Asianet Suvarna News Asianet Suvarna News

ಡೋಂಟ್ ಬಿ ಸೋ ಹಾನೆಸ್ಟ್ ಆ್ಯಂಕರ್ ಅನುಶ್ರೀ; ಈ ಕಾಮೆಂಟ್‌ಗೆ ಸುಮ್ನೆ ಬಿಡ್ತಾರಾ ಚಿನಕುರುಳಿ!

ಇತ್ತೀಚೆಗೆ ಆ್ಯಂಕರ್ ಅನುಶ್ರೀ ಅವರದೊಂದು ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಕಾಮೆಂಟ್‌ ಸೆಕ್ಷನ್‌ನಲ್ಲಿದ್ದ ಒಬ್ಬರು ಬೇರೆಯವರ ಕಾಲೆಳೆಯುವ ಆ್ಯಂಕರ್ ಅನುಶ್ರೀ ಅವರನ್ನೇ ಸಖತ್‌ ಆಗಿ ಕಾಲೆಳೆದಿದ್ದಾರೆ. 

Do not be so honest anchor Anushree comment brings curiosity for her counter reaction srb
Author
First Published May 31, 2024, 11:37 AM IST

ಕನ್ನಡದ ಖ್ಯಾತ ನಟಿ, ನಿರೂಪಕಿ ಆ್ಯಂಕರ್ ಅನುಶ್ರೀ (Anchor Anushree) ಪಟಪಟ ಮಾತು, ಚಟಪಟ ನಗುವಿಗೆ ಫೇಮಸ್. ಅನುಶ್ರೀ ಅಂದ್ರೇ ಹಾಗೆ. ಅವರು ಹೋದಲ್ಲಿ ಬಂದಲ್ಲಿ ನಗುವಿನ ಬಗ್ಗೆ ಚಿಮ್ಮುತ್ತದೆ, ಅಲ್ಲಿದ್ದವರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಅವರು ಆ್ಯಂಕರಿಂಗ್ ಮಾಡುತ್ತಿರಲಿ, ಅಥವಾ ತಮ್ಮದೇ ಯೂ ಟ್ಯೂಬ್ ಚಾನೆಲ್‌ನಲ್ಲಿ ಯಾವುದೋ ಸೆಲೆಬ್ರಿಟಿ ಸಂದರ್ಶನ ಮಾಡುತ್ತಿರಲಿ, ಅಲ್ಲೆಲ್ಲಾ ಲೈಟ್ ಆಗಿ ಕಾಲೆಳೆಯುತ್ತ, ನಗು ಉಕ್ಕಿಸುತ್ತ ಅದಕ್ಕೆ ಸಾಕಷ್ಟು ತರಹೇವಾರಿ ಕಾಮೆಂಟ್‌ಗಳನ್ನು ಸ್ವೀಕರಿಸುತ್ತ, ಅದಕ್ಕೂ ಖುಷಿ ಪಡುತ್ತ ಇರುವವರು ಆ್ಯಂಕರ್ ಅನುಶ್ರೀ. 

ಇತ್ತೀಚೆಗೆ ಆ್ಯಂಕರ್ ಅನುಶ್ರೀ ಅವರದೊಂದು ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅನುಶ್ರೀ ಅವರು ನಟ ದಿಗಂತ್ (Diganth), ನಟ ಲೂಸ್‌ ಮಾದ ಯೋಗೇಶ್ ಸಂದರ್ಶನ ಮಾಡಿದ್ದು, ಅಲ್ಲಿ ಹಿರಿಯ ನಟ ಅಚ್ಯುತ್ ಅವರಿಗೆ ಅನುಶ್ರೀ ಜೊತೆ ಇದ್ದ ದಿಗಂತ್ ತಮಾಷೆಯಾಗಿ ಮಾತನಾಡಿ ನಗು ಉಕ್ಕಿಸಿದ್ದಾರೆ. ಪಕ್ಕದಲ್ಲಿದ್ದ ಅನುಶ್ರೀಗೆ ಫೋನ್ ಕೊಟ್ಟ ದಿಗಂತ್, ಮುಂದಿನ ಫನ್ನಿ ಮಮೆಂಟ್ಸ್ ಎದುರು ನೋಡುತ್ತಿದ್ದರು. ಅಂದುಕೊಂಡಂತೆ ದಿಗಂತ್ ಮೊಬೈಲ್ ತೆಗೆದುಕೊಂಡ ಅನುಶ್ರೀ ಅಚ್ಯುತ್‌ಗೆ (Achyuth Kumar) 'ಫ್ರಾಂಕ್ ಕಾಲ್' ಮಾಡುತ್ತಾರೆ. 

ನೈಟ್ ಮೆಸೇಜ್ ಮಾಡಿ ಅಂದಿದ್ರಿ ನಂಬರ್ ಕೊಟ್ಟು; ಅನುಶ್ರೀಗೆ ತಗ್ಲಾಕೊಂಡ್ರಾ ಅಚ್ಯುತ್?

'ಹಾಯ್.., ನಾನು ಬ್ಯಾಂಕಾಕ್‌ನಲ್ಲಿ ನಿಮಗೆ ಸಿಕ್ಕಿದ್ದೆ.. ನಾನು ಬೆಂಗಳೂರಿನ ಹುಡುಗಿ ಅಂತ ಪರಿಚಯ ಮಾಡ್ಕೊಂಡಿದ್ದೆ.. ನೀವು ನನ್ನ ಮಾತಾಡ್ಸಿ, ನಿಮ್ಮ ನಂಬರ್ ಎಲ್ಲಾ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂತ ಹೇಳಿದ್ರಿ.. ಎಂದು ಹೇಳುತ್ತಾರೆ. ಅತ್ತ ಕಡೆಯಿಂದ ಶಾಕ್ ಆದವರಂತೆ ನಟ ಅಚ್ಯುತ್ ಅವರು 'ನೈಟಾ..?' ಎನ್ನಲು ಅಲ್ಲಿ ಅನುಶ್ರೀ ಪಕ್ಕದಲ್ಲಿರುವ ನಟ ದಿಗಂತ್, ಲೂಸ್ ಮಾದ ಖ್ಯಾತಿಯ ಯೋಗೇಶ್ ಹಾಗೂ ಇತರರು ಬಿದ್ದು ಬಿದ್ದೂ ನಗುತ್ತಾರೆ. ಅಚ್ಯುತ್ ಅವರಿಗೆ ಅದು ಅನುಶ್ರೀ ಅಂತ ಗೊತ್ತಾಗಲೇ ಇಲ್ಲ!

ಬೆಂಕಿ ತನಿಷಾಗೆ 'ಪೋರ್ನ್‌ ಮೂವಿ'ನಲ್ಲಿ ನಟಿಸ್ತೀರಾ ಅಂತ ಕೇಳಿ ಹಿಗ್ಗಾಮುಗ್ಗಾ ಉಗಿಸ್ಕೊಂಡ!

ಫೋನಿನಲ್ಲಿ ಹಲವರ ನಗುವನ್ನು ಕೇಳಿದ ನಟ ಅಚ್ಯುತ್ ಅವರು ಶಾಕ್ ಆಗಿ, 'ಹಲೋ, ನಿಮ್ಮ ವೈಸ್ ಗೊತ್ತಾಗುತ್ತಿಲ್ಲ, ನೀವು ಯಾವ್ ಚಾನೆಲ್‌ನವರು' ಎಂದು ಮುಗ್ಧರಂತೆ ಕೇಳುತ್ತಾರೆ. ಅಚ್ಯುತ್ ಮಾತನ್ನು ಕೇಳಿ ಅಲ್ಲಿದ್ದ ಎಲ್ಲರೂ ನಕ್ಕಿದ್ದೇ ನಕ್ಕಿದ್ದು! ದಿಗಂತ್ ಮೊಬೈಲ್‌ನಿಂದ ಆ್ಯಂಕರ್ ಅನುಶ್ರೀ ಮಾಡಿದ್ದ ಫ್ರಾಂಕ್‌ ಕಾಲ್‌ಗೆ ನಟ ಅಚ್ಯುತ್ ಅವರು ಬೇಸ್ತು ಬಿದ್ದಿದ್ದಾರೆ. ಅವರ ಫಜೀತಿ ನೋಡಿ ದಿಗಂತ್, ಅನುಶ್ರೀ, ಲೂಸ್‌ ಮಾದ ಯೋಗಿ ಹಾಗೂ ಎಲ್ಲರೂ ತಮಾಷೆಗಾಗಿ ಎಂಜಾಯ್ ಮಾಡಿದ್ದಾರೆ.

ರವಿಚಂದ್ರನ್ ತಬ್ಬಿಕೊಂಡ ಅನುಶ್ರೀ, ಹುಟ್ಟುಹಬ್ಬದಂದು ಮಗಳಾಗಿಬಿಟ್ರಾ ಅಂತಿದಾರಲ್ಲ! 

ಈ ಫ್ರಾಂಕ್‌ ಕಾಲ್ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅದನ್ನು ನೋಡಿ ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ. ಆ್ಯಂಕರ್ ಅನುಶ್ರೀ ಅವರ ಸಮಯಪ್ರಜ್ಞೆ, ಧ್ವನಿ ಬದಲಾಯಿಸಿ ಮಾತನಾಡುವ ಪ್ರತಿಭೆ ಹಾಗೂ ತಮಾಷೆ ಮಾಡಿ, ಕಾಲೆಳೆದು ಎಲ್ಲರನ್ನೂ ನಗಿಸಿ ತಾವೂ ನಕ್ಕು ಎಂಜಾಯ್ ಮಾಡುವ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ. ದಿಗಂತ್, ಲೂಸ್‌ ಮಾದ ಎಲ್ಲರೂ ಮಾತನಾಡಿರುವ ರೀತಿ ಸಖತ್ ಪನ್ನಿಯಾಗಿದೆ! ಹಾಗೇ, ಅನುಶ್ರೀಯವರ ಫನ್‌ ಮೆಚ್ಚಿ ಹಲವರು ಕಾಮೆಂಟ್ ಮಾಡಿದ್ದಾರೆ. 

ಮಸಿ ಬಳಿದುಬಿಟ್ರಾ 'ದಿಯಾ' ನಟಿ ಖುಷಿ, ಸ್ಯಾಂಡಲ್‌ವುಡ್‌ಗೆ ಯಾಕೆ ಹೀಗಂತ ಹೇಳಿದ್ದು?

ಕಾಮೆಂಟ್‌ ಸೆಕ್ಷನ್‌ನಲ್ಲಿದ್ದ ಒಬ್ಬರು ಬೇರೆಯವರ ಕಾಲೆಳೆಯುವ ಆ್ಯಂಕರ್ ಅನುಶ್ರೀ ಅವರನ್ನೇ ಸಖತ್‌ ಆಗಿ ಕಾಲೆಳೆದಿದ್ದಾರೆ. 'ನಿಮ್ಮ ನಂಬರ್ ಎಲ್ಲಾ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂತ ಹೇಳಿದ್ರಿ' ಎಂಬ ಅನುಶ್ರೀ ಅವರ ಮಾತಿಗೆ, ಡೋಂಟ್ ಬಿ ಸೋ ಹಾನೆಸ್ಟ್ ಆ್ಯಂಕರ್ ಅನುಶ್ರೀ' ಅಂತ ಕಾಮೆಂಟ್ ಮಾಡಿದ್ದಾರೆ. ಅದು ಪಕ್ಕಾ ತಮಾಷೆಗೆ ಮಾಡಿದ ಕಾಮೆಂಟ್. 

ಸೀತಾ ಟಾರ್ಚರ್: ರಾಮ್, ನಿಂಗಿದು ಬೇಕಿತ್ತಾ ಮಗನೇ..ವಾಪಸ್ ಹೊಂಟೋಗು ಶಿವನೇ..!

ಆದರೆ, ಅದನ್ನೇ ಕೆಲವು ಕಿಡಿಗೇಡಿಗಳು ಅನಾವಶ್ಯಕ ಎಂಜಾಯ್ ಮಾಡಬಹುದು ಎಂಬುದನ್ನು ಅರಿಯದವರಲ್ಲ ಅನುಶ್ರೀ. ಸೋ, ಆ ಕಾಮೆಂಟ್‌ಗೆ 'ಬೆಂಕಿಪೊಟ್ನ' ಖ್ಯಾತಿಯ ನಟಿ ಅನುಶ್ರೀ ಅದ್ಯಾವ ರೀತಿ ಕೌಂಟರ್ ಕೊಡಬಹುದು ಎಂದು ಹಲವರು ಕಾಯುತ್ತಿದ್ದಾರೆ. ಏಕೆಂದರೆ, ಹೇಳಿ ಕೇಳಿ ಅವರು ಆ್ಯಂಕರ್ ಅನುಶ್ರೀ. ಮಾತಾಡ್ದೇ ಸುಮ್ಮೆ ಇರ್ತಾರಾ ಅಂತಿದಾರೆ. ಕಾದು ನೋಡ್ಬೇಕು ಅಷ್ಟೇ ಅನುಶ್ರೀ ಕಡೆಯಿಂದ ರೀ-ಕಾಮೆಂಟ್‌ ಅದೇನ್ ಬರುತ್ತೆ ಅಂತ!

Latest Videos
Follow Us:
Download App:
  • android
  • ios