ಬೆಳ್ಳಂಬೆಳಗ್ಗೆ ಡೇಟ್ ಎಂದು ಚಂದನ್ ಕೈಗೆ ಕೇಕ್ ಕೊಟ್ಟ ನಿವೇದಿತಾ ಗೌಡ; ಏನ್ ಕರ್ಮ ಗುರು ಎಂದ ನೆಟ್ಟಿಗರು
ಸರ್ಪ್ರೈಸ್ ಡೇಟ್ ವಿಡಿಯೋ ಹಂಚಿಕೊಂಡ ನಿವೇದಿತಾ ಗೌಡ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು ವಿಡಿಯೋ..ನೆಟ್ಟಿಗರು ಕಾಮೆಂಟ್ ಕೂಡ ವೈರಲ್...
ಸ್ಯಾಂಡಲ್‌ವುಡ್ ಬಾರ್ಬಿ ಡಾಲ್ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇಬ್ಬರೂ ಕೆಲಸದಲ್ಲಿ ಬ್ಯುಸಿಯಾಗಿರುವ ಕಾರಣ ಡೇಟ್‌ಗೆಂದು ಹೊರಗಡೆ ಹೋಗಲು ಆಗುತ್ತಿಲ್ಲಂತೆ. ಹೀಗಾಗಿ ಮನೆಯಲ್ಲಿ ಸಿಂಪಲ್ ಡೇಟ್ ಪ್ಲ್ಯಾನ್ ಮಾಡಿ ಯೂಟ್ಯೂಬ್ ವಿಡಿಯೋ ಮಾಡಿದ್ದಾರೆ.
'ಇವತ್ತು ಚಂದನ್ ಜೊತೆ ಸ್ಪೆಷಲ್ ಡೇಟ್ ಪ್ಲ್ಯಾನ್ ಮಾಡುತ್ತಿರುವೆ ಯಾಕಂದ್ರೆ ಯುಎಸ್, ಕ್ಯಾನೆಡಾ, ಕಾನ್ಸರ್ಟ್ ಅಲ್ಲಿ ಇಲ್ಲಿ ಅಂತ ತುಂಬಾನೇ ಬ್ಯುಸಿಯಾಗಿದ್ದಾರೆ. ತುಂಬಾ ದಿನಗಳ ಕಾಲ ಚಂದನ್‌ನ ನೋಡಿಲ್ಲ. ನಾನು ಕೂಡ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವೆ. ನಾನು ಫ್ರೀ ಇದ್ದಾಗ ಚಂದನ್ ಫ್ರೀ ಇರೋಲ್ಲ, ಚಂದನ್ ಫ್ರೀ ಇದ್ದಾಗ ನಾನು ಫ್ರೀ ಇರಲ್ಲ. ಅದಿಕ್ಕೆ ಇವತ್ತು ಬೆಳ್ಳಂಬೆಳಗ್ಗೆ ಎದ್ದು ಡೇಟ್ ಪ್ಲ್ಯಾನ್ ಮಾಡಿರುವೆ. ಚಂದನ್ ಇನ್ನು ಮಲಗಿಕೊಂಡಿದ್ದಾರೆ. ಫಸ್ಟ್ ಟೈಂ ನಾನು ಬೇಗ ಎದ್ದು ಬೆಳಗ್ಗೆ ಡೇಟ್ ಪ್ಲ್ಯಾನ್ ಮಾಡುತ್ತಿರುವೆ. ಇವತ್ತಿನ ಡೇಟ್‌ಗೆ ನಾನು ಬ್ಲ್ಯಾಕ್ ಡ್ರೆಸ್ ಧರಿಸುತ್ತಿರುವೆ' ಎಂದು ವಿಡಿಯೋ ಆರಂಭಿಸಿರುವ ನಿವೇದಿತಾ ಗೌಡ ಮೇಕಪ್ ಮಾಡಿಕೊಳ್ಳಲು ಮುಂದಾಗುತ್ತಾರೆ.
'ಚಂದನ್ ಸ್ಟುಡಿಯೋದಲ್ಲಿ ನಾನು ಸರ್ಪ್ರೈಸ್ ಡೇಟ್ ಪ್ಲ್ಯಾನ್ ಮಾಡಿರುವೆ. ನಾನು ಕೆಲವು ಕಪ್‌ಕೇಕ್‌ಗಳನ್ನು ತಂದಿರುವೆ. ತುಂಬಾ ಸಿಂಪಲ್ ಅಗಿ ಜಾಗವನ್ನು ಅಲಂಕಾರ ಮಾಡಬೇಕು ಅಂದುಕೊಂಡಿರುವೆ. ಸಣ್ಣದಾಗಿರಲಿ ದೊಡ್ಡದಾಗಿರಲಿ ಚಂದನ್‌ಗೆ ಸರ್ಪ್ರೈಸ್‌ಗಳು ಅಂದ್ರೆ ತುಂಬಾನೇ ಇಷ್ಟವಾಗುತ್ತದೆ. ದಿನದಲ್ಲಿ ಚಂದನ್ 90% ಟೈಂ ಚಂದನ್ ಸ್ಟುಡಿಯೋದಲ್ಲಿ ಇರುತ್ತಾರೆ ಮ್ಯಾಸಿಕ್ ಮಾಡುತ್ತಿರುತ್ತಾರೆ ಏನೋ ಒಂದು ಮಾಡುತ್ತಿರುತ್ತಾರೆ' ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ಕಾಡು ಪ್ರಾಣಿ ಲದ್ದಿ ಕಾಫಿ ಕುಡಿಯಲು ಹೆದರಿಕೊಂಡ ನಿವೇದಿತಾ ಗೌಡ; ನೈಟ್‌ಲೈಫ್ ವಿಡಿಯೋ ವೈರಲ್
ಬೆಳಗ್ಗೆ ಪ್ಲ್ಯಾನ್ ಮಾಡಿರುವ ಕಾರಣ ಮನೆಯಲ್ಲಿದ್ದ ಸಣ್ಣ ಪುಟ್ಟ ವಸ್ತುಗಳನ್ನು ಬಳಸಿಕೊಂಡು ಸ್ಟುಡಿಯೋವನ್ನು ಅಲಂಕಾರ ಮಾಡಿದ್ದಾರೆ. ಚಂದನ್‌ನ ಕರೆದುಕೊಂಡು ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಅಲ್ಲಿದ್ದ ನಾಲ್ಕು ರೀತಿಯ ಕೇಕ್‌ಗಳ ರುಚಿ ನೋಡಿದ್ದಾರೆ. ಚಂದನ್ ಡಯಟ್‌ನಲ್ಲಿರುವ ಕಾರಣ ಸಕ್ಕರ ಕಡಿಮೆ ಇರುವ ಕೇಕ್ ಮಾತ್ರ ತಿನ್ನುವುದು ಎಂದಿದ್ದಾರೆ. 'ನಾನು ಅಂದುಕೊಂಡ ರೀತಿಯಲ್ಲಿ ಪ್ಲ್ಯಾನ್ ವರ್ಕ್ ಅಗಿದೆ. ಚಂದನ್ ಮತ್ತು ನಾನು ಒಟ್ಟಿಗೆ ಸಮಯ ನೀಡಲು ಆಗುತ್ತಿರಲಿಲ್ಲ. ಇವತ್ತು ಖುಷಿಯಾಗುತ್ತಿದೆ' ಎಂದು ನಿವಿ ಮಾತನಾಡಿದ್ದಾರೆ.
ನಿವೇದಿತಾ ಮಾಡುವ ಒಂದೊಂದು ವಿಡಿಯೋ ನೋಡಿ ನೆಟ್ಟಿಗರು 'ಏನು ಗುರು ಇದು ಕರ್ಮ ವಿಚಿತ್ರ ವಿಚಿತ್ರ ವಿಡಿಯೋ ಮಾಡ್ತಾರೆ ನಮ್ಮ ಹೆಂಡ್ತಿನೂ ಹೀಗೆ ಮಾಡಿ ಹಾಗೆ ಮಾಡಿ ಎನ್ನುತ್ತಾರೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಟ್ರೋಲಿಗರಿಗೆ ಉತ್ತರ:
'ಪ್ರತಿಯೊಬ್ಬರ ಕಾಮೆಂಟ್‌ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತೇನು ಇಲ್ಲ ಆದರೆ ಇದೆಲ್ಲಾ ಒಂದು ರೀತಿ ವಿಚಿತ್ರವಾಗಿದೆ ಜನರಿಗೆ ಬೇಸಿಕ್ ಕಾಮನ್‌ಸೆನ್ಸ್ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರುತ್ತಾರೆ ಅವರಿಗೆ ಹಣ ಕೊಟ್ಟರೆ ಕ್ಲಿಕ್ ಮಾಡುತ್ತಾರೆ. ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ' ಎಂದು ನಿವೇದಿತಾ ಬರೆದುಕೊಂಡಿದ್ದಾರೆ.
ನಾನಿನ್ನೂ ಅಪ್ಪ ಆಗ್ತಿಲ್ಲ ಕಣ್ರೋ, ಮಗು ಮಾಡ್ಕೊಳಕ್ಕೆ ರೆಡಿಯೇ ಆಗಿಲ್ಲ: ಚಂದನ್ ಶೆಟ್ಟಿ ಕ್ಲಾರಿಟಿ
'ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡಿದ್ದರೆ ತಪ್ಪಲ್ಲ ಆದರೆ ಹುಡುಗಿ ಪ್ರವಾಸ ಮಾಡಿದ್ದರೆ ಮಾತ್ರ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ? ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ ದುಡಿಯುತ್ತಿರುವೆ ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಪತಿ ದುಡ್ಡು ವೇಸ್ಟ್ ಮಾಡುತ್ತಿರುವೆ ಎಂದು ಕಾಮೆಂಟ್ ಮಾಡುತ್ತಿರುವವರಿಗೆ ಒಂದು ಪ್ರಶ್ನೆ..ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ? ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್ ಸೆಟ್ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ಪತಿ ಹಣ ಖರ್ಚು ಮಾಡಿದ್ದರು ನಿಮಗೆ ಏನು ಸಮಸ್ಯೆ? ಇದು ನಿಮಗೆ ಸಂಬಂಧಿಸಿ ವಿಚಾರವಲ್ಲ' ಎಂದು ನಿವೇದಿತಾ ಹೇಳಿದ್ದಾರೆ.