Asianet Suvarna News Asianet Suvarna News

ಶುರುವಾಯ್ತು 'ಮಜಾ ಟಾಕೀಸ್‌'; ಹೇಗಿರಲಿದೆ ಪವರ್ ಸ್ಟಾರ್‌ ಎಂಟ್ರಿ?

ಕಿರುತೆರೆ ವೀಕ್ಷಕರಿಗೆ ಗುಡ್ ನ್ಯೂಸ್‌. ವೀಕೆಂಡ್‌ನಲ್ಲಿ ನಿಮ್ಮೆಲ್ಲರನ್ನೂ ಮನರಂಜಿಸಲು ಮತ್ತೆ ಬಂದಿದೆ ಮಜಾ ಟಾಕೀಸ್‌ ಸೂಪರ್ ಸೀಸನ್‌ 2 ...

colors kannada maja talkies super season srujan lokesh
Author
Bangalore, First Published Aug 30, 2020, 3:36 PM IST
  • Facebook
  • Twitter
  • Whatsapp

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮತ್ತೆ ಶುರುವಾಗಿದೆ 'ಮಜಾ ಟಾಕೀಸ್‌' ಸೂಪರ್ ಸೀಸನ್ ವಿತ್ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್. ಆಗಸ್ಟ್‌ 29 ಮತ್ತು 30ರಂದು ಪ್ರಾರಂಭವಾದ ಮೊದಲ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಇಬ್ಬರು ವಿಶೇಷ ವ್ಯಕ್ತಿಗಳು ಪಾಲ್ಗೊಂಡಿದ್ದರು.

ಸದ್ಯದಲ್ಲೇ `ಟಾಕೀಸ್' ಬಾಗಿಲು ತೆರೆಯಲಿದ್ದಾರೆ ಸೃಜನ್..!

ಪ್ರತಿ ಶನಿವಾರ - ಭಾನುವಾರ ರಾತ್ರಿ 8ಕ್ಕೆ ತಪ್ಪದೆ ಟಿವಿ ಮುಂದೆ ಕುಳಿತುಕೊಳ್ಳುವ ವೀಕ್ಷಕರಿಗೆ ಕಲರ್ಸ್ ಕನ್ನಡ ಸ್ಪೆಷಲ್ ಸರ್ಪ್ರೈಸ್ ವೊಂದು ನೀಡಿದ್ದು ಕುತೂಹಲದಿಂದ ಕಾದಿದ್ದ ನೋಡುಗರಿಗೆ  ಪ್ರೋಮೋ ರಿಲೀಸ್‌ ಮಾಡುವ ಮೂಲಕ ಮಜಾ ಟಾಕೀಸ್ ಗೆ ಬರುತ್ತಿರುವ ವಿಶೇಷ ವ್ಯಕ್ತಿ ಯಾರೆಂದು ತಿಳಿಸಿದ್ದಾರೆ . ಅವ್ರು ಯಾರಪ್ಪ ಅಂದ್ರ ಅವರೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌. 

 

ಲಾಕ್‌ಡೌನ್‌ ಶುರುವಿನಿಂದಲೂ ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದರು. ಅಲ್ಲಿಯೇ ಅಭಿಮಾನಿಗಳ ಜೊತೆ ಮಾತನಾಡುತ್ತಾ ಅವರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಅಪ್ಡೇಟ್‌ ನೀಡುತ್ತಿದ್ದರು. ಆದರೀಗ ಎಲ್ಲರನ್ನೂ ಒಟ್ಟಾಗಿ ನೋಡುವ ಸಂದರ್ಭ ಬಂದಿದ್ದು  ಕಲರ್‌ಫುಲ್‌ ಎಂದೆನಿಸುತ್ತದೆ. 

ಯಪ್ಪೋ! ಶ್ವೇತಾ ಚಂಗಪ್ಪ ಪುತ್ರನ ತುಂಟಾಟ ನೋಡ್ರಪ್ಪಾ...

ಕುರಿ ಪ್ರತಾಪ್‌, ಸೃಜನ್ ಲೋಕೇಶ್, ಗುಂಡು ಮಾಮ, ಮಂಡ್ಯ ರಮೇಶ್, ಅಪರ್ಣ ಮತ್ತು ಇಂದ್ರಜಿತ್ ಲಂಕೇಶ್‌ ಎಲ್ಲರೂ ಸೇರಿ ಹೊಸ ಮನೆ ಗೃಹಪ್ರವೇಶವನ್ನು ನಟಿ ರಾಗಿಣಿ ಕೈಯಲ್ಲಿ ಮಾಡಿಸಿದ್ದಾರೆ. ಅಲ್ಲದೆ ಕುರಿ ಮತ್ತು ಅಪರ್ಣಗೆ ಮದುವೆ ಮಾಡಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಹೇಗೆ ವಿಭಿನ್ನ ವಿಚಾರಗಳನಿಟ್ಟುಕೊಂಡು ಮನೋರಂಜಿಸಲು ಸಿದ್ಧವಾಗುತ್ತಿದೆ ಸೂಪರ್ ಸೀಸನ್.

Follow Us:
Download App:
  • android
  • ios