Asianet Suvarna News Asianet Suvarna News

BB15: ಸುಲಭವಾಗಿ 14ಕೆಜಿ ತೂಕ ಕಳೆದುಕೊಂಡ ನಟ Rajiv Adatia ಟಿಪ್ಸ್!

ಥೈರಾಯ್ಡ್‌ ಸಮಸ್ಯೆ ಎದುರಿಸುತ್ತಿರುವ ರಾಜೀವ್‌ ತೂಕ ಕಳೆದುಕೊಂಡು ಎಷ್ಟು ಆರೋಗ್ಯವಾಗಿದ್ದಾರೆ ನೋಡಿ. ತಮ್ಮ ವೈಯ್ಟ್ ಲಾಸ್ ಜರ್ನಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು ಹೀಗೆ...

Hindi BB15 Rajiv Adatia lost 14 kg in house and says wants to reduce 10kg more  vcs
Author
Bangalore, First Published Jan 4, 2022, 2:30 PM IST
  • Facebook
  • Twitter
  • Whatsapp

ಹಿಂದಿ (Hindi) ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ (Bigg Boss 15) ಸೀಸನ್ 15ರ ಸ್ಪರ್ಧಿ ರಾಜೀವ್ ಅದಾತಿಯಾ (Rajiv Adatia) ಸಿಕ್ಕಾಪಟ್ಟೆ ಸಣ್ಣ ಆಗಿದ್ದಾರೆ. ಮನೆಯೊಳಗೆ ಹಾಸ್ಯ ಮಾಡಿಕೊಂಡು ಕ್ರೇಜಿ ಕ್ರೇಜಿ ಅಗಿ ವರ್ತಿಸುತ್ತಿದ್ದ ರಾಜೀವ್ ವೃತ್ತಿಯಲ್ಲಿ ಮಾಡೆಲ್ (Model) ಕಮ್ ಬ್ಯುಸಿನೆಸ್‌ ಮ್ಯಾನ್ (Bussinesman). ಹಲವು ವರ್ಷಗಳಿಂದ ಥೈರಾಯ್ಡ್ (Thyroid) ಎದರಿಸುತ್ತಿದ್ದು, ಬಿಗ್ ಬಾಸ್ ಒಪ್ಪಿಕೊಳ್ಳುವುದಕ್ಕೆ ಸಮಯ ತೆಗೆದುಕೊಂಡರಂತೆ ಆದರೆ ಅಲ್ಲಿಂದ ತೂಕ ಕಳೆದುಕೊಂಡು ಹೊರ ಬಂದು ತುಂಬಾನೇ ಕಾನ್ಫಿಡೆಂಟ್ (Confident) ಫೀಲ್ ಆಗುತ್ತಿದೆ, ಎಂದು ಹೇಳಿಕೊಂಡಿದ್ದಾರೆ. 

'ನನ್ನ ಹೊಸ ವರ್ಷದ ರೆಸಲ್ಯೂಶನ್‌ (Resolution) ತೂಕ ಕಳೆದುಕೊಳ್ಳುವುದು. ಬಿಗ್ ಬಾಸ್‌ ಮನೆಯಲ್ಲಿದ್ದಾಗ ನಾನು 14 ಕೆಜಿ ತೂಕ ಕಳೆದುಕೊಂಡೆ. ನನಗೆ ಥೈರಾಯ್ಡ್ ಸಮಸ್ಯೆ ಇದೆ. ಇದರಿಂದ ತೂಕದಲ್ಲಿ ತುಂಬಾನೇ ಏರು ಪೇರಾಗುತ್ತದೆ. ನನ್ನ ದೇಹದ ಬಗ್ಗೆ ನಾನೇ uncomfortable ಆಗಿದ್ದೆ. ಹೀಗಾಗಿ ಶೋ ಒಪ್ಪಿಕೊಳ್ಳಬೇಕಾ? ಬೇಡವೇ ಎಂದು ಚಿಂತಿಸುತ್ತಿದ್ದೆ. ಧೈರ್ಯ ಮಾಡಿ ಮನೆ ಪ್ರವೇಶಿಸಿದೆ. ನಾನು 14 ಕೆಜಿ ತೂಕ ಕಳೆದುಕೊಂಡೆ. ನಾನು ಇದ್ದ ತೂಕಕ್ಕಿಂತ ಮೂರು ಸೈಜ್‌ ಕಡಿಮೆ ಆಗಿರುವೆ. ನನ್ನ ವಯಸ್ಸು ಮತ್ತು ಹೈಟ್‌ಗೆ (Height) ಬೇಕಾದ ತೂಕದಲ್ಲಿರುವೆ ಈಗ. ಇದೇ ತೂಕ ಕಾಪಾಡಿಕೊಂಡು ಈ ವರ್ಷ ಇನ್ನೂ 10 ಕೆಜಿ ಇಳಿಸಬೇಕು ಎಂದುಕೊಂಡಿರುವೆ. ಇದರಿಂದ ನನ್ನ ಥೈರಾಯ್ಡ್ ಕಂಟ್ರೋಲ್‌ಗೆ ಬಂದಿದೆ. ನನ್ನನ್ನು ನಾವು ಒಪ್ಪಿಕೊಳ್ಳುವುದೇ ಈ ಶೋನಿಂದ ಕಲಿತ ಪಾಠ. ಈ ವರ್ಷ ನನ್ನನ್ನು ಹೆಚ್ಚು ಇಷ್ಟ ಪಡಬೇಕು. ಆರೋಗ್ಯದ (Health) ಕಡೆ ಗಮನ ಕೊಡಬೇಕು,' ಎಂದು ಇ-ಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಟ್ರಿಪ್‌ ಎಂಜಾಯ್ ಮಾಡುತ್ತಿರುವ Hita Chandrashekar, ಬ್ಯೂಟಿಫುಲ್ ಫೋಟೋಗಳಿವು!

ತೂಕ ಹೆಚ್ಚಾದ ಸಮಯದಲ್ಲಿ:
'ನನಗೆ ಒಂದು ವಿಚಾರದಲ್ಲಿ ನಂಬಿಕೆ ಇದೆ. ಜನರು ನಮ್ಮನ್ನು ಇಷ್ಟ ಪಡುವುದು ನಾವು ನೋಡಲು ಇರುವ ರೀತಿಯಿಂದಲ್ಲ. ನಮ್ಮಲ್ಲಿರುವ ಕಲೆಯಿಂದ. ನಮ್ಮ ವೀಕ್ಷಕರನ್ನು ನಾವು ಹೇಗೆ ಮನೋರಂಜಿಸುತ್ತೀವಿ ಎಂಬುವುದು ಮುಖ್ಯ. ಹೊರಗಡೆ ಅದೆಷ್ಟೋ ಮಂದಿ ಝಿರೋ ಸೈಜ್‌ (Zero size) ಇಲ್ಲ. ಆದರೆ ಜೀವನದಲ್ಲಿ ನೆಮ್ಮದಿಯಾಗಿದ್ದಾರೆ. ಜೀವನದಲ್ಲಿ ಎಲ್ಲರೂ ಒಮ್ಮೆ ಆದರೂ ದಪ್ಪ ಆಗೇ ಆಗುತ್ತಾರೆ. ಈಗ ಅವೆಲ್ಲಾ ನಾರ್ಮಲ್ ಅನಿಸುತ್ತಿದೆ,' ಎಂದು ರಾಜೀವ್ ಮಾತನಾಡಿದ್ದಾರೆ. 

Arjun Kapoor About Trolls: ಟ್ರೋಲ್ ಮಾಡಿದವ್ರೇ ನನ್ ಜೊತೆ ಸೆಲ್ಫಿಗೆ ಸಾಯ್ತಾರೆ ಎಂದ ನಟ

'ಬಿಗ್ ಬಾಸ್ ಮನೆ ಪ್ರವೇಶ ಮಾಡುವಾಗ ನಾನು ತುಂಬಾನೇ ಬಿಗ್ ಆಗಿದ್ದೆ. ನಾನು ತುಂಬಾ ತಿಂದು ದಪ್ಪ ಆಗಿರುವುದಲ್ಲ. ಥೈರಾಯ್ಡ್ ಸಮಸ್ಯೆಯಿಂದ ದಪ್ಪ ಆಗಿದ್ದು. ಸ್ವಲ್ಪವೇ ಸ್ವಲ್ಪ ತಿಂದರೂ ದಪ್ಪ ಆಗುತ್ತಿದ್ದೆ. ಅದು ಒಂದು ವಿಚಾರ. ನಾನು ಬಿಬಿ ಮನೆ ಪ್ರವೇಶಿಸಿದಾಗ ಫ್ರೀ ಆಗಿದ್ದೆ. ಇಲ್ಲಿಂದ ಹೊರ ಹೋದ ನಂತರ ನಾನು ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿದ್ದೆ. ಆದರೀಗ ತೂಕ ಕಳೆದುಕೊಳ್ಳುವುದರ ಹಿಂದಿರುವ ಸೀಕ್ರೆಟ್ ತಿಳಿದು ಕೊಂಡಿರುವೆ. ನಮ್ಮನ್ನು ನಾವು ಮೊದಲು ಒಪ್ಪಿಕೊಳ್ಳಬೇಕು (Self Love). ನಾವು ಫ್ರೀ ಮೈಂಡ್‌ ಹೊಂದಿರಬೇಕು. ನಮ್ಮಲ್ಲಿರುವ ಲೋಪ ದೋಷಗಳನ್ನು (Flaws) ಸಂತೋಷದಿಂದ ಒಪ್ಪಿಕೊಳ್ಳಬೇಕು. ಆಗ ನಾವು ಏನು ಮಾಡದೆಯೂ ತೂಕ ಕಡಿಮೆ ಮಾಡಿಕೊಳ್ಳಬಹುದು. ತಿನ್ನುವುದು ಅಥವಾ ವರ್ಕೌಟ್ ಮಾಡುವುದರ ಮೇಲೆ ಸಣ್ಣ ಆಗೋಲ್ಲ, ಮನಸ್ಸಿನಿಂದ ಎಷ್ಟು ಸಂತೋಷದಿಂದ ಇದ್ದೀರೋ ಅದು ಮುಖ್ಯ,' ಎಂದು ರಾಜೀವ್ ಹೇಳಿದ್ದಾರೆ.

Follow Us:
Download App:
  • android
  • ios