ಚಹಲ್ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ನಟನ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ ಧನಶ್ರೀ

ಯುಜುವೇಂದ್ರ ಚಹಲ್ ಹಾಗೂ ಪತ್ನಿ ಧನಶ್ರಿ ವರ್ಮಾ ನಡುವಿನ ಸಂಬಂಧ ಸರಿಯಾಗಿಲ್ಲ ಅನ್ನೋ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿದೆ. ಈ ವದಂತಿಗಳ ನಡುವೆ ಧನಶ್ರಿ ವರ್ಮಾ ನಟನ ಜೊತೆ ಕಾಣಿಸಿಕೊಂಡು ಭರ್ಜರಿ ಸ್ಪೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಬಹಿರಂಗವಾಗಿದೆ.

Dhanashree Verma seen with actor Amid separation rumour from Yuzvendra Chahal

ಮುಂಬೈ(ಫೆ.07) ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚೆಹಾಲ್ ದಾಂಪತ್ಯ ಜೀವನ ಸಂಕಷ್ಟದಲ್ಲಿದೆ ಅನ್ನೋದು ಮಾತು ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದೆ. ಪತ್ನಿ ಧನಶ್ರಿ ವರ್ಮಾ ಈಗಾಗಲೇ ಪತಿ ಚಹಾಲ್ ಮನೆಯಿಂದ ಹೊರನೆಡೆದಿದ್ದಾರೆ. ಧನಶ್ರಿ ಪೋಷಕರ ಜೊತೆಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಧನಶ್ರಿ ವರ್ಮಾ ನಟನ ಜೊತೆ ಕಾಣಿಸಿಕೊಂಡಿದ್ದಾರೆ. ನಟನ ಜೊತೆ ಭರ್ಜರಿ ಸ್ಪೆಪ್ಸ್ ಹಾಕುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಧನಶ್ರೀ ವರ್ಮಾ ಹಾಗೂ ಚಹಾಲ್ ನಡುವಿನ ವಿಚ್ಛೇದನ ಮತ್ತೆ ಭಾರಿ ಚರ್ಚೆಯಾಗುತ್ತಿದೆ.

ಯುಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳಿಗೆ ಪುಷ್ಠಿ ನೀಡುವ ಹಲವು ಘಟನೆಗಳು ನಡೆದಿದೆ. ಇವರಿಬ್ಬರು ಜೊತೆಯಾಗಿರುವ ಫೋಟೋಗಳು ಇದೀಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ಡಿಲೀಟ್ ಮಾಡಿದ್ದಾರೆ. ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಸುದ್ದಿಗಳ ನಡುವೆ ಇದೀಗ ಧನಶ್ರೀ ವರ್ಮಾ ಪಂಜಾಬಿ ನಟ ಗಿಪ್ಪಿ ಗ್ರೇವಾಲ್ ಜೊತೆ ಕಾಣಿಸಿಕೊಂಡಿದ್ದಾರೆ.  ಗಿಪ್ಪಿ ಗ್ರೇವಾಲ್ ಜೊತೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.

ಧನಶ್ರೀ ವರ್ಮಾ ಅವರ ಗ್ಲಾಮರಸ್ ಲುಕ್ ಫೋಟೋಗಳು, ಒಂದಕ್ಕಿಂತ ಮತ್ತೊಂದು ಚೆಂದ!

ಧನಶ್ರಿ ವರ್ಮಾ ಸದ್ಯ ಪೋಷಕರ ಜೊತೆಗಿದ್ದಾರೆ ಎಂದು ವರದಿಯಾಗಿದೆ. ಧನಶ್ರೀ ವರ್ಮಾ ಇದೀಗ ಹಲವು ಆಲ್ಬಮ್ ಹಾಡು, ಸೀರಿಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಶೂಟಿಂಗ್ , ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದೆ. ಇದೀಗ ಪಂಜಾಬಿ ನಟ ಗಿಪ್ಪಿ ಗ್ರೇವಾಲ್ ಜೊತೆ ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಪಂಜಾಬಿ ಶೈಲಿಯ ಹಾಡಿಗೆ ಧನಶ್ರೀ ವರ್ಮಾ ಹೆಜ್ಜೆ ಹಾಕಿದ್ದಾರೆ. ಧನಶ್ರೀ ವರ್ಮಾ ಖುದ್ದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಶೂಟಿಂಗ್ ಸಮಯದ ಅತ್ಯಂತ ಸಂತೋಷಕರ ಸಂದರ್ಭ ಎಂದು ಬರೆದುಕೊಂಡಿದ್ದಾರೆ.

ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ಚಹಾಲ್‌‌ನಿಂದ ಧನಶ್ರಿ ದೂರವಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುತೇಕರು ಚಹಾಲ್ ಹಾಗೂ ಧನಶ್ರೀ ವರ್ಮಾ ದಾಂಪತ್ಯ ಜೀವನದ ಕುರಿತು ಕಮೆಂಟ್ ಮಾಡಿದ್ದಾರೆ. ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

 

 

ಚಹಲ್ ಮತ್ತು ಧನಶ್ರೀ ನಡುವೆ ಈಗ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇನ್ನೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ದೀರ್ಘಕಾಲದಿಂದ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಮದುವೆ ವಾರ್ಷಿಕೋತ್ಸವದಂದು ಶುಭಾಶಯಗಳನ್ನು ಕೋರಿಲ್ಲ. ಇದಲ್ಲದೆ, ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಯುಜಿ ಜಂಟಿ ಫೋಟೋಗಳನ್ನು ಸಹ ತೆಗೆದುಹಾಕಿದ್ದಾರೆ. ಇದರಿಂದ ಈ ಸುದ್ದಿಗೆ ಮತ್ತಷ್ಟು ಪುಷ್ಟಿ ದೊರೆತಿದೆ.

ಇತ್ತೀಚೆಗೆ ಧನಶ್ರೀ ಸಾಮಾಜಿಕ ಮಾಧ್ಯಮದಲ್ಲಿ ತಾಯಿಯೊಂದಿಗೆ ಭಾವನಾತ್ಮಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದು ಅವರ ವೈಯಕ್ತಿಕ ಜೀವನದ ಬಗ್ಗೆ ಊಹಾಪೋಹಗಳನ್ನು ಮತ್ತಷ್ಟು ಹೆಚ್ಚಿಸಿದೆ. ತನ್ನ ಮದುವೆಯ ಸುತ್ತ ನಡೆಯುತ್ತಿರುವ ಚರ್ಚೆಗಳ ನಡುವೆ ಧನಶ್ರೀ ತನ್ನ ಕುಟುಂಬದ ಮನೆಗೆ ಮರಳಿದ್ದಾರೆಯೇ ಎಂದು ಅಭಿಮಾನಿಗಳು ಕುತೂಹಲದಿಂದಿದ್ದಾರೆ.ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಡಿಸೆಂಬರ್ 2020 ರಲ್ಲಿ ಗುರುಗ್ರಾಮದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಂಪತಿಗಳ ಸಂಬಂಧವು ಸಾರ್ವಜನಿಕ ಗಮನದ ವಿಷಯವಾಗಿದೆ. ಇತ್ತೀಚಿನ ಘಟನೆಗಳು ನಡೆಯುತ್ತಿರುವ ಊಹಾಪೋಹಗಳಿಗೆ ಮತ್ತಷ್ಟು ಪದರಗಳನ್ನು ಸೇರಿಸಿವೆ. ಇತ್ತ ಚಹಾಲ್ ಕೂಡ ಟೀಂ ಇಂಡಿಯಾದಿಂದ ಹೊರಬಿದ್ದಿದ್ದಾರೆ. ಸದ್ಯ ಚಹಾಲ್ ಕೂಡ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. 

ಚಹಲ್ ಜತೆ ವಿಚ್ಛೇದನ ವದಂತಿ: ಕೊನೆಗೂ ಮೌನ ಮುರಿದ ಧನಶ್ರೀ ವರ್ಮಾ! ಏನಂದ್ರು ಗೊತ್ತಾ?
 

Latest Videos
Follow Us:
Download App:
  • android
  • ios