ಕಿರುತೆರೆಯ ಜನಪ್ರಿಯ ಶೋ ಶಾಂತಂ ಪಾಪಂ ಮತ್ತೆ ಆರಂಭವಾಗಲಿದೆ. ನೈಜ ಘಟನೆ ಮೂಲಕ ಅರಿವು ಮೂಡಿಸುತ್ತಿರುವ ಈ ಕಾರ್ಯಕ್ರಮಕ್ಕೆ ವೀಕ್ಷಕರ ಮೆಚ್ಚುಗೆ ಸಿಕ್ಕಿದೆ....

ನಿಜ ಜೀನವದಲ್ಲಿ ನಡೆಯುವ ಕ್ರೈಂ ಕಥೆಯನ್ನು ಪೊಲೀಸರು ಹೇಗೆ ಪತ್ತೆ ಮಾಡುತ್ತಾರೆ, ಅಪರಾಧಿಗಳು ಮಾಡಿರುವ ತಪ್ಪಿನಿಂದ ತಪ್ಪಿಸಿಕೊಳ್ಳಲು ಏನು ತಂತ್ರ ಹೂಡಿರುತ್ತಾರೆ ಎಂಬ ವಿಚಾರವನ್ನು ಎಳೆ ಎಳೆಯಾಗಿ ತೋರಿಸುವ ಶೋ 'ಶಾಂತಂ ಪಾಪಂ'. ಕಾರಣಾಂತರಗಳಿಂದ ನಿಂತು ಹೋಗಿದ್ದ ಈ ಶೋ ಈಗ ಮತ್ತೆ ಪ್ರಾರಂಭವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್ ಬಾಸ್‌ಯಿಂದ ಔಟ್‌ ಆದ್ಮೇಲೆ ಚೈತ್ರಾ ಕೊಟ್ಟೂರು 'ಶಾಂತಂ ಪಾಪಂ' ಅಂದಿದ್ಯಾಕೆ? 

ನವೆಂಬರ್ 30ರಿಂದ ಶಾಂತಂ ಪಾಪಂ ಸೀಸನ್ 3 ಪ್ರಾರಂಭವಾಗಲಿದೆ. ಸೀಸನ್ 1 ಹಾಗೂ 2 ಅತಿ ಹೆಚ್ಚು ಟಿಆರ್‌ಪಿ ತಂದುಕೊಟ್ಟಿದ್ದು, 3ನೇ ಸೀಸನ್‌ ಮೇಲೆ ಅಷ್ಟೇ ನಿರೀಕ್ಷೆ ಇದೆ. ದಿನವೂ ಪ್ರಸಾರವಾಗಲಿರುವ ಒಂದೊಂದು ಕಥೆಯೂ ರೋಚಕವಾಗಿರುತ್ತದೆ. ಸಿನಿಮೀಯ ರೀತಿಯಲ್ಲಿ ಚಿತ್ರೀಕರಣ ಮಾಡಿ ಪ್ರಸಾರ ಮಾಡಲಾಗುತ್ತದೆ.

View post on Instagram

ಪ್ರತಿ ದಿನದ ಸಂಚಿಕೆಯನ್ನು ಜನಪ್ರಿಯ ಸೆಲೆಬ್ರಿಟಿಗಳು ನಿರೂಪಿಸುತ್ತಾರೆ. ಕಿರುತೆರೆ ಕಲಾವಿದರು, ರಿಯಾಲಿಟಿ ಶೋ ಜನಪ್ರಿಯ ಸ್ಪರ್ಧಿಗಳು ಹಾಗೂ ರಿಯಲ್ ಲೈಫ್‌ ನಿರೂಪಕರು ಒಂದೊಂದು ಸಂಚಿಕೆಯ ನಿರೂಪಣಾ ಹೊಣೆ ಹೊರುತ್ತಾರೆ. ನಮ್ಮ ಸುತ್ತ ಯಾವ ರೀತಿಯಲ್ಲಿ ಕ್ರೈಂ ನಡೆಯುತ್ತದೆ, ಜನರನ್ನು ಹೇಗೆ ಮೋಸ ಮಾಡುತ್ತಾರೆ ಎಂದೆಲ್ಲಾ ಈ ಕ್ರೈಂ ಶೋನಲ್ಲಿ ತೋರಿಸಲಾಗುತ್ತದೆ. ಸಾಮಾಜಿಕ ಸಂದೇಶ ಸಾರುವ ಈ ಕಾರ್ಯಕ್ರಮದ ಅನೇಕ ಸಂಚಿಕೆಗಳನ್ನು ಪರ ಭಾಷೆಗಳಿಗೂ ಡಬ್ ಕೂಡ ಆಗಿವೆ.