ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ಇಂಟ್ರೆಸ್ಟಿಂಗ್ ತಿರುವುಗಳಿಗೆ ಬರವಿಲ್ಲ. ಕಷ್ಟಪಟ್ಟು ಟ್ವಿಸ್ಟ್ ನೀಡದ ಕಾರಣ ಸಹಜ ಟ್ವಿಸ್ಟ್, ತಿರುವುಗಳು ಜನರಿಗೆ ಹತ್ತಿರವಾಗುತ್ತಿವೆ.

ಇದೀಗ ಸೀರಿಯಲ್‌ನಲ್ಲಿ ಲವ್ ಫೀಲ್ ಹೆಚ್ಚಾಗಲಿದ್ದು, ಕನ್ನಡತಿಯ ಹೀರೋ ಹರ್ಷ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಎದೆಯ ಮೇಲೆ ಹರ್ಷ ಹಚ್ಚೆ ಹಾಕಿಸಿಕೊಳ್ಳುತ್ತಿದ್ದು, ಯಾರ ಹೆಸರು ಅನ್ನುವುದರ ಬಗ್ಗೆ ಕುತೂಹಲ ಇದೆ.

ಹೊಸ ಸ್ಟೈಲ್: ಚೂಡಿದಾರ್‌ನಲ್ಲಿ ಕನ್ನಡತಿ ಅಮ್ಮಮ್ಮ ಮಿಂಚಿಂಗ್..!

ವರುಧಿನಿ ಹೀರೋ ಎಂದು ಹರ್ಷನ ಹಿಂದೆ ಬಿದ್ದಿದ್ರೆ ಹರ್ಷ ಭುವಿಯ ಹಿಂದೆ. ಈ ಟ್ರಯಾಂಗಲ್ ಲವ್ ಸ್ಟೋರಿ ಏನಾಗುತ್ತೆ..? ಸಾನ್ಯಾಗೂ ಅಧಿಕಾರ ಸಿಕ್ಕಾಯ್ತು.. ಮುಂದೆಹೇಗೆ..?

ಒಂದೆಡೆ ಆಸ್ತಿ ಅಧಿಕಾರದ ಚರ್ಚೆ ಹೆಚ್ಚಾಗ್ತಿದ್ರೆ ಇನ್ನೊಂದು ಕಡೆ ಹರ್ಷ ನಿಧಾನವಾಗಿ ರೊಮ್ಯಾಂಟಿಕ್ ಸೈಡ್‌ಗೆ ಜಾರುತ್ತಿದ್ದಾನೆ. ಹರ್ಷನ ಎದೆಯ ಮೇಲೆ ವಿರಾಜಿಸೋದು ವರುಧಿನಿಯೋ, ಭುವಿಯೋ ಕಾದು ನೋಡಬೇಕು.

 
 
 
 
 
 
 
 
 
 
 
 
 
 
 

A post shared by @artists_galary