ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಗ್ನಿಸಾಕ್ಷಿ' ಮಾಯ!
ಕಲರ್ಸ್ ಕನ್ನಡ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮಾಯಾ ಪಾತ್ರದಲ್ಲಿ ಮಿಂಚಿರುವ ಮಾಯಾ ಅಲಿಯಾಸ್ ಇಶಿತಾ ವರ್ಷ ತನ್ನ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
'ಅಗ್ನಿಸಾಕ್ಷಿ' ಧಾರಾವಾಹಿ ಮಾಯಾಳ ರಿಯಲ್ ನೇಮ್ ಇಶಿತಾ ವರ್ಷ.
ಗೆಳೆಯ ಮುರುಗಾನಂದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುರುಗಾನಂದ್ ವೃತ್ತಿಪರ ಕೊರಿಯೋಗ್ರಾಫರ್
ಇಶಿತಾ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದಾರೆ.
'ನಿನ್ನ ನಯನಾ' ಎಂಬ ರೆಟ್ರೋ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು.
'ಮಾನಸ ಮೊಮ್ಮಗ' ಧಾರಾವಾಹಿಯಲ್ಲಿ ನಟಿಸಿದ್ದಾರೆ.
'ಸ್ವಾರ್ಥರತ್ನ' ಚಿತ್ರದಲ್ಲಿ ನಟಿಯಾಗಿ ಮಿಂಚಿದ್ದಾರೆ.
ಮುರುಗಾನಂದ್ ಚಿತ್ರಗಳಿಗೆ ಹಾಗೂ ಧಾರಾವಾಹಿಗಳಿಗೆ ಕೊರಿಯೋಗ್ರಾಫ್ ಮಾಡಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ಸ್ನೇಹಿತರು ಹಾಗೂ ಕಿರುತೆರೆ ಕಲಾವಿದರು ಭಾಗಿಯಾಗಿದ್ದರು.
ಇಶಿತಾ ಕೆಲವೊಂದು ಮಾಡಲಿಂಗ್ ಫೋಟೋ ಶೂಟ್‌ನಲ್ಲೂ ಭಾಗಿಯಾಗಿದ್ದಾರೆ.