ಕನ್ನಡ ಚಿತ್ರರಂಗದ ಮಾಸ್‌ ಲೀಡರ್‌ ಹಾಗೂ ಲವರ್‌ ಮ್ಯಾನ್‌ ಕರುನಾಡ ಜನತೆಯ ಪ್ರೀತಿಯ ಡಿ-ಬಾಸ್ ದರ್ಶನ್‌ ಅಭಿನಯದ 'ಒಡೆಯ' ಇತ್ತೀಚಿಗೆ ರಾಜ್ಯದಾದ್ಯಂತ ತೆರೆ ಕಂಡು ಒಂದು ವಾರದಲ್ಲಿ ಬಾಕ್ಸ್‌ ಆಫೀಸ್ ಕಲೆಕ್ಷನ್ ಮುಟ್ಟಿದೆ ಎನ್ನಲಾಗಿದೆ. 

ಇಂದು ದರ್ಶನೋತ್ಸವ;ಒಡೆಯ ಪಕ್ಕಾ ಕಮರ್ಷಿಯಲ್‌ ಸಿನಿಮಾ!

ಇನ್ನು ಎಲ್ಲೆಡೆ ಪೋಸ್ಟರ್‌ ಹಾಕುತ್ತಾ ಸಂಭ್ರಮಿಸುತ್ತಿರುವ ದರ್ಶನ್ ಅಭಿಮಾನಿಗಳು ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ಕುರಿ ಪ್ರತಾಪ್‌ಗೆ ಮತಯಾಚಿಸಿದ್ದಾರೆ.  ಡಿ-ಬಾಸ್ ಸೇನೆ ಮದ್ದೂರು ಒಡೆಯ ಪೋಸ್ಟರ್‌ನಲ್ಲಿ 'ಓಟ್‌ ಫಾರ್ ಕುರಿ ಪ್ರತಾಪ್' ಎಂದು ಬರೆಸಿದ್ದಾರೆ. ಈ ಫೋಸ್ಟರ್‌ ಪ್ರೇಕ್ಷಕರ ಗಮನ ಸೆಳೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

 

ರಾತ್ರಿ ಆದ್ರೆ ಟಿವಿ ಮುಂದೆ ಕೂತು ಕುರಿ ಪ್ರತಾಪ್  ಕಾಮಿಡಿಗೆ  ಕಾಯುವ ವೀಕ್ಷಕರು ಪ್ರತಿ ಸಲವೂ ಪ್ರತಾಪ್ ನಾಮಿನೇಟ್ ಆದಾಗ ಓಟ್ ಮಾಡಿ ಸೇವ್ ಮಾಡಿದ್ದಾರೆ. ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಜನರಿಗೆ  'ಕುರಿ' ಮಾಡುವ ಶೋ ನಿರೂಪಕನಾಗಿದ್ದು ಆ ಕಾರಣದಿಂದ ಎಲ್ಲರೂ ಅವರನ್ನು ಕುರಿ ಎಂದೇ ಗುರುತಿಸುತ್ತಾರೆ.