ಅಮ್ಮ ಇಟ್ಟ ಹೆಸರಿನಿಂದ ನಾನು ಕೃಷ್ಣನಿಗೇ ತುಂಬಾ ಹತ್ತಿರ ಎಂದ ಕಿಶನ್; ನೀವು ಕಿರುತೆರೆಯ ಕಳ್ಳ ಕೃಷ್ಣ ಎಂದ ನೆಟ್ಟಿಗರು!

ಕಿರುತೆರೆಯ ಕೃಷ್ಣ ಕಿಶನ್‌ಗೆ ಕೃಷ್ಣ ಜನ್ಮಾಷ್ಟಮಿ ಎಷ್ಟು  ಸ್ಪೆಷಲ್? ಈ ದಿನ ಯಾವ ತಿನಿಸು ಇಷ್ಟ ಪಡುತ್ತಾರೆ?

Colors Kannada ninagaagi fame Kishan bilagli talks about lord krishna vcs

ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯ ಕಿಶನ್‌ ವರ್ಷ ವರ್ಷವೂ ಕೃಷ್ಣ ಜನ್ಮಾಷ್ಟಮಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಹಬ್ಬದ ದಿನ ಸಿಹಿ ತಿನಿಸುಗಳನ್ನು ಸವಿಯಲು ಕಾಯುತ್ತಿರುತ್ತಾರೆ. ತಮ್ಮ ಜೀವನದಲ್ಲಿ ಕೃಷ್ಣ ಜನ್ಮಾಷ್ಟಮಿ ಎಷ್ಟು ಚಂದ ಎಂದು ಕಿಶನ್ ಹಂಚಿಕೊಂಡಿದ್ದಾರೆ. 

'ಕೃಷ್ಣ ಮತ್ತು ನನ್ನಲ್ಲಿ ಒಂದು ವಿಚಾರ ತುಂಬಾನೇ ಕಾಮನ್ ಆಗಿದೆ...ಅದುವೇ ಇಬ್ಬರಿಗೂ ಬೆಣ್ಣೆ ಮತ್ತು ಹಾಲಿನ ಪದಾರ್ಥಗಳು ಅಂದ್ರೆ ಸಖತ್ ಇಷ್ಟ. ಕಿಶನ್ ಎಂದು ನಾಮಕರಣ ಮಾಡಿದ್ದು ನನ್ನ ತಾಯಿ ಕಾರಣ ಏನು ಎಂದು ಇಂದಿಗೂ ತಿಳಿದಿಲ್ಲ ಆದರೆ ಈ ಹೆಸರಿನಿಂದ ನಾನು ಕೃಷ್ಣನಿಗೆ ತುಂಬಾ ಆತ್ಮೀಯ ಅನಿಸುತ್ತದೆ' ಎಂದು ಕಿಶನ್ ಮಾತನಾಡಿದ್ದಾರೆ.

ನಟಿ ನಿಶ್ವಿಕಾ ನಾಯ್ಡು ಇಯರ್ ಫೋನ್ ತಿಂದ ನಾಯಿ; ಆಮೇಲೆ ಏನಾಯ್ತು ನೋಡಿ!

'ನನ್ನ ಬಾಲ್ಯದ ದಿನಗಳಲ್ಲಿ ಹೆಚ್ಚಾಗಿ ಕೇಳಿರುವುದು ಶ್ರೀಕೃಷ್ಣನ ಕಥೆಗಳು ಮತ್ತು ಆತನ ತುಂಟತನಗಳು. ಕೃಷ್ಣ ಜನ್ಮಾಷ್ಟಮಿ ಎಂದ ತಕ್ಷಣ ನೆನಪಾಗುವುದು ರುಚಿ ರುಚಿಯಾದ ತಿಂಡಿಗಳು. ನನಗೆ ತಿನ್ನುವುದು ಅಂದ್ರೆ ತುಂಬಾನೇ ಇಷ್ಟ.ಬೆಣ್ಣೆ, ತುಪ್ಪ ಹಾಲು ಮತ್ತು ದಹಿ ಹಂಡಿ ಅಂದ್ರೆ ಇಷ್ಟ ಪಡುತ್ತೀನಿ. ನಮ್ಮ ಸಿಟಿಯಲ್ಲಿ ಇರುವ ಮಕ್ಕಳು ರಾಧಾ ಕೃಷ್ಣನ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳುವುದನ್ನು ನೋಡಲು ಖುಷಿಯಾಗುತ್ತದೆ. ನನ್ನ ಬಿಡುವಿನ ಸಮಯದಲ್ಲಿ Iskcon ದೇವಸ್ಥಾನಕ್ಕೆ ಹೋಗುವ ಪ್ರಯತ್ನ ಮಾಡುತ್ತೀನಿ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಕಿಶನ್ ಹೇಳಿದ್ದಾರೆ.

ಕಿರುತೆರೆ ನಟಿ ಭವ್ಯಾ ಗೌಡ ಕೈಯಲ್ಲಿ ಕೇಸರಿ ದಾರ; ಮಾಂಸ ತಿನ್ನೋದು ಬಿಟ್ರಾ ಎಂದ ನೆಟ್ಟಿಗರು!

'ಕರ್ಮದ ಬಗ್ಗೆ ಕೃಷ್ಣ ಹೇಳಿರುವ ಪ್ರತಿಯೊಂದು ಮಾತು ನನ್ನ ಹತ್ತಿರವಾಗಿದೆ. ಜೀವನದ ಯಾವ ಕ್ಷಣ ಬೇಕಿದ್ದರೂ ಅವನ ಪಾಠಗಳನ್ನು ಪದೇ ಪದೇ ಓದಬಹುದು. ಕೃಷ್ಣ ಜನ್ಮಾಷ್ಟಮಿ ವಿಶೇಷ ಏನೂ ಇಲ್ಲ...ಆ ಕೃಷ್ಣನೇ ಹೇಳಿರುವಂತೆ ಕೆಲಸ ಕೆಲಸ ಕೆಲಸ ಮಾಡುತ್ತಿರುವೆ..' ಎಂದಿದ್ದಾರೆ ಕಿಶನ್. 

Latest Videos
Follow Us:
Download App:
  • android
  • ios