ನಿಖಿಲ್‌ನ ಸಂಕಷ್ಟದಲ್ಲಿ ಸಿಲುಕಿಸಿದ್ದರೂ ಸಂಪುಟ ಹಂಚದೇ ಬಿಡಲಿಲ್ಲ ಅಕುಲ್ ಬಾಲಾಜಿ.  

ಕನ್ನಡ ಚಿತ್ರರಂಗ (Sandalwood) ಯುವರಾಜ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ತಮ್ಮ ರೈಡರ್ (Rider) ಸಿನಿಮಾ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ರಾಜಕೀಯ (Politics) ಕ್ಷೇತ್ರಕ್ಕಿಂತ ಸಿನಿಮಾದಲ್ಲಿ (Film industry) ತೊಡಗಿಸಿಕೊಳ್ಳಬೇಕು ಅನ್ನೋದು ನಿಖಿಲ್ ಮಾತ್ರವಲ್ಲ ಅವರ ತಂದೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರ ಆಸೆ. ಹೀಗಾಗಿ ಅವರು ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅವರೊಟ್ಟಿಗಿನ ಬಂಧ ಬಿಗಿಯಾಗಿಸಿಕೊಳ್ಳುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಕಲರ್ಸ್‌ ಕನ್ನಡ (Colors Kannada) ವಾಹಿನಿ ನಡೆಸುತ್ತಿರುವ ರಂಗು ರಂಗೋಲಿ (Rangu Rangoli) ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮ ಇಂದು ಮತ್ತು ನಾಳೆ (ಡಿಸೆಂಬರ್ 31 ಮತ್ತು ಜನವರಿ 1) ಪ್ರಸಾರ ಆಗಲಿದೆ. ಜನರಿಗೆ ಕುತೂಹಲ ಹೆಚ್ಚಿಸುವುದಕ್ಕೆ ವಾಹಿನಿ ಸಣ್ಣ ಸಣ್ಣ ಪ್ರೋಮೋಗಳನ್ನು (Promo video) ಅಪ್ಲೋಡ್ ಮಾಡುತ್ತಿದ್ದಾರೆ. ಈ ವೇಳೆ ನಿರೂಪಕ ಅಕುಲ್ ಬಾಲಾಜಿ (Akul Balaji) ಅವರು ನಿಖಿಲ್‌ಗೆ ಕೇಳಿದ ಪ್ರಶ್ನೆ ಸಖತ್ ವೈರಲ್ ಆಗುತ್ತಿದೆ. 

Nikhil Revathi Romance: ಪತ್ನಿ ಜೊತೆ ರೈಡರ್ ಹಾಡಿಗೆ ಹೆಜ್ಜೆ ಹಾಕಿದ ಯುವರಾಜ!

'ಈಗ ನೀವು ಸಿನಿಮಾ ಮತ್ತು ರಾಜಕೀಯ, ಎರಡೂ ಕ್ಷೇತ್ರದಲ್ಲಿ ಇರುವುದರಿಂದ ಸಣ್ಣ ಆಟವಾಡೋಣ. ಸ್ಯಾಂಡಲ್‌ವುಡ್‌ ನಟರಿಗೆ ನೀವು ಯಾವ ಖಾತೆಯನ್ನು ಕೊಡಲು ಇಷ್ಟ ಪಡುತ್ತೀರಾ? ಮತ್ತು ಯಾಕೆ?' ಎಂದು ಅಕುಲ್ ಪ್ರಶ್ನೆ ಮಾಡಿದ್ದಾರೆ. 'ನೀವು ಈ ರೀತಿ ಇಕ್ಕಟ್ಟಿನಲ್ಲಿ (Risk) ಯಾಕೆ ನನ್ನನ್ನು ಸಿಲುಕಿಸುತ್ತೀರಿ. ಇರಲಿ. ನಾನು ಹೇಳ್ತೀನಿ' ಎಂದು ನಿಖಿಲ್ ಉತ್ತರ ನೀಡಿದ್ದಾರೆ. 

ಹೋಮ್ ನಿಮಿಸ್ಟರ್/ಗೃಹ ಮಂತ್ರಿ (Home Minister) - 'ಈ ಖಾತೆಯನ್ನು ನಾನು ಅಪ್ಪು (Puneeth Rajkumar) ಸರ್‌ಗೆ ಕೊಡಲು ಇಷ್ಟ ಪಡ್ತೀನಿ. ನಾವು ಈಗ ಯಾವುದೇ ಸ್ಟೇಜ್‌ ಮೇಲೆ ಹೋದ್ರುನೂ ಪ್ರತಿಯೊಬ್ಬರು ಮಾತನಾಡುವುದಕ್ಕಿಂತ ಮುಂಚೆ ಅಪ್ಪು ಸರ್‌ನ ನೆನಪಿಸಿಕೊಳ್ಳುತ್ತೇವೆ. ಅದು ನಮ್ಮ ಕರ್ತವ್ಯ ಅದು ನಮ್ಮ ಜವಾಬ್ದಾರಿ ಅನ್ನೋದನ್ನು ಯಾರೂ ಮರೆತಿಲ್ಲ. ಅವರು ವಂಡರ್‌ಫುಲ್ ಫ್ಯಾಮಿಲಿ ಮ್ಯಾನ್ (Family Man). ಅಪ್ಪು ಸರ್‌ನ ಎಷ್ಟೊಂದು ಸಲ ನೋಡಿದ್ದೀನಿ ಮಕ್ಕಳನ್ನು ಸ್ಕೂಲಿಂದ ಕರ್ಕೊಂಡು ಬರೋದು ಹೋಗೋದು, ಆಮೇಲೆ ಅಶ್ವಿನಿ ಅಕ್ಕನ ಅವರು ಪಾನಿ ಪೂರಿ (Pani puri) ತಿನ್ನೋಕೆ ಕರ್ಕೊಂಡು ಹೋಗೋದು ಎಲ್ಲಾ ವಿಚಾರ ನನಗೆ ಗೊತ್ತು. ಎಷ್ಟೊಂದು ಸಲ ಕಾರು (Car) ನಿಲ್ಲಿಸಿ ನನ್ನನ್ನು ಮಾತನಾಡಿಸಿದ್ದಾರೆ ಅವರು. 

Jyothi Kiran Weight Loss Tips: 5 ವರ್ಷ ಹೀಗೆ ಮಾಡಿದ್ದಕ್ಕೆ ನಟಿ ಸಣ್ಣ ಆಗಿದ್ದಂತೆ!

ಕೃಷಿ ಮಂತ್ರಿ (Agriculture Minister) - ಸದ್ಯದ ಪರಿಸ್ಥಿತಿಗೆ ನಾನು ದರ್ಶನ್ ಅವರಿಗೆ ಕೊಡ್ತೀನಿ. 

ರೆವೆನ್ಯೂ ಮಿನಿಸ್ಟರ್ (Revenu Minister): ಇದನ್ನು ಯಶ್ (Yash) ಅವರಿಗೆ ಕೊಡಬಹುದು. ಕೆಜಿಎಫ್ (KGF) ಸಿನಿಮಾ ಮ್ಯಾಸಿವ್ ಹಿಟ್ ನೋಡಿದೆ. ಅದು ರೆವೆನ್ಯೂ ಮಾಡಿದೆ ಅದಿಕ್ಕೆ. 

ವಸತಿ ಸಚಿವ (Housing Minister): ಗಣೇಶ್‌ (Ganesh) ಸರ್‌ಗೆ ಈ ಖಾತೆ ಕೊಡುವೆ. ಅವರ ಮನೆ ತುಂಬಾ ಚೆನ್ನಾಗಿದೆ. ನಾನು ನೋಡಿಲ್ಲ ಆದ್ರೆ ಕೇಳಿದ್ದೀನಿ. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ (Women and Child Welfare): ರವಿಚಂದ್ರನ್ (Ravichandran) ಸರ್‌ಗೆ. ವೇದಿಕೆ ಎದುರು ಕುಳಿತಿರುವವರು ಇದೇ ಹೆಸರು ಸಲಹೆ ಮಾಡುತ್ತಿದ್ದಾರೆ. 

ಹೀಗೆ ಕೆಲವು ಖಾತೆಗಳ ವಿವರ ಮಾತಿ ವಾಹಿನಿ ಹಂಚಿಕೊಂಡಿದೆ. ನಿಖಿಲ್ ಅವರು ಉಳಿದಿರುವ ಖಾತೆಯನ್ನು ಯಾರೆಗೆ ಕೊಟ್ಟಿದ್ದಾರೆ ಎಂಬ ಕ್ಯೂರಿಯಾಸಿಟಿ (Curiosity) ಜನರಲ್ಲಿ ಹೆಚ್ಚಾಗಿ. ಹೀಗಾಗಿ ಕಾರ್ಯಕ್ರಮ ನೋಡಲು ಎಲ್ಲರೂ ಕಾಯುತ್ತಿದ್ದಾರೆ.

View post on Instagram