15 ದಿನಗಳಿಂದ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಚಿತ್ರೀಕರಣ ಮಾಡುತ್ತಿರುವ ರಘು ಮತ್ತು ಟೀಂ. ನಮ್ಮನೆ ಯುವರಾಣಿ ಚಿತ್ರೀಕರಣದ ದಿನಗಳು ಹೇಗಿರುತ್ತೆ ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮನೆ ಯುವರಾಣಿ' ತಂಡ ಇದೀಗ ಹೈದರಾಬಾದ್‌ನ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಚಿತ್ರೀಕರಣ ಮಾಡುತ್ತಿದೆ. ಧಾರಾವಾಹಿಯ ಪ್ರಮುಖ ಪಾತ್ರಧಾರಿ ಸಾಕೇತ್ ಅಲಿಯಾಸ್ ರಘು ಶೂಟಿಂಗ್ ದಿನಗಳು ಹೇಗಿರುತ್ತವೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ. 

'ರಾಮೋಜಿ ಫಿಲ್ಮಂ ಸಿಟಿ ಶೂಟಿಂಗ್ ಅನುಭವ' ಎಂದು ಬರೆದುಕೊಂಡು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಪತ್ನಿ ಅಮೃತಾ ' ನಿಮ್ಮನ್ನು ಮನೆಗೆ ಸ್ವಾಗತಿಸಲು ನಾವು ಕಾಯುತ್ತಿದ್ದೀವಿ ಪುಟ್ಟ,' ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲಾ ತಾರೆಯರು ಆಫ್‌ ಸ್ಕ್ರೀನ್ ಹೇಗಿರುತ್ತಾರೆ ಎಂದು ವಿಡಿಯೋದಲ್ಲಿ ಕಂಡು ನೆಟ್ಟಿಗರು ಸಂತಸ ಪಟ್ಟಿದ್ದಾರೆ. 

ನಾವೀಗ ಮೂವರು; ಗುಡ್ ನ್ಯೂಸ್‌ ಕೊಟ್ಟ ಕಿರುತೆರೆ ನಟಿ ಅಮೃತಾ ರಘು! 

'15 ದಿನಗಳಿಂದ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದೀವಿ, ಇನ್ನೂ ಒಂದು ಶೆಡ್ಯೂಲ್ ಉಳಿದಿದೆ. ದಿನ ಎಲ್ಲಾ ಸೆಟ್‌ನಲ್ಲಿ ಇರುತ್ತೇವೆ. ಟೈಟ್ ಶೆಡ್ಯೂಲ್ ನಡುವೆಯೂ ಕುಟುಂಬದ ಜೊತೆ ಸಂಪರ್ಕ ಇರಲು ಪ್ರಯತ್ನ ಪಡುತ್ತೇವೆ. ದೊಡ್ಡ ಬ್ರೇಕ್‌ ನಂತರ ಚಿತ್ರೀಕರಣ ಮಾಡುತ್ತಿರುವುದಕ್ಕೆ ಸಖತ್ ಸಂತೋಷ ಆಗಿತ್ತು. ಒಂದು ವಾರ ಆಗುತ್ತಿದ್ದಂತೆ ಮನೆಯವರನ್ನು ಮಿಸ್ ಮಾಡಿಕೊಳ್ಳಲು ಅರಂಭಿಸಿದೆವು. ಈ ಸಮಯದಲ್ಲಿ ನನ್ನ ಗರ್ಭಿಣಿ ಪತ್ನಿ ಜೊತೆಗೆ ನಾನಿರಬೇಕಿತ್ತು. ಆದರೆ ಕೆಲಸದ ಕಮಿಟ್ಮೆಂಟ್ ಕೂಡ ನಮಗಿದೆ,' ಎಂದು ರಘು ಟೈಮ್ಸ್‌ಗೆ ಹೇಳಿದ್ದಾರೆ.

View post on Instagram