ಸಾಮಾನ್ಯ ಜನರಿಗೂ ಎಂಟ್ರಿ ಕೊಟ್ಟ ಬಿಗ್ಬಾಸ್! ಮಾನಸರನ್ನು ನೋಡಿ ಬಂದವರು ಹೀಗೆಲ್ಲಾ ಹೇಳೋದಾ?
ಬಿಗ್ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜನಸಾಮಾನ್ಯರಿಗೂ ಮನೆಯೊಳಕ್ಕೆ ಎಂಟ್ರಿ ಕೊಡಲಾಗಿದೆ. ಬಂದ ಜನರು ಏನು ಹೇಳಿದ್ರು ನೋಡಿ!
ಈ ಸಲದ ಬಿಗ್ಬಾಸ್ ಉಳಿದ ಸೀಸನ್ಗಳಿಗಿಂತಲೂ ವಿಭಿನ್ನವಾಗಿ ಬರುತ್ತಿದೆ ಎನ್ನುವ ಮೂಲಕ ಈ ಷೋ ಆರಂಭಕ್ಕೂ ಮುನ್ನವೇ ಸಾಕಷ್ಟು ಪ್ರೊಮೋ ರಿಲೀಸ್ ಆಗಿತ್ತು. ವಿಭಿನ್ನ ಎನ್ನುವ ರೀತಿಯಲ್ಲಿ ಸ್ವರ್ಗ- ನರಕದ ಕಲ್ಪನೆ ಮಾಡಲಾಗಿತ್ತು. ಒಂದಿಷ್ಟು ಮಂದಿಯನ್ನು ಸ್ವರ್ಗಕ್ಕೆ, ಮತ್ತಿಷ್ಟು ಮಂದಿಯನ್ನು ನರಕಕ್ಕೆ ಕಳುಹಿಸಲಾಗಿತ್ತು. ಆದರೆ, ಈ ಹೊಸ ಕಾನ್ಸೆಪ್ಟ್ ಸ್ವರ್ಗ- ನರಕ ಮಹಿಳಾ ಆಯೋಗದ ಕೋಪಕ್ಕೆ ಗುರಿಯಾಯಿತು. ಇದೇ ಕಾರಣದಿಂದ ಸ್ವರ್ಗ- ನರಕಕ್ಕೆ ಬ್ರೇಕ್ ಹಾಕಲಾಗಿದೆ. ಸ್ವರ್ಗ - ನರಕ ಹೆಸರಿನಲ್ಲಿ ಸ್ಪರ್ಧಿಗಳ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಆಗುತ್ತಿರುವುದಾಗಿ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಮಹಿಳೆಯರ ಖಾಸಗಿ ತನ್ನಕ್ಕೆ ಧಕ್ಕೆಯಾಗುತ್ತಿದೆ. ಊಟ ಹಾಗೂ ಶೌಚಾಲಯದ ವಿಚಾರವಾಗಿ ನರಕ ವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಬಗ್ಗೆ ಆಯೋಗಕ್ಕೆ ದೂರು ಬಂದ ಹಿನ್ನೆಲೆಯಲ್ಲಿ, ಮಹಿಳಾ ಆಯೋಗ ಬಿಗ್ ಕಾರ್ಯಕ್ರಮ ಆಯೋಜಕರು ಹಾಗೂ ಕಲರ್ಸ್ ವಾಹಿನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಇದೇ ಕಾರಣದಿಂದಾಗಿ ಈಗ ಸ್ವರ್ಗ ಮತ್ತು ನರಕಕ್ಕೆ ಬ್ರೇಕ್ ಹಾಕಲಾಗಿದೆ. ನೋಟಿಸ್ ನೀಡಿದ್ದ ಮಹಿಳಾ ಆಯೋಗವು, ದೂರಿನ ಅನ್ವಯ ತನಿಳೆ ನಡೆಸಿ ವರದಿ ನೀಡುವಂತೆ ರಾಮನಗರ ಪೊಲೀಸರಿಗೆ ಮಹಿಳಾ ಆಯೋಗ ಪತ್ರದ ಮೂಲಕ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಅದಾದ ಬಳಿಕ ಈಗ ರಾಜಕೀಯ ಪಕ್ಷ ಮಾಡಲಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನಾಗಿ ವಿಂಗಡಿಸಲಾಗಿದೆ. ಒಂದು ಪಕ್ಷಕ್ಕೆ ‘ಧರ್ಮಪರ ಸೇನಾ ಪಕ್ಷ’, ಇನ್ನೊಂದಕ್ಕೆ ‘ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ’ ಎಂದು ಹೆಸರು ಇಡಲಾಗಿದೆ. ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್ಗೆ ದೂರುಗಳು ಬಂದು ಮಹಿಳಾ ಆಯೋಗ ಎಂಟ್ರಿ ಕೊಟ್ಟ ಬಳಿಕ, ಅದನ್ನು ರದ್ದು ಮಾಡಿರುವ ಬಿಗ್ಬಾಸ್ ಈಗ ಎರಡು ರಾಜಕೀಯ ಪಕ್ಷಗಳಾಗಿ ವಿಂಗಡಿಸಲಾಗಿದೆ. ಈ ಎರಡು ತಂಡಕ್ಕೆ ಬೇರೆ ಬೇರೆ ವೇಷಭೂಷಣ ನೀಡಲಾಗಿದೆ. ಐಶ್ವರ್ಯಾ ಮತ್ತು ತ್ರಿವಿಕ್ರಮ್ ಕ್ಯಾಪ್ಟನ್ ಆಗಿದ್ದು, ಅವರನ್ನು ಈ ಪಕ್ಷಗಳ ಅಭ್ಯರ್ಥಿಗಳನ್ನಾಗಿ ಮಾಡಲಾಗಿದೆ. ಸದ್ಯ ಎರಡೂ ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿವೆ.
ನನ್ನನ್ನು ನಗಿಸಿ ನೋಡೋಣ! ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ನಿರೂಪಕಿ ರಾಧಾ ಹಿರೇಗೌಡರ್ ಸ್ಪರ್ಧಿಗಳಿಗೆ ಚಾಲೆಂಜ್...
ಇದೊಂದು ವಿಭಿನ್ನ ಕಾನ್ಸೆಪ್ಟ್ ನಡುವೆಯೇ, ಬಿಗ್ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾಮಾನ್ಯ ಜನರಿಗೂ ಬಿಗ್ಬಾಸ್ ಮನೆಯೊಳಕ್ಕೆ ಹೋಗಲು ಅವಕಾಶ ನೀಡಲಾಗಿದೆ. ಹಲವಾರು ಮಂದಿ ಬಿಗ್ಬಾಸ್ ಮನೆಯೊಳಕ್ಕೆ ಲಗ್ಗೆ ಇಟ್ಟಿರುವ ಪ್ರೊಮೋ ಅನ್ನು ವಾಹಿನಿ ಶೇರ್ ಮಾಡಿಕೊಂಡಿದೆ. ಜನರು ಲಗ್ಗೆ ಇಡುತ್ತಾ ಕೂಗುತ್ತಾ ಬಂದಿರುವುದನ್ನು ನೋಡಿದ ಸ್ಪರ್ಧಿಗಳು ಕುಣಿದು ಕುಪ್ಪಳಿಸಿದ್ದಾರೆ. ಗೌತಮಿ ಡಾನ್ಸ್ ಮಾಡಿ ಅವರನ್ನು ಸ್ವಾಗತಿಸಿದ್ದಾರೆ. ಈ ಸಂದರ್ಭ ತ್ರಿವಿಕ್ರಮ್ ತುಂಬಾ ದಿನಗಳಾದ ಮೇಲೆ ನನ್ನ ತಾಯಿ ಹಾಗೂ ಅಕ್ಕ ನೆನಪಾಗುತ್ತಿದ್ದಾರೆ ಎಂದಿದ್ದಾರೆ. ಅದೇ ಇನ್ನೊಂದೆಡೆ ಒಬ್ಬರು, ಹನುಮಂತ ಅವರ ಕಾಲೆಳೆದು 'ಹನುಮಂತಣ್ಣ ನಿನ್ನ ಪಂಚೆ ಎಲ್ಲಿದೆ?' ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಹನುಮಂತ ಒಳಗಿದೆ, ತೆಗೆದುಕೊಂಡು ಬರಲೇ? ಅಂತ ಉತ್ತರಿಸಿದ್ದಾರೆ.
ಆದರೆ, ತುಕಾಲಿ ಮಾನಸ ಅವರು ಸಿಕ್ಕಾಪಟ್ಟೆ ಕಿರುಚಾಡುತ್ತಾರೆ ಎನ್ನುವ ಕಾರಣಕ್ಕೆ ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಇನ್ನಿಲ್ಲದಂತೆ ಮೀಮ್ಸ್ ಮಾಡಲಾಗುತ್ತಿದೆ. ಈಗ ಒಳಗೆ ಬಂದಿರೋ ಜನರೂ ಮಾನಸ ಅವರನ್ನು ಉದ್ದೇಶಿಸಿ, 'ನಿಮ್ಮ ಕಿರುಚಾಟ ಕಂಡು ಇಡೀ ಕರ್ನಾಟಕವೇ ಭಯಬಿದ್ದು ಹೋಗಿದೆ' ಎಂದು ಹೇಳೀದ್ದಾರೆ. ಅದಕ್ಕೆ ಮಾನಸ, ನಿನ್ನ ಸಮಸ್ಯೆ ಏನು ಹೇಳಣ್ಣ ಎನ್ನುತ್ತಿದ್ದಂತೆ ಎಲ್ಲರೂ 'ಧಿಕ್ಕಾರ ಧಿಕ್ಕಾರ' ಅಂತ ಕೂಗಿದ್ದಾರೆ. ಅದನ್ನು ಕಂಡು ಮಾನಸ ಸಪ್ಪೆ ಮುಖ ಮಾಡಿಕೊಂಡಿರುವುದನ್ನು ಪ್ರೊಮೋದಲ್ಲಿ ನೋಡಬಹುದು. ಜನಸಾಮಾನ್ಯರು ಮನೆಯೊಳಕ್ಕೆ ಬಂದು ಏನು ಮಾಡುತ್ತಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಬಿಗ್ಬಾಸ್ಗೆ ಭರ್ಜರಿ ಟಿವಿಆರ್: ಸುದೀಪ್ ಮತ್ತು ತಂಡದಿಂದ ಹೀಗೊಂದು ಪಾರ್ಟಿ- ವಿಡಿಯೋ ವೈರಲ್