ಕನ್ನಡ ನಿರ್ದೇಶಕಿ ವಿಸ್ಮಯಾ ಗೌಡ ವಿರುದ್ಧ FIR ದಾಖಲು!
ಮಾಡೆಲ್, ಮೋಟಿವೇಶನಲ್ ಸ್ಪೀಕರ್, ಬರಹಗಾರ್ತಿ, ನಿರ್ದೇಶಕಿ, ಇವೆಂಟ್ ಮ್ಯಾನೇಜಮೆಂಟ್ ಮೇಕರ್ ಎಂದು ಹೇಳಿಕೊಳ್ಳುವ ವಿಸ್ಮಯಾ ಗೌಡ ವಿರುದ್ಧ ದೂರು ದಾಖಲಾಗಿದೆ. ಹಣ ವಂಚನೆ ಪ್ರಯುಕ್ತ ದೂರು ದಾಖಲಾಗಿದೆ.

ನಿರ್ದೇಶಕಿ ವಿಸ್ಮಯಾ ಗೌಡ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. 6.5 ಲಕ್ಷ ಸಾಲ ಪಡೆದು ವಾಪಸ್ಸು ನೀಡದೆ ವಂಚಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹಿಮಾನ್ವಿ ಎಂಬುವರಿಂದ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು.
ದೂರಿನಲ್ಲಿ ಏನಿದೆ?
"ಇನ್ಸ್ಟ್ರಾಗ್ರಾಮ್‌ನಲ್ಲಿ 2019ರಲ್ಲಿ ಹಿಮಾನ್ವಿ ಹಾಗೂ ವಿಸ್ಮಯ ಗೌಡ ಪರಿಚಯ ಆಗಿದ್ದರು. ನಾನು ಸಿನಿಮಾ ನಿರ್ದೇಶಕಿ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಲೈಫ್ ಕೋಚ್ ಎಂದು ವಿಸ್ಮಯ ಗೌಡ ಪರಿಚಯ ಮಾಡಿಕೊಂಡಿದ್ದರು. ವಿಸ್ಮಯಗೌಡಳಿಂದ ಹಿಮಾನ್ವಿ ಅವರು ಮ್ಯಾನಿಫಸ್ಟೇಷನ್ ಕ್ಲಾಸ್ ತೆಗೆದು ಕೊಂಡಿದ್ದರು. ಈ ವೇಳೆ ವಿಸ್ಮಯ ಗೌಡ ಅವರು ಹಿಮಾನ್ವಿಯಿಂದ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ವಿಸ್ಮಯ ಗೌಡ ಅವರು ಹಿಮಾನ್ವಿಗೆ ಚೆಕ್ ನೀಡಿದ್ದರು. ಆದರೆ ಆ ಚೆಕ್ ಬ್ಯಾಂಕ್‌ಗೆ ಕೊಟ್ಟಾಗ ಸಹಿ ಸರಿಯಿಲ್ಲ ಎಂದು ರಿಜೆಕ್ಟ್ ಆಗಿತ್ತು. ಆನಂತರ ಹಣ ಕೇಳಿದ್ರೆ ಅವಾಚ್ಯ ಶಬ್ಧದಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಲಾಗಿತ್ತು" ಎಂದು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ವಾಲ್ ಆಫ್ ಫೇಮ್ ಗೌರವ; ಪ್ರಶಸ್ತಿ ಗೆದ್ದು ಸಂಭ್ರಮಿಸಿದ 50 ಸಾಧಕರು
ಕಿಶನ್ ಬಿಳಗಲಿ ಜೊತೆ ಸಿನಿಮಾ
ವಿಸ್ಮಯಾ ಗೌಡ ಅವರು ಮೈಸೂರಿನವರು. ಮೋಟಿವೇಶನಲ್ ಸ್ಪೀಕರ್, ರೈಟರ್, ನಿರ್ದೇಶಕಿ, ಇವೆಂಟ್ ಮ್ಯಾನೇಜಮೆಂಟ್ ಮೇಕರ್ ಎಂದು ಹೇಳಿಕೊಳ್ಳುವ ಇವರು ಕಿಶನ್ ಬಿಳಗಲಿ, ಸಾತ್ವಿಕಾ, ಪ್ರವೀಣ್ ಜೊತೆಗೆ ʼಡಿಯರ್ ಕಣ್ಮಣಿʼ ಸಿನಿಮಾ ಮಾಡೋದಾಗಿ ಹೇಳಿದ್ದರು. ಈ ಚಿತ್ರದ ಮುಹೂರ್ತಕ್ಕೆ ಕಿಚ್ಚ ಸುದೀಪ್ ಅವರು ಆಗಮಿಸಿ ಶುಭ ಹಾರೈಸಿದ್ದರು. ಈ ಸಿನಿಮಾದಲ್ಲಿ ʼಬಿಗ್ ಬಾಸ್ ಕನ್ನಡ 11ʼ ಖ್ಯಾತಿಯ ಭವ್ಯಾ ಗೌಡ ಅವರು ಇರೋದಾಗಿ ಹೇಳಿದ್ದರು. ಇನ್ನೂ ಈ ಚಿತ್ರ ರಿಲೀಸ್ ಆಗಿಲ್ಲ.
'ಡಿಯರ್ ಕಣ್ಮಣಿ' ಚಿತ್ರದಲ್ಲಿ ಕಿರುತೆರೆ ನಟಿ ಭವ್ಯಾ ಗೌಡ; ಹೇಗಿರಲಿದೆ ಗೀತಾ ಪಾತ್ರ?
ಎಫ್‌ಐಆರ್ ದಾಖಲಾಗುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಸ್ಮಯಾ ಗೌಡ ಅವರು ಹಿಮಾನ್ವಿ ವಿರುದ್ಧ ಆರೋಪ ಮಾಡಿದ್ದಾರೆ.