ಅವ್ರಿಗೆ ಇರೋದೆಲ್ಲ ಚೆನ್ನಾಗಿದೆ, 'ಭಗವದ್ಗೀತೆ' ಓದ್ಕೊಂಡು ಬಂದಿದಾರೋ ಹೇಗೆ?
ಸದ್ಯ ನಡೆಯುತ್ತಿರುವ ಬಿಗ್ ಬಾಸ್ ಗೇಮ್‌ನಲ್ಲಿ ಉಳಿದೆಲ್ಲರೂ ರಾಶನಲ್ ಎನ್ನುವಂತೆ ಆಡುತ್ತಿದ್ದರೆ ಒಬ್ಬರು ಸ್ಪರ್ಧಿ ಮಾತ್ರ ಸೈಲೆಂಟ್ ಆಗಿ ಆಡುತ್ತಿದ್ದಾರೆ. ಮಹಾಭಾರತದಲ್ಲಿ ಶ್ರೀಕೃಷ್ಣ ಆಟ ಆಡಿದ ತರಹ, ಅವರೇ ಕೊನೆಯವರೆಗೆ ಉಳಿಯೋದು..
ಬಿಗ್ ಬಾಸ್ ಕನ್ನಡ ಸೀಸನ್ 11 ಮಧ್ಯಂತರಕ್ಕೆ ಆಲ್‌ಮೋಸ್ಟ್ ಬಂದಿದೆ. ಸದ್ಯ ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಇರೋರಲ್ಲಿ ಬಹಳಷ್ಟು ಜನರ ಕಣ್ಣು ಹಾಡುಗಾರ ಹನುಮಂತನ ಮೇಲೆ ಇದೆ. ಆದರೆ, ಅವನೊಬ್ಬನ ಮೇಲೆ ಮಾತ್ರ ಇಲ್ಲ, ಇನ್ನೂ ಕೆಲವರ ಮೇಲೆ ಸಹಜವಾಗಿಯೇ ನೆಟ್ಟಿದೆ. ಈ ಬಾರಿಯಾಗಲೀ ಅಥವಾ ಕಳೆದ ಎಲ್ಲ ಸೀಸನ್‌ಗಳಲ್ಲೂ ಇವರೇ ಗೆಲ್ಲೋದು ಅಂತ ಕರೆಕ್ಟಾಗಿ ಹೇಳೋದು ಸಾಧ್ಯವೇ ಇರಲಿಲ್ಲ. ಈ ಬಾರಿ ಕೂಡ ಹಾಗೇನೇ!
ಆದರೆ, ಸದ್ಯ ನಡೆಯುತ್ತಿರುವ ಬಿಗ್ ಬಾಸ್ ಗೇಮ್‌ನಲ್ಲಿ ಉಳಿದೆಲ್ಲರೂ ರಾಶನಲ್ ಎನ್ನುವಂತೆ ಆಡುತ್ತಿದ್ದರೆ ಒಬ್ಬರು ಸ್ಪರ್ಧಿ ಮಾತ್ರ ಸೈಲೆಂಟ್ ಆಗಿ ಆಡುತ್ತಿದ್ದಾರೆ. 'ಭಗವದ್ಗೀತೆ' ಓದಿಕೊಂಡು (Bhagavad Gita) ಬಂದಿದ್ದಾರೆಯೇ ಎಂದು ಎನಿಸುವಷ್ಟರ ಮಟ್ಟಿಗೆ ತುಂಬಾನೇ ಸ್ಥಿತಪ್ರಜ್ಞೆಯಿಂದ ಮಹಾಭಾರತದಲ್ಲಿ ಶ್ರೀಕೃಷ್ಣ ಆಟ ಆಡಿದ ತರಹ ಆಡುತ್ತಿದ್ದಾರೆ. ಅವರೇ ಕೊನೆಯವರೆಗೆ ಉಳಿಯೋದು, ಬೇಕಾದ್ರೆ ಬೆಟ್ ಕಟ್ತೀನಿ ನೋಡಿ ಎನ್ನುವಷ್ಟರ ಮಟ್ಟಿಗೆ ಅವರೊಬ್ಬರ ಹೆಸರು ಪಬ್ಲಿಕ್‌ನಲ್ಲಿ ಕೇಳಿಬರುತ್ತಿದೆ.
ಮನೆಗೆ ಚಿರು ಹೆಸರಿಲ್ಲ ಎಂದಿದ್ದ ಅಭಿಮಾನಿಗಳೇ 'ದೇವತೆ ನಮ್ಮ ಕರುನಾಡ ಅತ್ತಿಗೆ' ಅಂದಿದ್ಯಾಕೆ?
ಹಾಗಿದ್ದರೆ ಆ ಅವರು ಯಾರು? ಅವರ ಕನ್ನಡದ ನಟ, 'ನವಗ್ರಹ' ಚಿತ್ರದ 'ಕಣ್‌ಕಣ್ಣ ಸಲಿಗೆ..' ಹಾಡಿನ ಸರದಾರ ಧರ್ಮ ಕೀರ್ತಿರಾಜ್. ಹೌದು, ಬಿಗ್ ಬಾಸ್ ಮನೆಯಲ್ಲಿ ಸದ್ಯ ನಟ ಧರ್ಮ ಕೀರ್ತಿರಾಜ್ (Dharma Keerthiraj) ಅಟದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ, ಅವರು ಕೂಡ ಅದೆಷ್ಟೋ ಬಾರಿ ನಾಮಿನೇಟ್ ಆಗಿದ್ದಾರೆ ಎಂಬುದು ಇಲ್ಲಿ ಅಚ್ಚರಿ ಎನಿಸಿದರೂ ಸತ್ಯ ಸಂಗತಿ! ಆದರೆ, ಕಳೆದೆಲ್ಲ ಸೀಸನ್‌ಗಳಲ್ಲಿಯೂ ಕಟ್ಟಕಡೆಗೆ ವಿನ್ನರ್ ಆದ ಕ್ಯಾಂಡಿಡೇಟ್ ಕೂಡ ಅದಕ್ಕೂ ಮೊದಲು ಹಲವಾರು ಬಾರಿ ನಾಮಿನೇಟ್ ಆಗಿದ್ದರಲ್ಲ!
ಸದ್ಯ ಸ್ಪರ್ಧಿ ಧರ್ಮ ಕೀರ್ತಿರಾಜ್ ಅವರು ತಮ್ಮ ಹೆಸರಿಗೆ ತಕ್ಕಂತೆ ನ್ಯಾಯಯುತವಾಗಿ ಆಡುತ್ತಿದ್ದಾರೆ. ಅತಿಯಾಗಿ ಮಾತನಾಡದೇ, ಕೆಟ್ಟ ಮಾತಾಡದೇ ಎಲ್ಲರೊಂದಿಗೆ ಚೆನ್ನಾಗಿ ಹೊಂದಿಕೊಂಡು ಆಟ ಆಡುತ್ತಿದ್ದಾರೆ. ಹೀಗಾಗಿ ಹಲವು ಬಿಗ್ ಬಾಸ್ ವೀಕ್ಷಕರಿಗೆ ಧರ್ಮ ತುಂಬಾ ಇಷ್ಟವಾಗಿದ್ದಾರೆ. ಅವರ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ಒಪಿನಿಯನ್ ಓಡಾಡತೊಡಗಿದೆ. ಅದೇನು ಗೊತ್ತಾ?
ಅಮೆರಿಕಾ ಡಾಕ್ಟರ್ ಶಿವಣ್ಣಗೆ ಹೇಳಿರೋ ಮಾತು ವೈರಲ್; ಅವ್ರ ಫ್ಯಾನ್ಸ್ ಆದಷ್ಟೂ ಬೇಗ ತಿಳ್ಕೊಳ್ಳಿ!
'ಅವರಲ್ಲಿ ಬದಲಾಯಿಸುವಂತದ್ದು ಏನೂ ಇಲ್ಲ, ಅವರಲ್ಲಿ ಏನೂ ಕೊರತೆಯಿಲ್ಲ. ಅವರೇ ಒಂದು ಬಂಗಾರ, ನೀನು ಹೇಗೆ ಇದ್ದೀಯೋ ಹಾಗೇ ಕೊನೆ ತನಕ ಇರು ಗುರು..' ಅಂತಿದಾರೆ ಅವರ ಫ್ಯಾನ್ಸ್. ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಬೇರೆ ಸ್ಪರ್ಧಿಗಳು ಬಿರುಗಾಳಿಯಂತೆ ಎನಿಸಿದರೆ ಈ ಧರ್ಮ ಮಾತ್ರ ತಂಗಾಳಿಯಂತೆ ಅಂತಿದಾರೆ ಹಲವರು. ಇನ್ನೂ ಕೆಲವರು ಅವರು ತಮ್ಮ ಹೆಸರಿಗೆ ತಕ್ಕಂತೆ ಧರ್ಮರಾಜನಂತೆ ಇದ್ದಾರೆ ಅಂತಿದಾರೆ!
'ಮೋಸ, ವಂಚನೆ, ದೌರ್ಜನ್ಯ, ಅವಿವೇಕ ಹಾಗೂ ಅಸಂಬದ್ಧ ಮಾತುಗಳು ಇವೆಲ್ಲವನ್ನೂ ಮೀರಿ ಈ ಬಿಗ್ ಬಾಸ್‌ನಲ್ಲಿ 'ಭೂಮಿ ತೂಕ'ದ ಮನುಷ್ಯನಾಗಿ ಉಳ್ದಿರೋದು ಮಾತ್ರ ಧರ್ಮ ಕೀರ್ತಿರಾಜ್ ಒಬ್ಬರೇ..' ಎಂಬ ಫೋಟೋಗಳು, ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ನಟ ಧರ್ಮ ಕೀರ್ತಿರಾಜ್ ಹಾಗೇ ಇರುವುದು ಹೌದು. ಆದರೆ, ಮುಂದಿನ ದಿನಗಳಲ್ಲಿ ಅವರು ತಮ್ಮ ವರಸೆ ಬದಲಿಸುತ್ತಾರಾ? ಕಾದು ನೋಡಬೇಕು!
ಹೈಗ್ರೌಂಡ್ ಪೊಲೀಸ್ ಸ್ಟೇಷನ್ನಿನಲ್ಲಿ ಅಂದು ಶಂಕರ್ ನಾಗ್ ಆಡಿದ್ದ ಮಾತು ಹೇಳಿದ ವಿಜಯಕಾಶಿ!