Asianet Suvarna News Asianet Suvarna News

ಬಿಗ್ ಬಾಸ್ ಮನೆಯಲ್ಲಿದ್ದುಕೊಂಡೆ ಕೋರ್ಟ್ ಮೆಟ್ಟಿಲೇರಿದ ಬಿಗ್‌ಬಾಸ್‌ ದಿವ್ಯಾ!

* ನ್ಯಾಯಾಲಯದ ಮೊರೆ   ಹೋದ ದಿವ್ಯಾ ಯು
* ಮಾನಹಾನಿ ಸುದ್ದಿ ಪ್ರೆಸಾರಕ್ಕೆ ತಡೆ  ಕೋರಿ ಅರ್ಜಿ
* ಬಿಗ್ ಬಾಸ್ ಮನೆಯ ಫಿನಾಲೆ ರೇಸ್ ನಲ್ಲಿದ್ದಾರೆ

divya-uruduga-ask-court-to-not-to-telecast-any-deformative-content-against-her mah
Author
Bengaluru, First Published Jul 31, 2021, 6:27 PM IST
  • Facebook
  • Twitter
  • Whatsapp

ಬೆಂಗಳೂರು(ಕಜು. 31) ಕನ್ನಡ ಬಿಗ್ ಬಾಸ್ ಮನೆಯಲ್ಲಿರುವ ದಿವ್ಯಾ ಉರುಡುಗ ನ್ಯಾಯಾಲಯದ ಮೊರೆ ಹೋಗಿದ್ದಾರೆ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.  ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ  ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ಮಾನಹಾನಿಕರ ಸುದ್ದಿ ಮಾಡದಂತೆ ನಿರ್ಬಂಧ ಕೋರಿ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.   ದಿವ್ಯಾ ಉರುಗಡುಗ  ಅವರಿಗೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದ್ದವು. 

ಮಿಡಲ್ ಫಿಂಗರ್ ತೋರಿದ ಅರವಿಂದ್ ಯಾಕೆ ಹೈಲೈಟ್ ಆಗಲಿಲ್ಲ?

ಫಿನಾಲೆಗೆ ಕೆಲವೇ ದಿನ: ಫಿನಾಲೆಗೆ   ದಿವ್ಯಾ ಏರುವುದು ಬಹುತೇಕ ಖಚಿತವಾಗಿದೆ. ಬಿಗ್ ಬಾಸ್ ಸೀಸನ್ ಎಂಟು ಈ ವರ್ಷ ಸೆಕೆಂಡ್ ಇನಿಂಗ್ಸ್ ನಲ್ಲಿ ಮುಂದಕ್ಕೆ ಹೋಗುತ್ತಿದೆ. ಕೊರೊನಾ ಕಾರಣಕ್ಕೆ  ಬಿಗ್ ಬಾಸ್ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಕೊರೋನಾ ಹತೋಟಿಗೆ ಬಂದ ನಂತರ ಮತ್ತೆ ಮುಂದುವರಿಸಲಾಗಿದೆ.

ಬೈಕರ್ ಅರವಿಂದ್, ಕಾಮಿಡಿ ಕಲಾವಿದ ಮಂಜು ಪಾವಗಡ, ಯೂಟ್ಯೂಬ್ ಸ್ಟಾರ್ ಶಮಂತ್ ಬ್ರೋ ಗೌಡ, ನಟಿ ದಿವ್ಯಾ ಸುರೇಶ್, ನಟಿ ದಿವ್ಯಾ ಉರುಡುಗ, ಶುಭಾ ಪೂಂಜಾ , ವೈಷ್ಣವಿ ಗೌಡ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಕೊನೆಯ ರೇಸ್ ನಲ್ಲಿದ್ದಾರೆ. 

Follow Us:
Download App:
  • android
  • ios