ಬಿಗ್ ಬಾಸ್‌ ಸೀಸನ್‌ 8ರ ಸ್ಟ್ರಾಂಗ್ ಮಹಿಳಾ ಸ್ಪರ್ಧಿ ಆಗಿದ್ದ ದಿವ್ಯಾ ಉರುಡುಗ ಯೂರಿನ್‌ ಟ್ರ್ಯಾಕ್ ಇನ್ಫೆಕ್ಷನ್‌ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಚಿಕಿತ್ಸೆಯಲ್ಲಿರುವ ದಿವ್ಯಾ ಮತ್ತೆ ರಿಯಾಲಿಟಿ ಶೋಗೆ ಹಿಂದಿರುಗುವುದು ಯಾವಾಗ? ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದರು. 

ಮೂತ್ರ ಸೋಂಕು: ರೋಗಲಕ್ಷಣ, ಕಾರಣ ಮತ್ತು ತಡೆಗಟ್ಟುವ ವಿಧಾನವಿದು

ದಿವ್ಯಾ ಆರೋಗ್ಯದ ಬಗ್ಗೆ ಸಹೋದರರು ಈ ಹಿಂದೆ ಮಾಹಿತಿ ನೀಡಿದ್ದರು. ದಿವ್ಯಾ ಗುಣಮುಖರಾಗುತ್ತಿದ್ದಾರೆ. ಆದರೆ ಬಿಗ್ ಬಾಸ್‌ ಹಿಂದಿರುಗುವುದರ ಬಗ್ಗೆ ಮಾಹಿತಿ ಇಲ್ಲ. ಮುಖ್ಯಸ್ಥರು ಏನು ಹೇಳುತ್ತಾರೋ ಹಾಗೆ ಮಾಡಲಾಗುತ್ತದೆ ಎಂದಿದ್ದರು. ಇದೀಗ ವಾಹಿನಿಯ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್ ಖಾಸಗಿ ಮಾಧ್ಯವೊಂದಕ್ಕೆ ಈ ವಿಷಯವಾಗಿ ಸ್ಪಷ್ಟನೆ ನೀಡಿದ್ದು, ದಿವ್ಯಾ ರಿಯಾಲಿಟಿ ಶೋ ಮನೆಗೆ ಮರಳುವುದಾಗಿ ಹೇಳಿದ್ದಾರೆ.

'ದಿವ್ಯಾ ಚೇತರಿಸಿಕೊಳ್ಳುತ್ತಿದ್ದಾರೆ. ಆಕೆಯನ್ನು ಮತ್ತೆ ಬಿಗ್ ಬಾಸ್‌ಗೆ ಕರೆತರುವುದರ ಬಗ್ಗೆ ನಮಗೂ ಚಿಂತೆ ಇದೆ. ಆದರೆ ಕೊರೋನಾ ಕೇಸ್‌ಗಳು ಹೆಚ್ಚಾಗುತ್ತಿರುವ ಕಾರಣ ಆಕೆಯ ಕೊರೋನಾ ಟೆಸ್ಟ್ ನೆಗೆಟಿವ್ ಬರಬೇಕು ಹಾಗೂ 15 ದಿನಗಳ ಕಾಲ ಐಸೋಲೇಟ್ ಆಗಬೇಕು. ಮನೆಯಲ್ಲಿರುವ ಇನ್ನಿತರೆ ಸದಸ್ಯರಿಗೆ ಸೋಂಕು ತಾಗಬಾರದು,' ಎಂದು ಹೇಳಿದ್ದಾರೆ. 

ನಾವಲ್ಲ ಗುರು, ವೀಕ್ಷಕರು ಹೇಳ್ತಿದ್ದಾರೆ ಇವರದ್ದು ಸೂಪರ್ ಜೋಡಿ ಅಂತ; ಫೋಟೋ ನೋಡಿ

ದಿವ್ಯಾ ಇಡೀ ಮನೆಯ ಸದಸ್ಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಲ್ಲೂ ದಿವ್ಯಾ ಹಾಗೂ ಅರವಿಂದ್ ಒಂದೊಳ್ಳೆ ಸ್ನೇಹಿತರು. ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ದಿವ್ಯಾ ಇಲ್ಲದ ಕಾರಣ ಅರವಿಂದ್ ಬೇಸರದಲ್ಲಿದ್ದಾರೆ. ತಮ್ಮ ಕೆಲಸಗಳನ್ನು ಮಾಡಿ ಆನಂತರ ದಿವ್ಯಾ ಕೆಲಸಗಳನ್ನೂ ಮಾಡುತ್ತಿದ್ದಾರೆ. ಅರವಿಂದ್ ದಿ ರಿಯಲ್ ಜೆಂಟಲ್‌ಮ್ಯಾನ್‌ ಎಂದು ನೆಟ್ಟಿಗರು ಮೆಚ್ಚುಗೆಯ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.