Asianet Suvarna News Asianet Suvarna News

ಲಕ್ಷ್ಮೀ ನಿವಾಸದ ಜಾನುಗೆ ಪೇಮೆಂಟ್ ಆಗಿಲ್ವಾ, ಅದೇ ಬ್ಲೌಸನ್ನ ಅದೆಷ್ಟು ಸಲ ಹಾಕ್ತಿದ್ದಾಳೆ!

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಕಥೆ ಒಂದು ಲೆವೆಲ್‌ನಲ್ಲಿ ಸಾಗ್ತಿದ್ದರೆ ಜಾನು ಉಡೋ ಸೀರೆ ರವಿಕೆ ಬಗ್ಗೆ ವೀಕ್ಷಕರ ಕಾಮೆಂಟ್ ನೆಕ್ಸ್ಟ್‌ ಲೆವೆಲಲ್ಲಿ ಸಾಗ್ತಾ ಇದೆ!

 

Fans commenting on janu role of Lakshminivasa serial
Author
First Published Apr 12, 2024, 7:56 AM IST

ಲಕ್ಷ್ಮೀ ನಿವಾಸ ಸೀರಿಯಲ್‌ ತುಂಬು ಕುಟುಂಬದ ಕಥೆ ಅಂತ ಈ ಸೀರಿಯಲ್ ಶುರುವಾಗೊ ಮುಂಚೆನೇ ಅನೌನ್ಸ್ ಮಾಡಲಾಗಿತ್ತು. ಆದರೆ ಈಗ ಇಲ್ಲಿ ತುಂಬು ಕುಟುಂಬದ ಹುಡುಗಿ ಜಾನು ಒಂಟಿಮನೆಯೊಳಗೆ ಒಂಟಿಯಾಗಿ ಬಿಟ್ಟಿದ್ದಾಳೆ. ಗಂಡ ಜಯಂತ್ ವಿಚಿತ್ರ ನಡವಳಿಕೆ ಇನ್ನೂ ಅವಳ ಮನಸ್ಸನ್ನು ಕೆಡಿಸಿಲ್ಲ. ಆದರೆ ಕೆಡಿಸೋ ಸೂಚನೆಯಂತೂ ಇದೆ. ಈ ಸೀರಿಯಲ್‌ ಕಥೆ ಸಾಗ್ತಾ ಇರೋ ರೀತಿ ನೋಡಿದ್ರೆ ಮುಂದೆ ಮಾನಸಿಕ ಸಮಸ್ಯೆ ಇರುವ ಜಯಂತ್ ಕೈಯಲ್ಲಿ ಜಾನು ಒದ್ದಾಡುವ ಸನ್ನಿವೇಶ ಬರಬಹುದೇನೋ. ಅದನ್ನು ವೀಕ್ಷಕರು ಈಗಾಗಲೇ ಗೆಸ್ ಮಾಡಿದ್ದಾರೆ. ಬಹುಶಃ ಜಯಂತನ ಅನುಮಾನದ ನಡವಳಿಕೆಯಿಂದ ಬೇಸತ್ತು ಒಂದೋ ಜಾನು ಈ ಸಂಬಂಧದಿಂದ ಹೊರಬರಬಹುದು, ಆದರೆ ಇಂಥಾ ಲೈನು ಸೀರಿಯಲ್ಲಿಗೆಲ್ಲ ಒಗ್ಗೋದಿಲ್ಲ. ಇಲ್ಲಿ ಏನಂದರೆ ಜಾನು ತನ್ನ ಒಳ್ಳೆತನದಿಂದ ಜಯಂತನ ಮನಸ್ಸು ಬದಲಾಯಿಸಿದರೇ ಸೀರಿಯಲ್ಲಿಗೊಂದು ಕಳೆ.

ಸೀರಿಯಲ್ ನೋಡೋ ಮಂದಿ ಬರೀ ಸೀರಿಯಲ್ ಕತೆ ನೋಡಲ್ಲ, ಅಲ್ಲಿರೋ ಪಾತ್ರಧಾರಿಗಳು, ಅವರ ಹಿಂದೂ ಮುಂದು, ಡ್ರೆಸಿಂಗ್ ಸ್ಟೈಲ್, ಆಕ್ಸೆಸರೀಸ್ ಎಲ್ಲವನ್ನು ಗಮನಿಸುತ್ತಾರೆ ಅನ್ನೋದು ತುಂಬ ಹಿಂದೆಯೇ ಚರ್ಚೆ ಆಗ್ತಿದ್ದ ವಿಚಾರ. ಆದರೆ ಈಗ ಅದು ಬೇರೆ ರೂಪದಲ್ಲಿ ಹೊರಬರ್ತಿದೆ. ಸೀರಿಯಲ್ ಟೀಮ್ ದಿನಾ ಮೂರ್ನಾಲ್ಕು ಸಲ ಹೊರಬಿಡೋ ಪ್ರೋಮೋಗಳೇ ಸೀರಿಯಲ್‌ ಕಥೆ ಹೇಳುತ್ತವೆ. ಜೊತೆಗೆ ಸೀರಿಯಲ್ ಟೀಮ್‌ ಜೊತೆಗೆ ಇದರ ವೀಕ್ಷಕರನ್ನೂ ಕನೆಕ್ಟ್ ಮಾಡುತ್ತದೆ. ಹಿಂದೆಲ್ಲ ಹೆಂಗಸರು ಟಿವಿ ಮುಂದೆ ಕೊತ್ತಂಬರಿ ಸೊಪ್ಪು ಬಿಡಿಸ್ತಾ ಆಡ್ತಿದ್ದ ಕಾಮೆಂಟ್‌ಗಳು ಈಗ ನೇರ ಇನ್‌ಸ್ಟಾದಲ್ಲಿ ಚಾನೆಲ್ ಬಿಡೋ ಪ್ರೋಮೋದ ಕಾಮೆಂಟ್ ಬಾಕ್ಸ್‌ನಲ್ಲಿ ಬಂದು ಸರ್ವರ ಗಮನಕ್ಕೂ ಬರುತ್ತೆ.

ಪದೇ ಪದೇ ಮೂಗು ಮುಟ್ಟಿಕೊಳ್ಳುವೆ, ಇದು ಸಮಸ್ಯೆ ಅಲ್ಲ ಕಾರಣವಿದೆ; ಸತ್ಯ ಬಿಚ್ಚಿಟ್ಟ ಬಿಗ್ ಬಾಸ್ ನಮ್ರತಾ

ಸದ್ಯ ವೀಕ್ಷಕರ ಟಾರ್ಗೆಟ್ ಆಗಿರೋದು ಲಕ್ಷ್ಮೀ ನಿವಾಸ ಸೀರಿಯಲ್ಲಿನ ನಾಯಕಿ ಜಾನು. ಮೊನ್ನೆ ಮೊನ್ನೆ ತನಕ ದಪ್ಪ ಜಾಸ್ತಿ ಆಯ್ತು, ಸ್ವಲ್ಪ ಸಣ್ಣಗಾದ್ರೆ ಬೆಟರ್ ಅಂತ ಬಾಡಿ ಶೇಮಿಂಗ್ ಕಾಮೆಂಟ್ ಮಾಡ್ತಿದ್ದ ಮಂದಿ ಈಗ ನೇರ ಸೀರೆ ಬ್ಲೌಸ್ ವಿಷಯಕ್ಕೆ ಬಂದಿದ್ದಾರೆ. ಮೊನ್ನೆ ಒಬ್ಬರು ಜಾನು ಒಂದೇ ಬ್ಲೌಸ್ ಹಾಕ್ಕೊಂಡಿರ್ತಾಳೆ. ಯಾಕವ್ವಾ, ಬ್ಲೌಸ್‌ಗೂ ಗತಿಯಿಲ್ವಾ? ಅಂತ ಕೇಳಿದ್ರು. ಇದೀಗ ಮತ್ತೊಬ್ರು, ಜಾನು ಆಗರ್ಭ ಶ್ರೀಮಂತನ ಹೆಂಡ್ತಿ ಅಂತೆ. ಆದರೆ ಉಡೋದು ನೂರಿನ್ನೂರು ರುಪಾಯಿ ಸೀರೆ ಅಂತ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಇನ್ನೊಬ್ರು ಅದಕ್ಕೆ ಆರುನೂರು ರುಪಾಯಿ ಬೆಲೆ ಅಂತ ಚೌಕಾಸಿ ಮಾಡಿದ್ದಾರೆ.

ಒಬ್ಬ ಪ್ರಜ್ಞಾವಂತ ವೀಕ್ಷಕರು ಮಾತ್ರ, ಈಕೆ ಪ್ರತಿಭಾವಂತ ನಟಿ, ಆಕೆಯ ನಟನೆ ನೋಡಿ, ಸೀರೆ, ಬ್ಲೌಸ್ ಅಲ್ಲ ಅಂದಿದ್ದಾರೆ. ಅದಕ್ಕೆ ಒಂದಿಷ್ಟು ಜನ ಪಾಸಿಟಿವ್ ಆಗಿ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಅಷ್ಟರಲ್ಲಿ ಮತ್ತೊಬ್ರು, ಇಬ್ರು ಒಬ್ರೇ ಅಲ್ಲ ಸಿದ್ದು ಅತ್ತಿಗೆ ಕೂಡ ಸೇಮ್ ಸೀರೆ ಬ್ಲೌಸ್. ಇವ್ರಿಗೆ ಕಾಸ್ಟ್ಯೂಮ್ ಶಾರ್ಟೇಜ್ ಅನಿಸುತ್ತೆ ಎಂದಿದ್ದಾರೆ. ಮಗದೊದ್ರು, 'ಒಂದೇ ಸೀರಿಯಲ್ ಬ್ಲೌಸ್‌ನಲ್ಲಿ ಇಡೀ ಸೀರಿಯಲ್ಲೇ ಮುಗಿಸ್ತಾರೆ ಅನಿಸುತ್ತೆ' ಅಂದುಬಿಟ್ಟಿದ್ದಾರೆ.

ಕನ್ನಡ ಕಿರುತೆರೆಗೆ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ: ಸ್ಪಷ್ಟನೆ ಕೊಟ್ರು ನೀರ್ ದೋಸೆ ನಟಿ

ಇಷ್ಟಕ್ಕೆ ಸುಮ್ಮನಾಗಿಲ್ಲ. ಜಾನುಗೆ ಕರೆಕ್ಟಾಗಿ ಪೇಮೆಂಟ್ ಮಾಡಿ, ಆಗಲಾದ್ರೂ ಹೊಸ ಬ್ಲೌಸ್ ಹೊಲಿಸ್ಕೊಳ್ಳಬಹುದೇನೋ ಅಂತ ನೇರ ಪ್ರೊಡ್ಯೂಸರ್‌ಗೇ ಜಾನು ಪರ ಅಪ್ಲಿಕೇಶನ್ ಹಾಕಿದ್ದಾರೆ.

ಅಂದಹಾಗೆ ಸೀರೆ ಬ್ಲೌಸ್ ವಿಚಾರ ಈ ಲೆವೆಲ್‌ನ ಕಾಮೆಂಟ್ ಕೇಳ್ತಿರೋದು ಜಾನು ಪಾತ್ರಧಾರಿಯ ನಿಜ ಹೆಸರು ಚಂದನಾ ಅನಂತಕೃಷ್ಣ. ಈಕೆ ಭರತನಾಟ್ಯ ಡ್ಯಾನ್ಸರ್. ಈ ಹಿಂದೆ ಸೀರಿಯಲ್ ನಾಯಕಿಯಾಗಿದ್ದರು. ಬಿಗ್‌ಬಾಸ್‌ಗೂ ಹೋಗಿ ಬಂದಿದ್ದರು.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

 

Follow Us:
Download App:
  • android
  • ios