Asianet Suvarna News Asianet Suvarna News

'ನಮ್ಮನೆ ಯುವರಾಣಿ' ಖ್ಯಾತಿಯ ಜ್ಯೋತಿ ಕಿರಣ್ ಫಿಟ್ನೆಸ್‌ ಗೋಲ್‌ ಫೋಟೋ ವೈರಲ್!

ದೇಹದ ತೂಕ ಇಳಿಸಿಕೊಳ್ಳಿ, ಮನಸ್ಸಿನ ಸಂತೋಷ ಹೆಚ್ಚಿಸಿಕೊಳ್ಳಿ ಎಂದು ವೈಯ್ಟ್ ಲಾಸ್‌ ಫೋಟೋ ಹಂಚಿಕೊಂಡ ನಟಿ ಜ್ಯೋತಿ ಕಿರಣ್. 
 

Colors Kannada Nammane Yuvarani fame Jyothi Kiran transformation photo vcs
Author
Bangalore, First Published Oct 15, 2021, 3:22 PM IST
  • Facebook
  • Twitter
  • Whatsapp

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ (Nammane Yuvarani) ಧಾರಾವಾಹಿ ಖ್ಯಾತಿಯ ಶಾಂಭವಿ ಉರ್ಫ್ ಜ್ಯೋತಿ ಕಿರಣ್ (Jyothi Kiran) ಸೋಷಿಯಲ್ ಮೀಡಿಯಾದಲ್ಲಿ ತಮ್ಮ 5 ವರ್ಷಗಳ ಟ್ರಾನ್ಸ್‌ಫಾರ್ಮೇಷನ್‌ ವಿಡಿಯೋ ಹಂಚಿಕೊಂಡು ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. ಜೋತಿ ಅವರ ಬಳಿ ಧಾರಾವಾಹಿ ನಟ, ನಟಿಯರು ಟಿಪ್ಸ್ ಕೇಳುತ್ತಿದ್ದಾರೆ. 

'ದೇಹ ಬದಲಾಯಿಸಿಕೊಳ್ಳಬೇಕು ಅಂದರೆ ಮೊದಲು ಮೈಂಡ್‌ (Mind) ಚೇಂಜ್‌ ಮಾಡಿಕೊಳ್ಳಿ. ಆರೋಗ್ಯ ಅಂದರೆ ಬರೀ ತೂಕ ಇಳಿಸಿಕೊಳ್ಳುವುದು (Weightloss) ಅಲ್ಲ. ನೀವು ಗಳಿಸುವ ಜೀವನ. ನೀವು ಕಡಿಮೆ ತಿನ್ನುವ ಅವಶ್ಯಕತೆ ಇಲ್ಲ. ಸರಿಯಾಗಿ ತಿಂದರೆ ಸಾಕು,' ಎಂದು ಜ್ಯೋತಿ ಬರೆದುಕೊಂಡಿದ್ದಾರೆ.  'ಕ್ಯಾಪ್ಶನ್ ಬೇಡ ಮೇಡಂ, ನಮಗೆ ಸೀಕ್ರೆಟ್ ಬೇಕು,' ಎಂದು ನಟಿ ಅಂಕಿತಾ ಅಮರ್ (Ankita Amra) ಕಾಮೆಂಟ್ ಮಾಡಿದ್ದಾರೆ. 'ನೀವು ಟ್ರಾನ್ಸ್‌ಫಾರ್ಮೇಷನ್‌ (Transformation) ಟಿಪ್ಸ್‌ ನೋಡಿ' ಎಂದು ಫಾಲೋವರ್ ಮನವಿ ಮಾಡಿದ್ದಾರೆ. 

Colors Kannada Nammane Yuvarani fame Jyothi Kiran transformation photo vcs

ರಾಜಗುರು ಕುಟುಂಬದ (Rajaguru family) ಕೆಲಸದಮ್ಮ ಶಾಂಭವಿ ಪಾತ್ರದಲ್ಲಿ ಜ್ಯೋತಿ ಕಾಣಿಸಿಕೊಳ್ಳುತ್ತಿದ್ದಾರೆ. ಇಡೀ ಕುಟುಂಬ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಕಾರಣ ಮನೆ ಮತ್ತು ರಾಜಗುರು ಕುಟುಂಬದ ಮಕ್ಕಳ ಜವಾಬ್ದಾರಿಯನ್ನ ಶಾಂಭವಿ ತೆಗೆದುಕೊಳ್ಳುತ್ತಾರೆ. ರಾಜಗುರು ಮನೆಯ ಮಕ್ಕಳು ಶಾಂಭವಿಯನ್ನು ತಾಯಿ ಎಂದು ಪರಿಗಣಿಸಿ, ಇಡೀ ಮನೆ ಜವಾಬ್ದಾರಿಯನ್ನೇ ಆಕೆಗೆ ನೀಡುತ್ತಾರೆ. ಹಲವು ವರ್ಷಗಳ ನಂತರ ಜ್ಯೋತಿ ಒಂದೊಳ್ಳೆ ಪಾತ್ರದ ಮೂಲಕ ಕಮ್‌ ಬ್ಯಾಕ್ ಮಾಡಿರುವುದು ಜನಪ್ರಿಯತೆ ತಂದುಕೊಟ್ಟಿದೆ. 

ನಮ್ಮನೆ ಯುವರಾಣಿಯಲ್ಲಿ Silli Lalli ಸೂಜಿ; ಈಗ ಹೇಗಿದ್ದಾರೆ ನೋಡಿ!

ಈ ಹಿಂದೆ ನೀವು ಜ್ಯೋತಿ ಅವರನ್ನು ಎರಡು ಜುಟ್ಟು, ಕಣ್ಣಿಗೆ ಗ್ಲಾಸ್ ಹಾಕಿಕೊಂಡು ಕಿವಿಗೆ ಮಶಿನ್ ಹಾಕಿಕೊಳ್ಳುತ್ತಿದ್ದ ಸೂಜಿ ಪಾತ್ರದಲ್ಲಿ ನೋಡಿರುತ್ತೀರಾ. ಜನಪ್ರಿಯ ಕಾಮಿಡಿ ಧಾರಾವಾಹಿ ಸಿಲ್ಲಿ ಲಲ್ಲಿಯಲ್ಲಿಯೂ (Silli Lalli) ನಟಿಸಿದ್ದಾರೆ.  ಇವರದ್ದು Am I Right? ಡೈಲಾಗ್ ತುಂಬಾನೇ ಫೇಮಸ್ ಆಗಿತ್ತು.

 

Follow Us:
Download App:
  • android
  • ios