ಗೀತಾ ಭಾರತಿ ಭಟ್ ಬ್ರಹ್ಮಗಂಟು ಸೀರಿಯಲ್‌ನ ಗುಂಡಮ್ಮ ಅಂತಲೇ ಫೇಮಸ್ಸು. ಕೆಲವು ದಿನಗಳ ಹಿಂದೆ ಡ್ರಗ್ಸ್‌ ಸೇವನೆ ಆರೋಪ ಈಕೆ ಮೇಲಿತ್ತು. ಆ ಕಾರಣಕ್ಕೇ ಈಕೆಗೆ ಬಿಗ್‌ಬಾಸ್ ಮನೆಗೆ ಎಂಟ್ರಿ ಸಿಕ್ತು ಅನ್ನೋ ಮಾತೂ ಇದೆ.

ಬಿಗ್‌ ಬಾಸ್ ಸೀಸನ್ 8ರ ಮೊದಲ ವಾರ ಈಕೆಗೆ ಮೆಚ್ಚುಗೆಯೇ ಹೆಚ್ಚು ವ್ಯಕ್ತವಾಯಿತು. ಧನುಶ್ರೀ ಗೀತಾ ಅವರನ್ನು ಅಂಡರ್‌ ಎಸ್ಟಿಮೇಟ್ ಮಾಡಿ ಟಾಸ್ಕ್ ನಲ್ಲಿ ಸೋಲಿಸಲು ಹೊರಟು ತಾನೇ ಸೋತದ್ದೀಗ ಹಳೇ ಕಥೆ. ಹಾಗಂತ ಗೀತಾ ಸ್ಟ್ರಾಂಗ್ ಕಂಟೆಸ್ಟೆಂಟ್ ಏನಲ್ಲ. ಪರ್ವಾಗಿಲ್ಲ ಅನ್ನೋ ಥರದ ಪರ್ಫಾಮೆನ್ಸ್ ಈಕೆಯದ್ದು.

ಬೆದರು ಬೊಂಬೆ ದಿವ್ಯಾ ಸುರೇಶ್; ಲ್ಯಾಗ್ ಮಂಜು ಕಾಮಿಡಿ ಅತಿಯಾಗಿ ಕಣ್ಣೀರಿಟ್ಟ ಸ್ನೇಹಿತೆ! ...

ನೆಟಿಜನ್ಸ್ ಗೆ ಮಾತ್ರ ಈಕೆಯ ಬಗ್ಗೆ ಅಂಥಾ ಒಲವಿಲ್ಲ. ಇದಕ್ಕೆ ಕಾರಣ ಈಕೆಯ ಡಬಲ್ ಗೇಮ್. ಅತ್ತ ದಿವ್ಯ ಬಳಿ ಹೋಗಿ ಅವರಿಗೆ ಬೇಕಾದಂತೆ ಮಾತಾಡೋ ಗೀತಾ ಇತ್ತ ಉಳಿದವರ ಜೊತೆಗೆ ಅವರಿಗೆ ಬೇಕಾದಂತೆ ಮಾತಾಡಿ ಎಲ್ಲಾ ಕಡೆಯೂ ಒಳ್ಳೆಯವಳಾಗಲಿಕ್ಕೆ ಹೊರಟಿದ್ದು, ಜೊತೆಗೆ ಅಲ್ಲಿನ ಸುದ್ದಿ ತಂದು ಇಲ್ಲಿ ಹಾಕಿ ಇಲ್ಲಿನ ಸುದ್ದಿ ಅಲ್ಲಿ ದಾಟಿಸಿ ಅವರಿಗೂ ಇವರಿಗೂ ಮಧ್ಯೆ ಬಿರುಕು ಹೆಚ್ಚಾಗುವಂತೆ ಮಾಡಿದ್ದು ಮನೆಯವರಿಗೆ ಗೊತ್ತಾಯ್ತೋ ಇಲ್ವೋ. ಆದರೆ ಇದನ್ನೆಲ್ಲ ನೋಡುತ್ತಿದ್ದ ಪ್ರೇಕ್ಷಕರಿಗೆ ಮಾತ್ರ ಇಷ್ಟ ಆಗಲಿಲ್ಲ. ಅದರ ಪರಿಣಾಮವನ್ನು ಅವರು ಈ ವಾರ ಬಹುಶಃ ಅನುಭವಿಸಬೇಕಾಗಬಹುದು.

ಸದ್ಯಕ್ಕೆ ಬಿಗ್‌ಬಾಸ್‌ ಮನೆಯವರೆಲ್ಲರಿಗೂ ಶಮಂತ್ ಮೇಲೆ ಬಹಳ ಸಿಟ್ಟಿದೆ. ಮನೆಯಲ್ಲಿ ಹೆಚ್ಚಿನವರಿಗೆ ಶಮಂತ್ ಈ ವಾರ ಎಲಿಮಿನೇಟ್ ಆಗಲೇ ಬೇಕು ಎಂಬ ಮನಸ್ಸಿದೆ. ಆದರೆ ಈ ಶಮಂತ್ ಸಖತ್ ಲಕ್ಕಿ ಫೆಲೋ. ಶುರುವಿನಿಂದಲೂ ಕಳಪೆಯಾಗಿ ಆಡುತ್ತಿದ್ದರೂ ಯಾಕೋ ಅವರ ಅದೃಷ್ಟ ಚೆನ್ನಾಗಿದೆ ಅನ್ನೋ ಕಾರಣಕ್ಕೋ ಏನೋ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಮೊದಲ ಎರಡು ವಾರ ಕ್ಯಾಪ್ಟನ್ಸಿ ಅವರನ್ನು ಎಲಿಮಿನೇಶನ್‌ನಿಂದ ಕಾಪಾಡಿದರೆ ಆಮೇಲಿನ ವಾರ ಅದೃಷ್ಟವೇ ಕೈ ಹಿಡಿದಂತಿದೆ.

ರಘು ಬಗ್ಗೆ ಲ್ಯಾಗ್‌ ಮಂಜಾ ಇಂಥಾ ಮಾತಾ ಆಡೋದು? ಕಾರಂತ್ ಬೇಸರ ...

ನಿನ್ನೆಯ ತುಲಾಭಾರ ಟಾಸ್ಕ್‌ನಲ್ಲಂತೂ ದಿವ್ಯಾ ಸುರೇಶ್ ಅವರನ್ನೇ ತೂಕಕ್ಕೆ ಹಾಕೋಕೆ ಹೊರಟಿದ್ದರು. ಆದರೆ ಮನೆಯ ಉಳಿದವರ ಸಮ್ಮತಿ ಇಲ್ಲದ ಕಾರಣ ಶಮಂತ್ ಉಳಿದುಕೊಂಡರು. ಇಲ್ಲವಾದರೆ ನಿನ್ನೆಯೇ ಮಂಜನ ತುಲಾಭಾರದ ಕಾರಣಕ್ಕೆ ಆತ ಮನೆಯಿಂದಾಚೆ ಬರಬೇಕಿತ್ತು. ಉಳಿದಂತೆ ಇವತ್ತು ಎಲ್ಲರಿಗಿಂತ ಭಿನ್ನ ಅನ್ನೋ ಕಾರಣಕ್ಕೆ ಅವರನ್ನು ಉಳಿಸುವ ಸಾಧ್ಯತೆ ಇದೆ. ಇಲ್ಲವೇ ಅವರಿಗೆ ಓಟಿಂಗ್ ಚೆನ್ನಾಗಿ ಆಗಿರುತ್ತೆ. ಆ ಕಾರಣಕ್ಕೆ ಅವರು ಮನೆಯವರ ವಿರೋಧದ ನಡುವೆಯೂ ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಇನ್ನೊಂದು ಕಾರಣ ಅಂದರೆ ಜನರ ಗೆಸ್ ಅನ್ನು ಕೊಂಚ ಉಲ್ಟಾ ಪಲ್ಟಾ ಮಾಡದಿದ್ರೆ ಜನ ಬಿಗ್ ಬಾಸ್ ಅಂದ್ರೆ ಹೀಗೆ ಅನ್ನೋ ತೀರ್ಮಾನಕ್ಕೆ ಬರೋ ಸಾಧ್ಯತೆ ಇದೆ. ಸೋ, ಜನರಿಗೆ ಶಾಕ್ ಕೊಡೋ ಉದ್ದೇಶಕ್ಕೂ ಈ ವಾರ ಅವರನ್ನು ಉಳಿಸಿಕೊಳ್ಳಬಹುದೇನೋ..

ಆದರೆ ಗೀತಾ ಭಾರತಿ ಭಟ್ ಆಟಕ್ಕಿಂತ ಮಾತು, ಬುದ್ಧಿವಾದ ಇಂಥದದ್ದರಲ್ಲೇ ಕಾಲ ಕಳೆಯೋ ಹಾಗೆ ಕಾಣುತ್ತಿದೆ. ಅವರಿಗೆ ಆಟಕ್ಕಿಂತ ತಾನು ಒಳ್ಳೆಯವಳು ಅಂತ ತೋರಿಸಿಕೊಳ್ಳೋದು ಮುಖ್ಯ ಆಗ್ತಿದೆ ಅನ್ನೋದು ಮತ್ತೊಂದು ಪಾಯಿಂಟ್. ನಿನ್ನೆವೀಕೆಂಡ್ ಶೋದಲ್ಲಿ ಸುದೀಪ್ ನಿಷ್ಠುರವಾಗಿಯೇ ಹೇಳಿದ್ದರು, ಆಟವನ್ನು ಆಟದಂತೆ ನೋಡಬೇಕು. ಸೋತವರಿಗಾಗಿ ದುಃಖಿಸುತ್ತಾ ಕೂತರೆ ಪ್ರಯೋಜನವಿಲ್ಲ.

ನಾವಲ್ಲ ಗುರು, ವೀಕ್ಷಕರು ಹೇಳ್ತಿದ್ದಾರೆ ಇವರದ್ದು ಸೂಪರ್ ಜೋಡಿ ಅಂತ; ಫೋಟೋ ನೋಡಿ ...

ಆಟ ಅನ್ನೋದು ಆಟ ಅಷ್ಟೇ ಅಂತ. ಆದರೆ ಗೀತಾ ಆಟವನ್ನು ಆಟದಂತೆ ಪರಿಗಣಿಸಿದಂತಿಲ್ಲ. ತನ್ನದೇ ಆಟ ಶುರು ಮಾಡಿದಂತಿದೆ. ಹೀಗೆ ಗೀತಾ ಎಲಿಮಿನೇಶನ್‌ಗೆ ಇನ್ನೊಂದಿಷ್ಟು ಕಾರಣ ಕೊಡಬಹುದು. ಸೋ, ಎಲಿಮಿನೇಶನ್ ಲೀಸ್ಟ್‌ನ ಮುಂಚೂಣಿಯಲ್ಲಿ ಶಮಂತ್ ಹೆಸರಿದ್ದರೂ ಗೀತಾ ಹೊರಬರೋದು ಬಹುತೇಕ ಖಚಿತ ಅನಿಸುತ್ತಿದೆ. ಅಲ್ಲಿಗೆ ಬಿಗ್‌ಬಾಸ್‌ ಮನೆಯಿಂದ ಸತತ ಮೂರನೇ ವಾರವೂ ಮಹಿಳಾ ಸ್ಪರ್ಧಿ ಹೊರಬಿದ್ದಂತಾಗುತ್ತೆ.