ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಸಹ ಸ್ಪರ್ಧಿಯೊಬ್ಬರ ಉಡುಪನ್ನು ಬಾತ್‌ರೂಮ್‌ನಿಂದ ಹೊರಹಾಕಿದ ಆರೋಪದ ಮೇಲೆ ಕಲಾವಿದೆ ಕುಶಲ ದೂರು ನೀಡಿದ್ದು, ಆಯೋಗವು ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತನಿಖೆಗೆ ಸೂಚಿಸಿದೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ಸೀಸನ್ ಕನ್ನಡ 12ರ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ದೂರು ದಾಖಲಾಗಿದೆ. ರಾಜ್ಯ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ಬೆಂಗಳೂರು ಕಮಿಷನರ್ ಗೆ ಪತ್ರ ಬರೆದಿದೆ. ಗಿಲ್ಲಿ ನಟನ ವಿರುದ್ಧ ಕಲಾವಿದೆ ಕುಶಲ ಎಂಬುವವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ಮಹಿಳಾ ಆಯೋಗದಿಂದ ಬೆಂಗಳೂರು ಕಮಿಷನರ್ ಗೆ ದೂರು ಅರ್ಜಿಯನ್ನ ನಿಯಾಮಾನುಸಾರ ಪರಿಶೀಲಿಸಿ. ಕೈಗೊಂಡ ಕ್ರಮದ ವರದಿಯನ್ನ ಆಯೋಗಕ್ಕೆ ಕೊಡುವಂತೆ ಪತ್ರ ಬರೆಯಲಾಗಿದೆ.
ಪತ್ರದಲ್ಲೇನಿದೆ?
ಕಲರ್ಸ್ ಕನ್ನೆ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗಿಲ್ಲಿ ಎಂಬ ಹಾಸ್ಯ ನಟನು ರಿಷ ಎಂಬ ಹೆಣ್ಣು ಮಗಳ ಉಡುಪನ್ನು ಬಾತ್ ರೂಮಿನಿಂದ ತಂದು ಹೊರ ಹಾಕಿರುವುದಾಗಿ ತಿಳಿಸಿರುತ್ತಾರೆ. ಹೆಣ್ಣು ಮಕ್ಕಳ ಉಡುಪನ್ನು ಮುಟ್ಟುವ ಅಧಿಕಾರ ನೀಡಿದ್ಯಾರು? ಇದರಿಂದ ಸಮಾಜಕ್ಕೆ ಯಾವ ರೀತಿ ಸಂದೇಶವನ್ನು ಪ್ರಸಾರ ಮಾಡಲು ಹೊರಟಿದೆ? ಕಲರ್ಸ್ ಶೋವನ್ನು ನಿಲ್ಲಿಸಬೇಕೆಂದು ಆಯೋಗದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿರುತ್ತಾರೆ.
ಅರ್ಜಿದಾರರ ಅರ್ಜಿಯಲ್ಲಿನ ವಿಷಯದ ಕುರಿತು ನಿಯಮಾನುಸಾರ ಪರಿಶೀಲಿಸಿ. ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಕೈಗೊಂಡ ಕ್ರಮದ ವರದಿಯನ್ನು ಮಹಿಳಾ ಆಯೋಗಕ್ಕೆ ಕಳುಹಿಸಿ ಕೊಡುವಂತೆ ಮನವಿ ಮಾಡಲಾಗಿದೆ.
