ಒಮ್ಮೊಮ್ಮೆ ಹೀಗೂ ಆಗುವುದು... ಸೀತಾ ರಾಮರ ಮದುವೆಗೆ ಒಪ್ಪಿಕೊಂಡು ಬಿಟ್ಲಲ್ಲಾ ವಿಲನ್​ ಭಾರ್ಗವಿ! ಆದರೆ...?

ಸೀತಾ  ಮತ್ತು ರಾಮ್​  ಮದುವೆಗೆ ಕೊನೆಗೂ ಒಪ್ಪಿಕೊಂಡು ಬಿಟ್ಟಳಾ ಭಾರ್ಗವಿ? ಇಷ್ಟು ಸುಲಭದಲ್ಲಿ ಅದು ಹೇಗೆ ಸಾಧ್ಯ? ಇದರ ಹಿಂದಿನ ಉದ್ದೇಶವೇನು? 
 

Has Bhargavi finally agreed to Seeta and Rams marriage How can it be so easy suc

ಪ್ರಿಯಾ ಮತ್ತು ಅಶೋಕ್‌ ಮದ್ವೆ ಅತ್ತ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ ಇತ್ತ ರಾಮ್‌ನ ಮದುವೆಯನ್ನೂ ನಿರ್ಧಾರ ಮಾಡುವೆ ಎಂದಿದ್ದ ಚಿಕ್ಕಮ್ಮ ಭಾರ್ಗವಿ ಚಾಂದನಿ ಬದಲು ಸೀತಾಳನ್ನೇ ಸೆಲೆಕ್ಟ್​ ಮಾಡಿದ್ದಾಳೆ!  ತನ್ನ ಹೆಸರನ್ನು ಹೇಳುತ್ತಾಳೆ ಎಂದು ಖುಷಿಪಟ್ಟಿದ್ದ  ಚಾಂದನಿಗೆ ಇಂಗು ತಿಂದ ಮಂಗನ ಅನುಭವ.  ಅದೇ ವೇಳೆ ತಾತ ಕೂಡ ನಾನು ರಾಮ್‌ನ ಮದುಮಗಳನ್ನು ನಿರ್ಧಾರ ಮಾಡಿರುವುದಾಗಿ ಹೇಳಿದ್ದ. ಆದರೆ ಭಾರ್ಗವಿ ಸೀತಾಳ ಹೆಸರನ್ನು ಹೇಳುತ್ತಿದ್ದಂತೆಯೇ ತಾತ ಕೂಡ ಖುಷಿಯಿಂದ ಸೀತಾಳನ್ನು ಒಪ್ಪಿಕೊಂಡಿದ್ದಾನೆ. ಆದರೆ ಇದು ಇಷ್ಟು ಸುಲಭವೆ? ಖಂಡಿತಾ ಇಲ್ಲ. ಇದರಲ್ಲಿ ಭಾರ್ಗವಿಯ ಕುತಂತ್ರ ಗ್ಯಾರೆಂಟಿ ಅಡಗಿದೆ. ಅಷ್ಟಕ್ಕೂ ಭಾರ್ಗವಿ ಸೀತಾಳನ್ನು ಇನ್​ಸಲ್ಟ್​ ಮಾಡುವುದಕ್ಕಾಗಿಯೇ ಹೀಗೆ ಮಾಡಿರಲಿಕ್ಕೆ ಸಾಕು ಎನ್ನುವುದು ಅಭಿಮಾನಿಗಳ ಅಭಿಮತ. ಸೀತಾಳಿಗೆ ಮಗಳು ಇರುವ ಸುದ್ದಿಯನ್ನು ಎಲ್ಲರ ಎದುರು ಬಹಿರಂಗಗೊಳಿಸಿ ಆಕೆಗೆ ಇನ್​ಸಲ್ಟ್​ ಮಾಡುವ ಪ್ಲ್ಯಾನ್​ ಹಾಕಿದ್ದಾಳೆ ಭಾರ್ಗವಿ ಎನ್ನುತ್ತಿದ್ದಾರೆ ಸೀತಾರಾಮ ಸೀರಿಯಲ್​ ಪ್ರೇಮಿಗಳು. 

ಗುಂಡಿನ ದಾಳಿ ಬಳಿಕ ಮೌನಕ್ಕೆ ಜಾರಿದ ಸಲ್ಮಾನ್​ ಖಾನ್​: ಸಹೋದರ ಅರ್ಬಾಜ್​ ಖಾನ್​ ಪ್ರತಿಕ್ರಿಯೆ ಹೀಗಿದೆ...

ಏಕೆಂದರೆ ಸೀತಾ  ಮತ್ತು ರಾಮ್​ ಒಂದಾಗುವುದು ಭಾರ್ಗವಿಗೆ ಇಷ್ಟವಿಲ್ಲ. ಅವಳದ್ದು ಏನಿದ್ದರೂ ಚಾಂದನಿ ಪಾರ್ಟಿ. ಇದರ ನಡುವೆಯೇ, ಚಾಂದನಿ ಸೀತಾಗೆ ಷರತ್ತು ಕೂಡ ಹಾಕಿದ್ದಳು. ಸೀತಾ-ರಾಮ ಒಂದಾಗುವುದನ್ನು ಚಾಂದನಿಗೆ ನೋಡಲು ಆಗುತ್ತಿಲ್ಲ. ಸೀತಾ ಸಿಕ್ಕಾಗಲೆಲ್ಲಾ ಪದೇ ಪದೇ ಹಂಗಿಸುತ್ತಲೇ ಇರುತ್ತಾಳೆ. ರಾಮ್​ ತನಗೆ ಸಿಗುವುದಿಲ್ಲ ಎಂದು ತಿಳಿದರೂ ಸೀತಾಳನ್ನು ಹೇಗಾದರೂ ಮಾಡಿ ರಾಮ್​ನಿಂದ ದೂರ ಮಾಡುವ ಯೋಚನೆ ಅವಳದ್ದು. ಅದಕ್ಕೆ ತಕ್ಕಂತೆ ಚಿಕ್ಕಮ್ಮ ಭಾರ್ಗವಿ ಕುತಂತ್ರ ಬೇರೆ. ಪ್ರಿಯಾ ಮತ್ತು ಅಶೋಕ್​ ಮದುವೆ ಮುಗಿಯುವುದರೊಳಗೆ ಅವರಿಬ್ಬರನ್ನೂ ಬೇರೆ ಮಾಡುತ್ತೇನೆ ಎಂದಿದ್ದಾಳೆ ಭಾರ್ಗವಿ. ಇದನದ್ನೇ ನಂಬಿಕೊಂಡಿದ್ದಾಳೆ ಚಾಂದನಿ. ಈ ಮಧ್ಯೆಯೇ ಸೀತಾಳಿಗೆ ರಾಮ್​ ಕೊಡಿಸಿರೋ ಸೀರೆ ಮೇಲೆ ಚಾಂದನಿ ಕಣ್ಣು ಬಿದ್ದಿದೆ. ಅದನ್ನು ತನ್ನದು ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಅದು ಸಾಧ್ಯವಾಗಿರಲಿಲ್ಲ. ಅದಕ್ಕೆ ರಾಮ್​ ಕೊಡಿಸಿದ ಸೀರೆ ನಿನಗೆ ಸಿಕ್ಕಿದೆ, ಆದರೆ ರಾಮ್​ ಸಿಗಲ್ಲ ಎಂದಿದ್ದಳು. ಮುಂದೇನು ಎನ್ನುವುದನ್ನು ಕಾದು ನೋಡಬೇಕಿದೆ. 

 

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಪ್ರಿಯಾ ಮತ್ತು ಅಶೋಕ್‌ ಮದ್ವೆ ಅತ್ತ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ ಇತ್ತ ರಾಮ್‌ನ ಮದುವೆಯನ್ನೂ ನಿರ್ಧಾರ ಮಾಡುವೆ ಎಂದಿದ್ದಾಳೆ ಚಿಕ್ಕಮ್ಮ. ಇದನ್ನು ಕೇಳಿ ಚಾಂದನಿಗೆ ಖುಷಿಯೋ ಖುಷಿ. ಅದೇ ವೇಳೆ ತಾತ ಕೂಡ ನಾನು ರಾಮ್‌ನ ಮದುಮಗಳನ್ನು ನಿರ್ಧಾರ ಮಾಡಿರುವುದಾಗಿ ಹೇಳಿದ್ದಾನೆ. ರಾಮ್‌ ಮತ್ತು ಸೀತಾ ಇಬ್ಬರೂ ಶಾಕ್‌ ಆಗಿದ್ದಾರೆ. ಸೀತಾಳನ್ನು ಪ್ರೀತಿ ಮಾಡುವುದಾಗಿ ರಾಮ್‌ ತಾತನ ಎದುರು ಎಂದಿಗೂ ಬಾಯಿ ಬಿಟ್ಟಿಲ್ಲ. ಇನ್ನು ಚಿಕ್ಕಮ್ಮನೋ ತಾತನ ತಲೆಯನ್ನು ಚಾಂದನಿ ವಿಷಯದಲ್ಲಿ ತುಂಬಿದ್ದಾಳೆ. ಅವಳಿಗೆ ಚಾಂದನಿ ಇಷ್ಟವಿಲ್ಲದಿದ್ದರೂ ಸೀತಾ ಮತ್ತು ರಾಮ್‌ರನ್ನು ದೂರ ಮಾಡುವುದು ಮಾತ್ರ ಬೇಕಿದೆ. ಇದರ ನಡುವೆಯೇ ಇಬ್ಬರ ಮದುವೆಗೆ ಒಪ್ಪಿಕೊಂಡಿದ್ದಾಳೆ. ಮುಂದೇನಾಗುತ್ತದೆ ಎನ್ನುವುದು ಈಗಿರುವ ಪ್ರಶ್ನೆ. 
 

ಬಾಲಿವುಡ್​ ಬಳಿಕ ಟಾಲಿವುಡ್​ಗೂ ಕಾಂತಾರಾ ಬೆಡಗಿ ಎಂಟ್ರಿ! ಸಪ್ತಮಿ ಗೌಡ ಹೇಳಿದ್ದೇನು?

Latest Videos
Follow Us:
Download App:
  • android
  • ios