Asianet Suvarna News Asianet Suvarna News

ಕ್ಯಾಪ್ಟನ್ ಆದ್ಮೇಲೆ ಬದಲಾದ್ರಾ ರಾಕೇಶ್: ಅಮೂಲ್ಯಾ ವಿರುದ್ಧ ಸಿಟ್ಟಾಗಿದ್ದೇಕೆ?

ಬಿಗ್ ಮನೆಯಲ್ಲಿ ರಾಕೇಶ್ ಈಗಾಗಲೇ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಿದ್ದು ಅಮೂಲ್ಯಾ ವಿರುದ್ಧ ಸಿಟ್ಟಾಗಿದ್ದಾರೆ. ಟೀ ಮಾಡುವ ವಿಚಾರಕ್ಕೆ ಅಮೂಲ್ಯಾ ಮತ್ತು ರಾಕೇಶ್ ನಡುವೆ ವಾದವಿವಾದ ನಡೆದಿದೆ. 

Fight between amulya and rakesh Adiga in Bigg Boss Kannada season 9 sgk
Author
First Published Nov 28, 2022, 5:08 PM IST

ಬಿಗ್ ಬಾಸ್ ಸೀಸನ್ 9, 10ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ ಮನೆಯಿಂದ 9ನೇ ವಾರ ವಿನೋದ್ ಗೊಬ್ಬರಗಾಲ ಎಲಿಮಿನೇಟ್ ಆಗಿ ಹೊರ ಹೋಗಿದ್ದಾರೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ. 10ನೇ ವಾರವೂ ಬಿಗ್ ಮನೆ ಕಾವೇರಿದ್ದು ಈ ವಾರ ಮನೆಯ ಕ್ಯಾಪ್ಟನ್ ಆಗಿ ರಾಕೇಶ್ ಅಡಿಗ ಆಯ್ಕೆಯಾಗಿದ್ದಾರೆ. ರಾಕೇಶ್ ಈಗಾಗಲೇ ಕ್ಯಾಪ್ಟನ್ಸಿ ಅಧಿಕಾರ ವಹಿಸಿಕೊಂಡಿದ್ದು ಅಮೂಲ್ಯಾ ವಿರುದ್ಧ ಸಿಟ್ಟಾಗಿದ್ದಾರೆ. ಟೀ ಮಾಡುವ ವಿಚಾರಕ್ಕೆ ಅಮೂಲ್ಯಾ ಮತ್ತು ರಾಕೇಶ್ ನಡುವೆ ವಾದವಿವಾದ ನಡೆದಿದೆ. 

ಅಂದಹಾಗೆ ಬಿಗ್ ಮನೆಯಲ್ಲಿ ರಾಕೇಶ್ ಮತ್ತು ಅಮೂಲ್ಯಾ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಇಬ್ಬರೂ ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ವಾರ ಇಬ್ಬರ ನಡುವೆ ವೈಮನಸ್ಸು ಮೂಡಿದ್ದು ಕಿತ್ತಾಡಿದ್ದಾರೆ. ಟೀ ವಿಚಾರಕ್ಕೆ ಇಬ್ಬರ ನಡುವೆ ಅಸಮಾಧಾನದ ಹೊಗೆ ಆಡುತ್ತಿದೆ. ಹಾಲಿಗೆ ನೀರು ಹಾಕಿ ಮಾಡುವ ಟೀ ಕುಡಿಯಲ್ಲ ಎಂದು ಅಮೂಲ್ಯಾ ಹೇಳಿದರು.  ಜೊತೆಗೆ ಒಂದು ಪ್ಯಾಕ್ ಹಾಲನ್ನು ತನಗೆ ನೀಡಿ ಎಂದು ಕೇಳಿಕೊಂಡರು. ಅಮೂಲ್ಯಾ ಮಾತಿಗೆ ರಾಕೇಶ್ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಇದರಿಂದ ಕೋಪಗೊಂಡ ಅಮೂಲ್ಯಾ ಅಲ್ಲಿಂದ ಎದ್ದು ಹೋದರು. ಬಳಿಕ ರಾಕೇಶ್ ವರ್ತನೆ ಬಗ್ಗೆ ವಿವರಿಸಿದರು. ನನ್ನ ಗಮನಕ್ಕೆ ಬಂದಿಲ್ಲ ಎಂದು ರಾಕೇಶ್ ಅಮೂಲ್ಯಾಗೆ ಹೇಳಿದರು. ರಾಕೇಶ್ ಮಾತು ಅಮೂಲ್ಯಾಗೆ ಮತ್ತಷ್ಟು ಬೇಸರ ಮೂಡಿಸಿತು. ನಿಮ್ಮ ಗಮನಕ್ಕೆ ಬರದೇ ಇರುವುದು ನನಗೆ ತುಂಬಾ ಹಿಂಸೆ ಆಯ್ತು ಎಂದು ಹೇಳಿದರು. ನೀವೆಲ್ಲೊ ಇದ್ರಿ, ಎರಡು ಹೆಜ್ಜೆ ಮುಂದೆ ಬಂದಿದ್ರೆ ಈಗೋ ಕಮ್ಮಿ ಆಗುತ್ತಿರಲಿಲ್ಲ, ಕಾಮನ್ ಸೆನ್ಸ್ ಅನ್ಸುತ್ತೆ ಎಂದು ರಾಕೇಶ್ ಅಮೂಲ್ಯಾಗೆ ಹೇಳಿದರು. ನನಗೆ ಕಾಮನ್ ಸೆನ್ಸ್ ಇಲ್ಲ, ನಿಮ್ಮಷ್ಟು ಯೋಚನೆ ಮಾಡುವ ಶಕ್ತಿ ಇಲ್ಲ ಎಂದು ಅಮೂಲ್ಯಾ ಟಾಂಗ್ ನೀಡಿದರು. 

ಸದ್ಯ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಅಮೂಲ್ಯಾ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಮೈಸೂರು ರಾಣಿ ಅಂತ ಅಂದ್ಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿ ಕಿಡಿ ಕಾರುತ್ತಿದ್ದಾರೆ. ಅಂಹಾಗೆ ರಾಕೇಶ್ ಮತ್ತು ಅಮೂಲ್ಯಾ ಜಗಳಕ್ಕೆ ಕಾರಣವೇನು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಇಬ್ಬರ ಮುನಿಸಿನ ಹಿಂದಿನ ರಹಸ್ಯ ಇಂದಿನ ಸಂಚಿಕೆಯಲ್ಲಿ ರಿವೀಲ್ ಆಗುತ್ತಾ ಕಾದುನೋಡಬೇಕು.

BBK9 ವಿನೋದ್ ಗೊಬ್ಬರಗಾಲ ಔಟ್; ಬಡವರ ಮನೆ ಮಕ್ಲು ಬೆಳಿಯೋಕೆ ಬಿಡ್ರೋ...

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

BBK9: ಪೊಲೀಸ್ ಕಾನ್ಸ್ಟೇಬಲ್ ಜೇಬಿನಿಂದ 100 ರೂಪಾಯಿ ಕದ್ದ ರೂಪೇಶ್ ರಾಜಣ್ಣ; ಬಾಸುಂಡೆ ಬಿದ್ದ ಕಥೆ ಇದು...

ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. 7ನೇ ವಾರ ಎಲಿಮಿನೇಷನ್ ಇರದ ಕಾರಣ ಯಾರ ಮನೆಯಿಂದ ಹೊರಹೋಗಿಲ್ಲ. 8ನೇ ವಾರ ದೀಪಿಕಾ ದಾಸ್ ಮನೆಯಿಂದ ಹೊರಹೋಗಿ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. 9ನೇ ವಾರ ವಿನೋದ್ ಗೊಬ್ಬರಗಾಲ ಔಟ್ ಆಗಿದ್ದಾರೆ.  ಈ ವಾರ ಯಾರು ಹೋಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.  ಸದ್ಯ ಬಿಗ್ ಬಾಸ್ ಮನೆಯಲ್ಲಿ 11 ಮಂದಿ ಇದ್ದಾರೆ.

Follow Us:
Download App:
  • android
  • ios