟನ ಹೆಸರಲ್ಲಿ ಸರಿಗಮ ಸೇರಿಕೊಂಡಿದ್ದು ಹೇಗೆ?
ಹಿರಿಯ ನಟ ಸರಿಗಮ ವಿಜಿ ಅವರು 76 ನೇ ವಯಸ್ಸಿನಲ್ಲಿ ನಿಧನರಾದರು. 'ಸಂಸಾರದಲ್ಲಿ ಸರಿಗಮ' ನಾಟಕದ ಮೂಲಕ ಖ್ಯಾತಿ ಪಡೆದ ಅವರು, 269 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಬೆಂಗಳೂರು (ಜ.15): ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ವಿಜಿ ಅಲಿಯಾಸ್ ಸರಿಗಮ ವಿಜಿ ಬುಧವಾರ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕನ್ನಡದ ಹಿರಿಯ ನಟ, ರಂಗಕರ್ಮಿಯಾಗಿದ್ದ ವಿಜಿ ಅವರ ಹೆಸರಲ್ಲಿ ಸರಿಗಮ ಅನ್ನೋದು ಸೇರಿಕೊಂಡಿದ್ದೇ ಬಹಳ ವಿಶೇಷ. ಸಾಮಾನ್ಯವಾಗಿ ಸಿನಿಮಾ ಸ್ಟಾರ್‌ಗಳು, ಡೈರೆಕ್ಟರ್‌ಗಳು ತಾವು ನಟಿಸಿದ ಸಿನಿಮಾ ಸೂಪರ್‌ಹಿಟ್ ಆದಾಗ ಆ ಸಿನಿಮಾದ ಹೆಸರನ್ನು ತಮ್ಮ ಹೆಸರಿನಿಂದ ಇರಿಸಿಕೊಳ್ಳುತ್ತಾರೆ. ದುನಿಯಾ ವಿಜಿ, ದುನಿಯಾ ಸೂರಿ, ಉಗ್ರಂ ಮಂಜು ಇಂಥ ಹೆಸರುಗಳಿಂದಲೇ ಫೇಮಸ್ ಆದವರು.ಆದರೆ, ಸರಿಗಮ ವಿಜಿ ಹೆಸರಿನ ಆರಂಭದಲ್ಲಿ ಇರುವ ಸರಿಗಮ ಅವರ ಯಾವುದೇ ಲೈಫ್ ಕೊಟ್ಟ ಹಿಟ್ ಸಿನಿಮಾದ ಹೆಸರಲ್ಲ.
ಸಂಸಾರದಲ್ಲಿ ಸರಿಗಮ ಎನ್ನುವ ನಾಟಕದಲ್ಲಿ ಇವರು ನಟಿಸುತ್ತಿದ್ದರು. ಈ ನಾಟಕ ಎಷ್ಟು ಸೂಪರ್‌ಹಿಟ್ ಪ್ರದರ್ಶನ ಕಂಡಿತ್ತೆಂದರೆ. ಈ ನಾಟಕದ ಹೆಸರನ್ನೇ ತಮ್ಮ ಹೆಸರಿನ ಮುಂದೆ ಇರಿಸಿಕೊಂಡರು.
ಈ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದ ಅವರು, 'ನಾನು ಎನ್‌ಜಿಎಫ್‌ನಲ್ಲಿ ಇದ್ದಾಗ ಈ ನಾಟಕವನ್ನು ಬರೆದಿದ್ದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲ ಪ್ರದರ್ಶನವಿತ್ತು. ದೊಡ್ಡ ಮಟ್ಟದಲ್ಲಿ ಯಶ್ಸಸು ಕಂಡಿತು. 2ನೇ ನಾಟಕ ಟೌನ್‌ಹಾಲ್‌ನಲ್ಲಿ ಮಾಡಿದೆ. ಅದಕ್ಕೂ ಉತ್ತಮ ರೆಸ್ಪಾನ್ಸ್ ಬಂತು. ದಿನದಿಂದ ದಿನಕ್ಕೆ ಈ ನಾಟಕ ಫೇಮಸ್ ಆಗುತ್ತಲೇ ಹೋಯಿತು. ಆ ನಾಟಕದ ವಿಶೇಷತೆ ಏನೆಂದರೆ, ಅದರಲ್ಲಿ ದಿನನಿತ್ಯದ ಜಂಜಾಟಗಳು. ಲವ್ ಮ್ಯಾರೇಜ್ ಹಾಗೂ ಅರೇಂಜ್ಡ್ ಮ್ಯಾರೇಜ್‌ನಲ್ಲಿ ಗಂಡ-ಹೆಂಡತಿ ಹೇಗಿರುತ್ತಾರೆ ಅನ್ನೋದು ಆಗಿತ್ತು' ಎಂದಿದ್ದರು.
ಗಂಡ-ಹೆಂಡತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಂಸಾರ ಮಾಡಿದರೆ, ಅದು ಯಾವುದೇ ರೀತಿಯ ಮದುವೆಯಾಗಿರಲಿ ಸಕ್ಸಸ್ ಆಗುತ್ತದೆ ಅನ್ನೋದು ಥೀಮ್ ಆಗಿತ್ತು. ಲವ್ ಮ್ಯಾರೇಜ್ ಫೇಲ್ ಆಗುತ್ತೆ, ಅರೆಂಜ್ಡ್ ಮ್ಯಾರೇಜ್ ಸಕ್ಸಸ್ ಆಗುತ್ತೆ ಅನ್ನೋದು ಮಾತು. ಆದರೆ, ಈಗ ಹಾಗಿಲ್ಲ. ಇದೇ ನಮ್ಮ ಥೀಮ್ ಆಗಿತ್ತು. ಪೇಪರ್‌ನಲ್ಲಿ ವಿಚಾರಗಳನ್ನು ಓದಿ ಈ ನಾಟಕ ಮಾಡುತ್ತಿದ್ದೆವು. ಪ್ರತಿ ಯುಗಾದಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ಮಾಡಿ ಫ್ರೀ ಆಗಿ ತೋರಿಸುತ್ತಿದ್ದೆವು. ಸತತ 21 ವರ್ಷಗಳ ಕಾಲ ಇದರ ಪ್ರದರ್ಶನ ಮಾಡಿದ್ದೆವು. ಉಮಾಶ್ರೀ ಅವರು ಕ್ಯಾಬಿನೆಟ್ ಸಚಿವೆ ಆಗಿದ್ದಾಗ ಈ ನಾಟಕದಲ್ಲಿ ಪಾತ್ರ ಮಾಡಿದ್ದರು. ಅಂದು ಸಿಎಂ ಸಿದ್ದರಾಮಯ್ಯ ಅವರು ಗೆಸ್ಟ್ ಆಗಿದ್ದರು.
ಸ್ಯಾಂಡಲ್‌ವುಡ್‌ನ ಹಿರಿಯ ನಟ ಸರಿಗಮ ವಿಜಿ ಇನ್ನಿಲ್ಲ
ಉಮಾಶ್ರೀ, ಭವ್ಯಾ, ಸಿಹಿ ಕಹಿ ಗೀತಾ, ರೇಖಾ ದಾಸ್, ಶ್ರೀದೇವಿ, ಪ್ರಮೀಳಾ ಜೋಷಾಯ್, ಪದ್ಮಾ ವಾಸಂತಿ, ಆಶಾಲತಾರಂಥ ಕಲಾವಿದೆಯರು ಈ ನಾಟಕದಲ್ಲಿ ನಟಿಸಿದ್ದರು. ಸಿನಿಮಾದಲ್ಲೂ ಫೇಮಸ್ ಆಗಿದ್ದ ಸರಿಗಮ ವಿಜಿ 269ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಡಕೋಟಾ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ಕೊನೆಯದಾಗಿ ಅವರು ಕಾಣಿಸಿಕೊಂಡಿದ್ದರು.
ಹಿರಿಯ ನಟ ಸರಿಗಮ ವಿಜಿಗೆ ತೀವ್ರ ಅನಾರೋಗ್ಯ; ಆಸ್ಪತ್ರೆಗೆ ದಾಖಲು