ರಿಯಾಲಿಟಿ ಶೋನಿಂದ ಎಲಿಮನೇಟ್ ಆದ ಮೊದಲ ಸೆಲೆಬ್ರಿಟಿ ಜೋಡಿ 'DA'.

ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡು, ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿರುವ ರಾಜ ರಾಣಿ ರಿಯಾಲಿಟಿ ಶೋ ಮೂರು ವಾರಗಳು ಪೂರೈಸಿದ ನಂತರ ಒಂದು ಜೋಡಿ ಎಲಿಮನೇಟ್ ಆಗಿದೆ. ಕಿರುತೆರೆ ಸೆಲೆಬ್ರಿಟಿ ಕಪಲ್ ದೀಪಿಕಾ ಮತ್ತು ಆಕರ್ಶ್.

Add Asianetnews Kannada as a Preferred SourcegooglePreferred

ತೀರ್ಪುಗಾರರಾದ ನಟಿ ತಾರಾ ಅನುರಾಧ ಹಾಗೂ ನಟ ಸೃಜನ್ ಲೋಕೇಶ್ ಎರಡು-ಮೂರು ವಾರಗಳಲ್ಲಿ ನಡೆದ ಕಾರ್ಯಕ್ರಮದ ಮೇಲೆ ಅಂಕ ನೀಡಿದ್ದಾರೆ. ಯಾರು ಅತಿ ಕಡಿಮೆ ಅಂಕ ಗಳಿಸಿರುತ್ತಾರೋ ಅವರು ಈ ಶೋನಿಂದ ಎಲಿಮನೇಟ್ ಆಗುತ್ತಾರೆ. 'ರೊಮ್ಯಾಂಟಿಕ್ ಕುಕ್ಕಿಂಕ್' ಎಪಿಸೋಡ್‌ಗೆ ದೀಪಿಕಾ ಮತ್ತು ಆಕರ್ಶ್ ಬಾರದ ಕಾರಣ ಅವರಿಗೆ ಎಲ್ಲರಿಗಿಂತ ಅತಿ ಕಡಿಮೆ ಅಂಕ ಸಿಕ್ಕಿದೆ. ಎಲಿಮನೇಟ್ ಆಗುವ ಸಂದರ್ಭದಲ್ಲಿ ಇಬ್ಬರೂ ಕಾರ್ಯಕ್ರಮದ ಬಗ್ಗೆ ಹಾಗೂ ಮದುವೆ ಆದ ನಂತರ ಮೊದಲ ಬಾರಿ ಆನ್‌ ಸ್ಕ್ರೀನ್‌ ಎಷ್ಟು ಎಂಜಾಯ್ ಮಾಡಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ. 

ಮಜ್ಜಿಗೆ ಹುಳಿ ಕಲರ್ ಎನು?; ಚಂದನ್ ಶೆಟ್ಟಿ- ನಿವೇದಿತಾ ಅಡುಗೆ ಸರ್ಕಸ್ ನೋಡಿ..

12 ಸೆಲೆಬ್ರಿಟಿ ಕಪಲ್‌ಗಳ ಜೀವನ ಕಂಡು ಸೃಜನ್ ಲೋಕೇಶ್ 'A perfect marriage is just two imperfect people who refuse to give up on each other' ಎಂದು ಹೇಳುತ್ತಾರೆ. ವರ್ಷಗಳ ಕಾಲ ಹಿರಿಯ ನಟ ರಾಜು ತಾಳಿಕೋಟಿ ಅವರು ತಮ್ಮ ಮಗನ ಜೊತೆ ಮಾತು ಬಿಟ್ಟಿದ್ದರು. ಈ ವಿಚಾರ ತಿಳಿದು ತಾರಾ ಅವರ ಪುತ್ರನನ್ನು ಸಂಪರ್ಕಿಸಿ, ವೇದಿಕೆ ಮೇಲೆ ಕರೆತಂದು ಕುಟುಂಬದ ಜೊತೆ ಒಂದು ಮಾಡುತ್ತಾರೆ.