ಕರೆಂಟ್​ ಹೊಡೆಯುವ ಸೀನ್​ ಶೂಟಿಂಗ್​ನಲ್ಲಿ ಸಹನಾ- ಕಾಳಿ ಮಾಡಿದ್ದೇನು ನೋಡಿ! ನಿರ್ದೇಶಕರೇ ಸುಸ್ತು

ಪುಟ್ಟಕ್ಕನ ಮಕ್ಕಳು ಸೀರಿಯಲ್​ನ ಶೂಟಿಂಗ್​ನಲ್ಲಿ ನಡೆದ ಸಹನಾ-ಕಾಳಿಯ ಹಾಸ್ಯ ಪ್ರಸಂಗವೇನು? ಶೂಟಿಂಗ್​ನಲ್ಲಿ ಆಗಿದ್ದೇನು?
 

funny incident between Sahana and Kali   happened during the shooting of Puttakkana Makkalu

ಶೂಟಿಂಗ್​ ಸಮಯದಲ್ಲಿ ಕೆಲವೊಮ್ಮೆ ಹಾಸ್ಯದ ಘಟನೆಗಳು ನಡೆಯುತ್ತಲೇ ಇರುತ್ತವೆ. ಸೀರಿಯಲ್​ ವಿಷಯದ ಶೂಟಿಂಗ್ ಇದ್ದರೂ ಏನೋ ಮಾಡಲು ಹೋಗಿ ಏನೋ ಆಗಿ, ನಟ-ನಟಿಯರು ಸೀರಿಯಸ್ ಆಗುವ ಬದಲು, ನಗುವಂತಾಗುತ್ತದೆ. ಅಂಥದ್ದೇ ಒಂದು ದೃಶ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿಯೂ ಆಗಿದೆ. ಇಲ್ಲಿ ಸಹನಾ ಕರೆಂಟ್​ ರಿಪೇರಿ ಮಾಡಲು ಹೋದಾಗ ಶಾಕ್​ಗೆ ಒಳಗಾಗುತ್ತಾಳೆ. ಕಾಳಿ ಬಂದು ಆಕೆಯ ಕೈಮೇಲೆ ಹೊಡೆದಾಗ ಆಕೆ ಬೀಳುತ್ತಾಳೆ. ಅವಳ ಮೈಮೇಲೆ ಕಾಳಿ ಬೀಳುತ್ತಾನೆ. ಇವಿಷ್ಟು ದೃಶ್ಯ.

 ಈ ದೃಶ್ಯವನ್ನು ಶೂಟಿಂಗ್​ ಮಾಡುವ ಸಮಯದಲ್ಲಿ ಸಹನಾ ಪಟ್ಟ ಪಾಡು ಅಷ್ಟಿಷ್ಟಲ್ಲ. ಕರೆಂಟ್​ ಶಾಕ್​ ಹೊಡೆಸಿಕೊಳ್ಳುವಾಗ ಆರಂಭದಲ್ಲಿ ಹೆದರಿಸ ಸಹನಾ ಪಾತ್ರಧಾರಿ ಅಕ್ಷರಾ ಅವರು, ನಂತರ ಆ ದೃಶ್ಯ ಮಾಡುವಾಗ ನಗುವನ್ನು ತಡೆದುಕೊಳ್ಳಲು ಆಗಲಿಲ್ಲ. ಆ ದೃಶ್ಯವನ್ನು ಹೇಗೆ ಮಾಡಬೇಕು ಎಂದು ಅವರಿಗೆ ಹೇಳಿಕೊಟ್ಟರೂ, ಅದನ್ನು ಮಾಡುವಾಗ ಬಿದ್ದೂ ಬಿದ್ದೂ ನಗುತ್ತಿದ್ದರು. ಸಹನಾ ಕರೆಂಟ್​ ಮುಟ್ಟಿ ಶಾಕ್​ನಿಂದ ಕೂಗುತ್ತಿದ್ದಂತೆಯೇ ಕಾಳಿ ಬಂದು ರಕ್ಷಿಸಬೇಕಿತ್ತು. ಆದರೆ ಕಾಳಿ ಮೊದಲೇ ಓಡಿ ಬರುತ್ತಿರುವ ಘಟನೆಯೂ ನಡೆಯಿತು. ಕೊನೆಗೆ ಅಂತೂ ಈ ದೃಶ್ಯದ ಶೂಟಿಂಗ್​ ನಡೆದು, ಸಹನಾ-ಕಾಳಿ ಇಬ್ಬರೂ ಬೀಳುತ್ತಾರೆ. ಆಗ ಸಹನಾಳಿಗೆ ಪ್ರಜ್ಞೆ ಇರುವುದಿಲ್ಲ. ಆದರೆ ಶೂಟಿಂಗ್​ ಸಮಯದಲ್ಲಿ ಬಿದ್ದಾಗ ಸಹನಾ ಜೋರಾಗಿ ನಕ್ಕಿದ್ದರಿಂದ ಮತ್ತೆ ಇದನ್ನು ರೀಶೂಟ್​ ಮಾಡಬೇಕಾಯಿತು. ಈ ಹಾಸ್ಯಮಯ ಸನ್ನಿವೇಶವನ್ನು ಡಿವಿ ಡ್ರೀಮ್ಸ್​ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. 

ಆವೇಶದಲ್ಲಿ ನಿಜವಾಗ್ಲೂ ಕೆನ್ನೆಗೆ ಹೊಡೆದೇ ಬಿಡೋದಾ ಪುಟ್ಟಕ್ಕನ ಮಗಳು ಸಹನಾ? ವಿಲನ್​ ಕಲಿ ಸುಸ್ತೋ ಸುಸ್ತು!

ಕೆಲವೊಮ್ಮೆ ಶೂಟಿಂಗ್​ ಮಾಡುವ ಸಮಯದಲ್ಲಿ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬ ಬಗ್ಗೆ ಈ ಹಿಂದೆಯು ಶೇರ್​ ಮಾಡಲಾಗಿತ್ತು.  ವಿಲನ್​ ಕಲಿಯನ್ನು ಕಟ್ಟಿಹಾಕಿ, ಸಹನಾ ಕಲಿಯ ಕೆನ್ನೆಗೆ ಬಲವಾಗಿ ಹೊಡೆಯುವ ದೃಶ್ಯವಿದೆ. ಶೂಟಿಂಗ್ ಸಮಯದಲ್ಲಿ, ಆವೇಶದಲ್ಲಿದ್ದ ಸಹನಾ ಪಾತ್ರಧಾರಿ ಅಕ್ಷರಾ ಅವರು ನಿಜವಾಗಿಯೂ ಕಲಿ ಪಾತ್ರಧಾರಿಯ ಕೆನ್ನೆಗೆ ಬಲವಾಗಿ ಹೊಡೆದೇ ಬಿಟ್ಟಿದ್ದಾರೆ. ಕೊನೆಗೆ ಅಯ್ಯೋ ಸಾರಿ.. ಸಾರಿ.. ಹೇಳಿದ್ದಾರೆ. ಕಲಿ ಪಾತ್ರಧಾರಿ ಸಾವರಿಸಿಕೊಂಡು ಇರಲಿ ಬಿಡಿ ಎಂದಿದ್ದಾರೆ.

ಇದರ ವಿಡಿಯೋ ಅನ್ನು ಡಿ.ವಿ.ಡ್ರೀಮ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಪುಟ್ಟಕ್ಕನ ಮಕ್ಕಳು ತೆರೆಮರೆಯ ಕಥೆ ಎಂದು ಇದರ ವಿಡಿಯೋ ಅನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ಶೂಟಿಂಗ್​ ವೇಳೆ ಆಗಿರುವ ಆವಾಂತರವನ್ನು ನೋಡಬಹುದಾಗಿದೆ. ಅಸಲಿಗೆ ಈಗ ಪುಟ್ಟಕ್ಕನ ಮಕ್ಕಳು ಕಥೆಯಲ್ಲಿ, ಸ್ನೇಹಾ ಮತ್ತು ಬಂಗಾರಮ್ಮನಿಗೆ ಅಪಘಾತ ಮಾಡಿಸಿದ್ದು ಸಿಂಗಾರಮ್ಮ ಮತ್ತು ಕಲಿ ಎನ್ನುವ ಸತ್ಯ ತಿಳಿದಿದೆ. ಈ ಅಪಘಾತದಲ್ಲಿ ಸ್ನೇಹಾ ಸಾವನ್ನಪ್ಪಿದ್ದಾಳೆ. ಕಲಿ ಸಹನಾ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ತಂದು ಕಟ್ಟಿಹಾಕಿ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ. ಆಗ ಸಹನಾ ಕಲಿಯ ಕೆನ್ನೆಗೆ ಏಟು ಹಾಕುವ ದೃಶ್ಯವಿದೆ. ಆ್ಯಕ್ಷನ್​ ಹೇಳುತ್ತಿದ್ದಂತೆಯೇ ಸಹನಾ ಡೈಲಾಗ್​ ಹೇಳಿ, ಕಲಿಯ ಕೆನ್ನೆಗೆ ಬಾರಿಸಿದ್ದಾಳೆ. ಆದರೆ, ಏಟು ನಿಜವಾಗಿಯೂ ಬಿದ್ದು ಬಿಟ್ಟಿದೆ. ಕೊನೆಗೆ ಸಾರಿ ಸಾರಿ ಎಂದು ಕೆನ್ನೆ ಸವರಿದ್ದಾಳೆ. ಕಲಿ ಪಾತ್ರಧಾರಿ ಇರಲಿ ಬಿಡಿ ಎಂದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. 

ಪುಟ್ಟಕ್ಕನ ಮಗಳು ಸ್ನೇಹಾ ಮತ್ತೆ ವಾಪಸ್​! ಸೀರಿಯಲ್​ ತಂಗಿ ಸುಮಾ ಜೊತೆ ನೋಡಿ ಫ್ಯಾನ್ಸ್​ ಫುಲ್​ ಖುಷ್​...

Latest Videos
Follow Us:
Download App:
  • android
  • ios