ಜ್ಯೋತಿಷಿಯಿಂದ ಹಳ್ಳ ಹಿಡಿಯತ್ತಾ ಅಮೃತಧಾರೆ? ಮತ್ತದೇ ಕಥೆ ಯಾಕೆ... ಫ್ಯಾನ್ಸ್ ತೀವ್ರ ಬೇಸರ!
ಭೂಮಿಕಾ ಮತ್ತು ಗೌತಮ್ರನ್ನು ಬೇರೆ ಬೇರೆ ಮಾಡಲು ಜ್ಯೋತಿಷಿಯ ಎಂಟ್ರಿ! ಸಿದ್ಧ ಸೂತ್ರಕ್ಕೆ ಅಮೃತಧಾರೆ ವೀಕ್ಷಕರಿಂದ ಬೇಸರ. ಏನೆಂದ್ರು ನೋಡಿ...
ಒಂದೆರಡು ಗಂಟೆಗಳಲ್ಲಿ ಮುಗಿಯಬಹುದಾದ ಕಥೆಯನ್ನು ನಾಲ್ಕಾರು ವರ್ಷ ಎಳೆಯುವುದು ಸೀರಿಯಲ್ ನಿರ್ದೇಶಕರ ಅನಿವಾರ್ಯತೆ ನಿಜ. ಇದೇ ಕಾರಣಕ್ಕೆ ಹಲವು ಧಾರಾವಾಹಿಗಳು ಆರಂಭದ ಕೆಲವು ಎಪಿಸೋಡ್ಗಳ ತುಂಬಾ ಕುತೂಹಲ ಉಳಿಸಿಕೊಂಡು ಬರಬರುತ್ತಾ ತನ್ನತನವನ್ನು ಕಳೆದುಕೊಳ್ಳುತ್ತವೆ, ಸೀರಿಯಲ್ನ ಪಾತ್ರಧಾರಿಗಳೂ ಬದಲಾಗುತ್ತಾ ಹೋಗುತ್ತಾರೆ. ಕೆಲವೇ ಕೆಲವು ಧಾರಾವಾಹಿಗಳು ಮಾತ್ರ ಕೊನೆಯವರೆಗೂ ಅದೇ ಉತ್ಸಾಹವನ್ನು ಉಳಿಸಿಕೊಳ್ಳುವುದು ಇದೆಯಾದರೂ ಹಲವು ಧಾರಾವಾಹಿಗಳು ಹಳ್ಳ ಹಿಡಿದುಬಿಡುತ್ತವೆ. ಆದರೆ ಪ್ರೇಕ್ಷಕರ ಕುತೂಹಲವನ್ನು ಕೆರಳಿಸುವ ಹಿನ್ನೆಲೆಯಲ್ಲಿ ಒಂದಷ್ಟು ಸಿದ್ಧ ತಂತ್ರಗಳನ್ನು ಹಲವು ಸೀರಿಯಲ್ಗಳಲ್ಲಿ ಬಳಸುವುದು ಉಂಟು. ಭಾಷೆ ಯಾವುದೇ ಆಗಿರಬಹುದು. ಒಂದಿಷ್ಟು ಸಿದ್ಧ ಸೂತ್ರಗಳು ಎಲ್ಲದರಲ್ಲಿಯೂ ಕಾಮನ್ ಆಗಿರುತ್ತವೆ.
ಇದೀಗ ಅದೇ ಸಿದ್ಧ ಸೂತ್ರವನ್ನು ಬಳಸಿಕೊಂಡಿರುವ ಅಮೃತಧಾರೆ ಸೀರಿಯಲ್ ಬಗ್ಗೆ ಯಾಕೋ ಹಲವು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸ್ವಲ್ಪ ವಿಭಿನ್ನ ಕಥಾಹಂದರವನ್ನು ಹೊಂದಿರುವ ಧಾರಾವಾಹಿ ಎಂದೇ ಬಿಂಬಿತವಾಗಿದ್ದ ಜೀ ಟಿ.ವಿಯ ಅಮೃತಧಾರೆ, ಇದೀಗ ಬೇಸರ ಮೂಡಿಸುತ್ತಿದೆ ಎನ್ನುವುದು ವೀಕ್ಷಕರ ಅಭಿಮತ. ಇದರ ಪ್ರೊಮೋ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದಾಗ, ಅಲ್ಲಿ ಬರುವ ಕಮೆಂಟ್ಗಳು ನೋಡಿದರೆ ವೀಕ್ಷಕರ ಮನಸ್ಥಿತಿ ಅರ್ಥವಾಗುತ್ತದೆ.
ಸನ್ನಿ ಲಿಯೋನ್ ಮೇಲೆರಗಿದ ಹಾವು: ಜೀವ ಭಯದಿಂದ ಹಾರಿದ ನಟಿ- ವಿಡಿಯೋ ವೈರಲ್
ಅಷ್ಟಕ್ಕೂ ಈ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ದಂಪತಿಯ ವಿಭಿನ್ನ ಲವ್ಸ್ಟೋರಿ ನೋಡುವುದು ಎಂದರೆ ಬಹುತೇಕ ವೀಕ್ಷಕರಿಗೆ ಇಷ್ಟ. ಮದುವೆಯಾದ ಜೋಡಿ ಪತಿ-ಪತ್ನಿಯಂತೆ ಬಾಳದೇ ಇರುವ ಅದೆಷ್ಟೋ ಸೀರಿಯಲ್ಗಳು ಬಂದು ಹೋದರೂ, ಇದು ವೀಕ್ಷಕರಿಗೆ ಇಷ್ಟವಾಗಲು ಇವರಿಬ್ಬರ ಅಭಿನಯ ಕೂಡ ಮಹತ್ವದ್ದಾಗಿದೆ. ಅದಕ್ಕೆ ಸರಿಯಾಗಿ ಗೌತಮ್ ಗೆಳೆಯ ಆನಂದ್ನ ಗೆಳೆತನ. ಇವೆಲ್ಲವೂ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಆದರೆ ಸೀರಿಯಲ್ ಎಂದರೆ ಮೇಲೆ ವಿಲನ್ಗಳು ಇರಲೇಬೇಕು, ಆ ವಿಲನ್, ಅತ್ತೆ, ನಾದಿನಿ, ಮೈದುನ ಇತ್ಯಾದಿ ರೂಪದಲ್ಲಿಯೇ ಇರಬೇಕು ಎನ್ನುವುದಕ್ಕೆ ಈ ಸೀರಿಯಲ್ ಕೂಡ ಹೊರತಾಗಿಲ್ಲ. ಆದರೂ ಈ ಸೀರಿಯಲ್ ಇಲ್ಲಿಯವರೆಗೆ ಗೆದ್ದು ಬೀಗುತ್ತಿದೆ. ಇದಕ್ಕೆ ಕಾರಣ, ಅತ್ತೆ ಶಕುಂತಲಾ ಮತ್ತು ಮೈದುನ ಜೈದೇವ್ ಏನೇ ತಂತ್ರ ಮಾಡಿದರೂ ಇಲ್ಲಿಯ ನಾಯಕಿ ಬೇರೆ ಸೀರಿಯಲ್ಗಿಂತ ಭಿನ್ನವಾಗಿರುವ ಕಾರಣ, ಪ್ರತಿತಂತ್ರ ಹೂಡುತ್ತಲೆ ಎಲ್ಲವನ್ನೂ ಠುಸ್ ಮಾಡುತ್ತಿರುವ ಕಾರಣ, ವೀಕ್ಷಕರಿಗೂ ಮಜಾ ಬರುತ್ತಿದೆ.
ಇದೀಗ ಜೈದೇವ್ ಕೂಡ ಪತ್ನಿ ಮಲ್ಲಿಯ ಮೇಲೆ ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾನೆ. ನಂಬರ್ 1 ವಿಲನ್ ಆಗಿರೋ ಈತ ಮುಂದೇ ಏನು ಅಪಾಯ ಮಾಡುತ್ತಾನೋ ಎನ್ನುವ ಭಯ ಭೂಮಿಕಾಳಂತೆ, ವೀಕ್ಷಕರಿಗೂ ಕಾಡುತ್ತಿದೆ. ಆದರೆ ಇದೀಗ ಸಿದ್ಧಸೂತ್ರ ನಕಲಿ ಜ್ಯೋತಿಷಿಯಿಂದ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್ಗೆ ಶಾಕ್ ಆಗಿದೆ. ಶಕುಂತಲಾ ದೇವಿ ಕೂಡ ಶಾಕ್ ಆದಂತೆ ನಟಿಸಿದ್ದಾಳೆ. ಆದರೆ ಈತ ನಕಲಿ ಜ್ಯೋತಿಷಿ, ಈತನನ್ನು ಕರೆಸಿರುವುದು ಶಕುಂತಲಾನೇ ಎನ್ನುವುದು ಅಭಿಮಾನಿಗಳ ಅಭಿಮತ. ಏಕೆಂದರೆ ಗಂಡ-ಹೆಂಡತಿ ಒಂದಾಗುವುದನ್ನು ಅವಳು ಸಹಿಸುವುದಿಲ್ಲ. ಇದಾಗಲೇ ಇಬ್ಬರೂ ದೂರ ದೂರವಾಗಲು ತಂತ್ರ ರೂಪಿಸುತ್ತಲೇ ಇದ್ದಾಳೆ. ಆದರೆ ಎಷ್ಟು ದಿನ ಹೀಗೆ ತಂತ್ರ ರೂಪಿಸುವುದು ಎಂದುಕೊಂಡು ಇದೀಗ ಜ್ಯೋತಿಷಿ ಮೂಲಕ ಗೌತಮ್ ಕಿವಿಗೆ ಈ ವಿಷಯ ಹಾಕಿಸಿದ್ದಾಳೆ. ಇನ್ನು ಗೌತಮ್ ಅಂತೂ ಚಿಕ್ಕಮ್ಮನ ಮೇಲೆ ಅಭಿಮಾನ, ಪ್ರೀತಿಯನ್ನೇ ಇಟ್ಟವ. ಯಾವುದೇ ಕಾರಣಕ್ಕೂ ಆಕೆಯ ವಿರುದ್ಧ ಅನುಮಾನ ಬರಲು ಸಾಧ್ಯವೇ ಇಲ್ಲ. ಭೂಮಿ ಮತ್ತು ಡುಮ್ಮಾ ಸರ್ ಒಂದಾಗುವುದನ್ನು ನೋಡಲು ಕಾಯುತ್ತಿದ್ದ ವೀಕ್ಷಕರಿಗೆ ನಕಲಿ ಜ್ಯೋತಿಷಿ ತಂದಿರುವುದು ಸಿಟ್ಟು ಬರಿಸಿದೆ.
ಸಹಸ್ರಾರು ಮಹಿಳೆಯರಿಗೆ ಮಾದರಿ ಕಣಮ್ಮಾ ನೀನು, ನೀನೇ ಹೀಗಾದ್ರೆ ಹೇಗೆ? ಪುಟ್ಟಕ್ಕನ ವಿರುದ್ಧ ಫ್ಯಾನ್ಸ್ ಆಕ್ರೋಶ!