ಮೀನು ಇಷ್ಟ ಅಂತ ಈ ಹುಡುಗನನ್ನು ಲವ್ ಮಾಡಿದ ಕಿರುತೆರೆ ನಟಿ PK; ವಿಡಿಯೋದಲ್ಲಿ ಮನೆ ವಿಳಾಸ ಲೀಕ್!
ಅಭಿಮಾನಿಗಳು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟ ಪಿಕೆ ಆಂಡ್ ಅಮಿತ್. ಕೊನೆಗೂ ಮದುವೆ ಡೇಟ್ ರಿವೀಲ್ ಮಾಡಿದ ಜೋಡಿ......

ಕನ್ನಡ ಕಿರುತೆರ ಜನಪ್ರಿಯ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ಸ್ಪರ್ಧಿಸಿರುವ ಪ್ರಿಯಾಂಕಾ ಕಾಮತ್ ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಭಾವಿ ಪತಿ ಅಮಿತ್ ಜೊತೆ ಕುಳಿತುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
- ಉಳಿದುಕೊಂಡಿರುವುದು ಎಲ್ಲಿ?
ನಾವು ಜೆಪಿ ನಗರದಲ್ಲಿರುವ ನಂದಿನಿ ಹೋಟೆಲ್ ಬಳಿ ಇರುವುದು.
- ಪಿಕೆಗೆ ಯಾವ ಸರ್ಜರಿ ಆಗಿರುವುದು?
ನನಗೆ ಸ್ಪೈನಲ್ ಕಾರ್ಡ್ ಸರ್ಜರಿ ಆಗಿರುವುದು ಅಷ್ಟೆ.
- ಅಮಿತ್ ಓದಿರುವುದು ಏನು?
ನಾನು ಮಂಗಳೂರಿನಲ್ಲಿ ಇಂಜಿನಿಯರಿಂಗ್ ಮಾಡಿರುವುದು. ಬೆಂಗಳೂರಿನಲ್ಲಿ ಅಣ್ಣನ ಜೊತೆ ಸೇರಿಕೊಂಡು ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದೀವಿ ಹಾಗೂ ನಮದ್ದೇ ನಿರ್ಮಾಣ ಸಂಸ್ಥೆ ಇದೆ.
ಗಿಚ್ಚಿ ಗಿಲಿ ಗಿಲಿ ಪ್ರಿಯಾಂಕಾ ಕಾಮತ್ ಅದ್ಧೂರಿ ನಿಶ್ಚಿತಾರ್ಥ
- ನಿಮ್ಮಬ್ಬರ ವಯಸ್ಸು?
ಅಮಿತ್ ವಯಸ್ಸು 28 ....ಅವರಿಗಿಂದ ಚಿಕ್ಕ ಹುಡುಗಿ ನಾನು ಅಂದ್ಮೇಲೆ ನಾನು ಚಿಕ್ಕ ಹುಡುಗಿನೇ.
- ಯಾವ ಊರು ಅಮಿತ್?
ಅಮಿತ್ ಮೂಲತಃ ಕುಂದಾಪುರದವರಾಗಿದ್ದು. ಪ್ರಿಯಾಂಕಾಗೆ ಮೀನು ಅಂದ್ರೆ ತುಂಬಾ ಇಷ್ಟ ಆಗಿರುವ ಕಾರಣ ಅಮಿತ್‌ನ ಮದುವೆ ಆಗಿರುವುದು.
- ನಿಮ್ಮ ಪಾರ್ಟ್‌ನರ್ ಯಾವ ಐದು ಗುಣ ಇಷ್ಟ?
ಅಮಿತ್ ತುಂಬಾ ಕೇರ್‌ರಿಂಗ್ ವ್ಯಕ್ತಿ ಹೀಗಾಗಿ ಅವರ ಜೊತೆ ಇರುವುದು ತುಂಬಾ ಸುಲಭ. ನನಗೆ ಎಷ್ಟೇ ಕೆಟ್ಟ ದಿನವಾಗಿರಲಿ ಮನೆಗೆ ಬಂದ ತಕ್ಷಣವೇ ನಮ್ಮ ಮೂಡ್‌ನ ಲೈಟ್ ಮಾಡುತ್ತಾರೆ. ಲವಿಂಗ್, ಕೇರಿಂಗ್, ಪಾಪದ ಹುಡುಗ, ಫ್ಯಾಮಿಲಿ ಜೊತೆ ಚೆನ್ನಾಗಿರುತ್ತಾರೆ ಹೊಂದಿಕೊಳ್ಳುತ್ತಾರೆ ಹಾಗೂ ಕೊನೆ ಗುಣ ಸಖತ್ ಆಗಿ ಅಡುಗೆ ಮಾಡುತ್ತಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
- ಮದುವೆ ಯಾವಾಗ?
ನಮ್ಮ ಮದುವೆ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಕೆಲವರು ನಮ್ಮ ಮದುವೆ ಆಗಿದೆ ಅಂದುಕೊಂಡಿದ್ದಾರೆ. ಡಿಸೆಂಬರ್ 25 ನಮ್ಮ ಮದುವೆ ನಡೆಯುತ್ತದೆ ಈಗಾಗಲೆ ಮದುವೆ ಹಾಲ್ ಬುಕ್ ಆಗಿದೆ.