ಪತಿ ಎಲ್ಲೋದ್ರೂ ತೊಂದರೆ ಇಲ್ಲ ರಾತ್ರಿ ಮನೆಗೆ ಬಂದ್ರೆ ಸಾಕು: ನಟಿ ಇಶಿತಾ ವರ್ಷ
ಎಲ್ಲೆಡೆ ವೈರಲ್ ಆಗುತ್ತಿದೆ 'ರಾಜಾ ರಾಣಿ' ಪ್ರೋಮೋ ವಿಡಿಯೋ. ಡ್ಯಾನ್ಸ್ ಮಾಸ್ಟರ್ ಪತ್ನಿ ಹೇಳೋ ಡೈಲಾಗ್ ಕೇಳಿ ನೆಟ್ಟಿಗರು ಫುಲ್ ಶಾಕ್.
'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಮಾಯಾ ಎಂದು ಪರಿಚಯವಾಗಿರುವ ಇಶಿತಾ ವರ್ಷ ಹಲವು ದಿನಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಜಾ ರಾಣಿ' ರಿಯಾಲಿಟಿ ಶೋನಲ್ಲಿ ಪತಿ ಮುರುಗಾನಂದ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಸ್ನೇಹಿತರಾಗಿದ್ದ ಇಶಿತಾ ಮತ್ತು ಮುರುಗಾನಂದ್ ಹಲವು ವರ್ಷಗಳ ಕಾಲ ಪ್ರೀತಿಸಿ, ನವೆಂಬರ್ 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮುರುಗಾನಂದ್ ವೃತ್ತಿಯಲ್ಲಿ ಡ್ಯಾನ್ಸರ್ ಆಗಿದ್ದಾರೆ ಹಾಗೂ ಇಶಿತಾ ಧಾರಾವಾಹಿ ನಟಿ. ಇವರಿಬ್ಬರು ರಿಯಾಲಿಟಿ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಗ್ನಿಸಾಕ್ಷಿ' ಮಾಯ!ಮುರುಗಾನಂದ್ ಡ್ಯಾನ್ಸ್ ಮಾಸ್ಟರ್ ಆಗಿರುವ ಕಾರಣ ಹೆಣ್ಣು ಮಕ್ಕಳ ಜೊತೆ ಕ್ಲೋಸ್ ಆಗಿದ್ದರೆ ನೀವು ಪೊಸೆಸಿವ್ ಆಗುತ್ತೀರಾ ಎಂದು ನಿರೂಪಕಿ ಅನುಪಮಾ ಗೌಡ ಪ್ರಶ್ನಿಸಿದ್ದಾರೆ. 'ಕ್ಲಾಸ್‌ನಲ್ಲಿರುವ ಎಲ್ಲಾ ಹೆಣ್ಣು ಮಕ್ಕಳಿಗೂ ಡಾರ್ಲಿಂಗ್ ಅಂತಾನೇ ಕರೆದು ಮಾತನಾಡಿಸುತ್ತಿದ್ದರು. ನಾನು ಪೊಸೆಸಿವ್ ಆಗುವುದಿಲ್ಲ. ಎಲ್ಲೋದ್ರೂ ಕೊನೆಗೆ ಮನೆಗೆ ಬಂದ್ರೆ ಸಾಕು' ಎನ್ನುತ್ತಾರೆ. ತಕ್ಷಣವೇ ನಟ ಸೃಜನ್ ಲೋಕೇಶ್ 'ಈಗ ಗೊತ್ತಾಯ್ತು ಮುರುಗಾ ಯಾಕೆ ಮಾರ್ನಿಂಗ್‌ವರೆಗೂ ಶೂಟಿಂಗ್ ಮಾಡುತ್ತಾನೆ ಎಂದು. ಹೇಗಿದ್ರು ಬೆಳಿಗ್ಗೆ ಮನೆಗೆ ಹೋದ್ರೆ ಸಾಕು' ಎಂದು ತಮಾಷೆ ಮಾಡುತ್ತಾರೆ. ಪಕ್ಕದಲ್ಲಿದ್ದ ನಟಿ ತಾರಾ ಅನುರಾಧ 'ಈ ವಿಚಾರ ಕೇಳಿ ಅದೆಷ್ಟೋ ಗಂಡಂದಿರು ಖುಷಿ ಪಡುತ್ತಾರೆ. ಅಬ್ಬಾ ನಮ್ ಹೆಂಡತಿನೂ ಹೀಗೆ ಇರಬಾರದಾ ಅಂತಾ' ಎಂದು ಹೇಳುತ್ತಾರೆ.