ಇನ್ನೇನು ದಂಪತಿ ಒಂದಾಗುವ ಹೊತ್ತಿನಲ್ಲಿಯೇ ಚಿಕ್ಕಮ್ಮ ಹಾರ್ಟ್​ ಎಟ್ಯಾಕ್​ ನಾಟಕವಾಡಿದ್ದಾಳೆ. ಗೌತಮ್​- ಭೂಮಿಕಾ ಪ್ರೀತಿ ನಿವೇದನೆಗೆ ಫುಲ್​ಸ್ಟಾಪ್​ ಬಿದ್ದಿದೆ. ಮುಂದೇನು? 

ಪತ್ನಿ ಭೂಮಿಕಾಗೆ ಹೇಗೆ ಪ್ರಪೋಸ್​ ಮಾಡ್​ಬೇಕು ಎಂದು ಗುಲಾಬಿ ಹೂವು ಹಿಡಿದು ಗೌತಮ್​ ಪ್ರಾಕ್ಟೀಸ್​ ಮಾಡುತ್ತಿದ್ದ. ಡಬಲ್​ ರೋಲ್​ನಲ್ಲಿ ಆತ ಇದನ್ನು ಪ್ರಾಕ್ಟೀಸ್​ ಮಾಡುತ್ತಿದ್ದುದನ್ನು ನೋಡಿ ಅಭಿಮಾನಿಗಳು ಪುಳಕಿತರಾಗಿದ್ದರು. ಅದೇ ಇನ್ನೊಂದೆಡೆ, ಡೈರಿಯಲ್ಲಿ ತನ್ನ ಪ್ರೀತಿಯ ವಿಷಯವನ್ನು ಬರೆದುಕೊಂಡಿರೋ ಭೂಮಿಕಾ, ಅದನ್ನು ಪತಿಗೆ ಕೊಡಲು ರೆಡಿಯಾಗಿದ್ದಳು. ಆದರೆ ಗೌತಮ್​ ಪತ್ನಿಗೆ ಪ್ರಪೋಸ್​​ ಮಾಡಲು ರೆಡಿ ಆಗ್ತಿರೋದನ್ನು ಚಿಕ್ಕಮ್ಮ ಶಕುಂತಲಾ ನೋಡಿದರೆ, ಭೂಮಿಕಾ ರೆಡಿ ಆಗ್ತಿರೋದನ್ನು ಚಿಕ್ಕಮ್ಮನ ಮಗಳು ನೋಡಿದ್ದಾಳೆ... ಅಷ್ಟೇ...

ಪತಿ-ಪತ್ನಿ ಇಬ್ಬರೂ ಪ್ರೇಮ ನಿವೇದನೆ ಮಾಡಿಕೊಂಡು ಬಿಟ್ಟರೆ ತಮ್ಮ ಬೇಳೆ ಬೇಯಲ್ಲ ಎನ್ನುವುದು ಅವರಿಗೆ ತಿಳಿದಿದೆ. ಯಾವುದೇ ಕಾರಣಕ್ಕೆ ಗಂಡ-ಹೆಂಡತಿಯನ್ನು ಒಂದು ಮಾಡಬಾರದು ಎಂದು ಪ್ಲ್ಯಾನ್​ ಮಾಡಿದ್ದಾರೆ. ಇನ್ನೇನು ಅತ್ತ ಕಡೆಯಿಂದ ಗೌತಮ್​ ಗುಲಾಬಿ ಹಿಡಿದು ಬಂದಿದ್ದಾನೆ, ಇತ್ತ ಕಡೆ ಭೂಮಿ ಡೈರಿ ಹಿಡಿದು ಬಂದಿದ್ದಾಳೆ. ಅವರಿಬ್ಬರನ್ನೂ ಒಂದು ಮಾಡಬಾರದು ಎನ್ನುವ ಕಾರಣಕ್ಕೆ ಶಕುಂತಲಾ ಹಾರ್ಟ್​ ಎಟ್ಯಾಕ್​ ನಾಟಕವಾಡಿದ್ದಾಳೆ. ಮಗಳು ಜೋರಾಗಿ ಕೂಗಿಕೊಂಡಿದ್ದಾಳೆ. ಅಲ್ಲಿಗೆ ಗುಲಾಬಿ ಹೂವು ಅಲ್ಲೇ ಎಸೆದ ಗೌತಮ್​ ಅಮ್ಮನಿಗಾಗಿ ಓಡೋಡಿ ಬಂದಿದ್ದಾನೆ. ನಾಟಕ ಸಕ್ಸಸ್​ ಆಗಿದೆ. ಪತಿ-ಪತ್ನಿ ಒಬ್ಬರನ್ನೊಬ್ಬರು ಪ್ರೀತಿ ನಿವೇದನೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂದೇನು ಎಂದು ಫ್ಯಾನ್ಸ್​ ನಿರಾಸರಾಗಿದ್ದಾರೆ. 

ಹೋಳಿ ಹಬ್ಬಕ್ಕೆ ಅಮ್ಮ-ಮಗನ ಮಿಲನ: ಮನೆಯಜಮಾನಿ ತುಳಸಿಯ ಕೀಗೊಂಚಲು ಅಭಿಯ ಕೈಯಲ್ಲಿ!

ಅಷ್ಟಕ್ಕೂ ಇದಾಗಲೇ ಗೌತಮ್​ ಮತ್ತು ಭೂಮಿಕಾ ನಡುವೆ ಪ್ರೀತಿ ಒಂದು ಹೆಜ್ಜೆ ಮುಂದಕ್ಕೇ ಹೋಗಿದೆ. ಇಲ್ಲಿಯವರೆಗೆ ಮಲ್ಲಿಗೆ ಹೂವು ಎಂದ್ರೆ ಅಲರ್ಜಿ ಅಂತಿದ್ದ ಗೌತಮ್​ ಪತ್ನಿ ಭೂಮಿಕಾಗೆ ಇಷ್ಟ ಎಂದು ಮಲ್ಲಿಗೆ ಹೂವನ್ನು ತಂದು ಕೊಟ್ಟಿದ್ದಾನೆ. ನಿಮಗೆ ಇದು ಎಂದ್ರೆ ಅಲರ್ಜಿ ಅಲ್ವಾ ಎಂದು ಭೂಮಿಕಾ ಕೇಳಿದಾಗ, ಈಗೀಗ ನಿಮಗೆ ಏನು ಇಷ್ಟವೋ, ಅದು ನನಗೂ ಇಷ್ಟ ಆಗ್ತಿದೆ, ಯಾಕೋ ಗೊತ್ತಿಲ್ಲ ಎಂದಿದ್ದಾನೆ. ಭೂಮಿಕಾ ನಾಚಿ ನೀರಾಗಿದ್ದಾಳೆ. ಮಲ್ಲಿಗೆ ಹೂವನ್ನು ಮುಡಿಸುವಂತೆ ಕೇಳಿದಾಗ, ಅಂಜುತ್ತಲೇ ಅದನ್ನು ಮುಡಿಸಿದ್ದಾನೆ ಗೌತಮ್​. ಒಟ್ಟಿನಲ್ಲಿ ಡುಮ್ಮ ಸರ್​ಗೆ ಕೊನೆಗೂ ಲವ್​ ಅಂದ್ರೇನು ಅಂತ ಗೊತ್ತಾಗೋಕೆ ಶುರುವಾಗಿದೆ ಅಂತಿದ್ದಾರೆ ಫ್ಯಾನ್ಸ್​. ಮಲ್ಲಿಗೆ ಹೂವಿನ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ನಿಮ್ಮಿಬ್ಬರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಅಂತಿದ್ದಾರೆ ಅಭಿಮಾನಿಗಳು. 

ಹಾಗೆಂದು ಗೌತಮ್​ಗೆ ಇದೇ ಮೊದಲು ಬಾರಿಯಲ್ಲ. ಹಿಂದೆಯೂ ತಾನು ಪ್ರೀತಿ ಮಾಡ್ತಿರೋದು ತಿಳಿದಿತ್ತು. ಆದರೂ ಪ್ರೀತಿ-ಗೀತಿ ಅನ್ನೋದೇ ಗೊತ್ತಿಲ್ಲದ ಗೌತಮ್​ಗೆ ಇವೆಲ್ಲಾ ಹೊಸತಾಗಿತಲ್ಲಾ! ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಳು, ಈಗೂ ಆಕೆ ನೇರವಾಗಿ ಪ್ರೀತಿಯ ಬಗ್ಗೆ ಹೇಳಿಯೇ ಇಲ್ಲ. ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಗುಲಾಬಿ ಹೂವನ್ನು ಕೊಡುವಲ್ಲಿ ಸಕ್ಸಸ್​ ಆಗ್ತಾನಾ ಎನ್ನುವ ಕುತೂಹಲ ಅಭಿಮಾನಿಗಳದ್ದು. 

ಐಸ್​ಕ್ರೀಂ ಹೇಗೆ ತಿನ್ಬೇಕು ಎನ್ನೋದನ್ನು ಹೇಳಿಕೊಟ್ಟ ಹಾಟ್​ ಬ್ಯೂಟಿ ಶೆರ್ಲಿನ್​ ಚೋಪ್ರಾ!