Asianet Suvarna News Asianet Suvarna News

ಲಕ್ಷಣ ಧಾರಾವಾಹಿ ಶೆರ್ಲಿ ರಿಯಲ್ ಲೈಫ್‌ನಲ್ಲಿ ದಂತ ವೈದ್ಯೆ ಮೋಲೂಡ್!

ಶೆರ್ಲಿ ಎಂದು ಜನರು ಗುರುತಿಸುತ್ತಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿದ ಮೇಲೂಡ್‌. ದಂತ ವೈದ್ಯೆ ಮಾಡೆಲ್ ಆದ ಕಥೆ...

Colors Kannada Lakshna fame Shirly molood is dentist by profession vcs
Author
Bangalore, First Published May 1, 2022, 3:56 PM IST

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಕಪ್ಪು- ಬಿಳಿ ಬಣ್ಣದಿಂದ ಒಬ್ಬರ ಜೀವನ ಹೇಗೆ ಬದಲಾಗುತ್ತದೆ ಎಂದು ತೋರಿಸಲಾಗಿದೆ.  ಭೂಪತಿ ನಾಯಕ, ಕಪ್ಪು ಹುಡುಗಿಯಾಗಿ ಲಕ್ಷಣ ಬಿಳಿ ಹುಡುಗಿಯಾಗಿ ಶ್ವೇತಾ ಮಿಂಚುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ವೀಕ್ಷಕರ ಗಮನ ಸೆಳೆದಿದರುವುದು ಭೂಪತಿ ವಿದೇಶಿ ಅತ್ತಿಗೆ ಶೆರ್ಲಿ.

ಶೆರ್ಲಿ (Shirly) ಪಾತ್ರಧಾರಿ ರಿಯಲ್ ಹೆಸರು ಮೋಲೂಡ್ (Molood). ವೃತ್ತಿಯಲ್ಲಿ ದಂತ ವೈದ್ಯೆಯಾಗಿದ್ದು ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ. 'ನಾನು ಮೂಲತಃ ಇರಾನಿಯನ್ (Iranian) ಆಗಿದ್ದು ಬೆಂಗಳೂರಿನಲ್ಲಿ ನೆಲೆಸಿರುವೆ. ವೃತ್ತಿಯಲ್ಲಿ ದಂತ ವೈದ್ಯೆಯಾಗಿದ್ದು (Dentist) ಉನ್ನತ ಶಿಕ್ಷಣಕ್ಕೆಂದು ಎಮ್‌ಎಸ್‌ ರಾಮಯ್ಯ ಕಾಲೇಜ್‌ಗೆ ಬಂದೆ. ಮಾಡಲಿಂಗ್ ಮೂಲಕ ನನ್ನ ಗ್ಲಾಮರ್‌ ಲೋಕದ ಜರ್ನಿ ಶುರುವಾಗಿದ್ದು. ಇದಾದ ನಂತರ ನಾನು ಜಾಹೀರಾತುಗಳನ್ನು ಒಪ್ಪಿಕೊಂಡೆ. ಇದೊಂದು ಅದ್ಭುತ ಜರ್ನಿ ಆಗಿದ್ದು ನಾನು ಎಂಜಾಯ್ ಮಾಡುತ್ತಿದ್ದೀನಿ' ಎಂದು ಶೆರ್ಲಿ ಹೇಳಿದ್ದಾರೆ.

Colors Kannada Lakshna fame Shirly molood is dentist by profession vcs

'ಲಕ್ಷಣ ಧಾರಾವಾಹಿಗೆ ನನಗೆ ಮಾಹಿತಿ ಕೊಟ್ಟಿದ್ದು ನನ್ನ ಸ್ನೇಹಿತ, ಆತ ಕೋ-ಆಡಿನೇಟರ್. ಕೆಲವೊಂದು ಲುಕ್‌ ಟೆಸ್ಟ್‌ಗಳು ಮಾಡಲಾಗಿತ್ತು. ಶೆರ್ಲಿ ವಿದೇಶಿ ಹುಡುಗಿ ಕ್ಯಾರೆಕ್ಟರ್ ಆಗಿರುವ ಕಾರಣ ನಾನು ಆಯ್ಕೆ ಆದೆ. ಶಕುಂತಲಾ ದೇವಿ ಪುತ್ರನ ಮದುವೆಯಾಗಿರುವ ಹುಡುಗಿ ನಾನು. ಇದೊಂದು ನನ್ನ ಜೀವನದ ಅದ್ಭುತ ಜರ್ನಿ ಆಗಿದೆ. ಶೆರ್ಲಿ ಪಾತ್ರ ಮಜಾ ಕೊಡುತ್ತಿದೆ. ಆಕೆ ತುಂಬಾ ಫ್ರೆಂಡ್ಲಿ ಮಹಿಳೆ' ಎಂದು ಇ-ಟೈಮ್ಸ್‌ ಸಂದರ್ಶನ ಶೆರ್ಲಿ ಮಾತನಾಡಿದ್ದಾರೆ.

Lakshana Serial: ನಕ್ಷತ್ರಾ ಗೆ ಭೂಪತಿ ಮನೆಗೆ ಎಂಟ್ರಿ ಇಲ್ಲ, ಮತ್ತೆಲ್ಲಿ ಹೋಗ್ತಾಳವಳು?

' ಸ್ಕ್ರಿಪ್ಟ್‌ ಓದುವ ವಿಚಾರದಲ್ಲಿ ಇಡೀ ತಂಡ ನನಗೆ ಸಪೋರ್ಟ್ ಮಾಡುತ್ತದೆ. ಪ್ರತಿ ಕ್ಷಣದಲ್ಲೂ ಸಪೋರ್ಟ್ ಮಾಡುತ್ತಾರೆ. ಕೆಲವೊಮ್ಮೆ ನನಗೆ ಅರ್ಥವಾಗದೆ ಇದ್ದಾಗ ಭಾಷೆಯನ್ನು ಬಿಡಿಸಿ ಹೇಳಿಕೊಡುತ್ತಾರೆ. ಸೀನ್ ಡಿಮ್ಯಾಂಡ್ ಮಾಡುವಂತೆ ಪಾತ್ರಕ್ಕೆ ಭಾವನೆ ತುಂಬ ಬೇಕು, ಭಾವನ ತುಂಬಬೇಕು ಅಂದ್ರೆ ಭಾಷೆ ಅರ್ಥ ಮಾಡಿಕೊಳ್ಳಬೇಕು. ಭಾಷೆ ಅರ್ಥವಾಗದೆ ಇರುವುದಕ್ಕೆ ನನಗೆ ಬೇಸರವಾಗುತ್ತದೆ ಆದರೆ ನನ್ನ ಇಡೀ ಟೀಂ ನನ್ನ ಪರವಾಗಿದೆ. ಭಾಷೆಯಿಂದ ನನಗೆ ಯಾವ ತೊಂದರೆ ಇಲ್ಲ ಎಲ್ಲಾ ಕಡೆ ಅವಕಾಶಗಳು ಸಿಗುತ್ತಿದೆ. ನನ್ನ ಎದುರು ಇರುವವರು ಕನ್ನಡದಲ್ಲಿ ಏನು ಮಾತನಾಡುತ್ತಾರೆ ಅದಕ್ಕೆ ನಾನು ಏನು ಹೇಳಬೇಕು ಎಂದು ಕನ್ನಡದಲ್ಲಿ ಚಿಂತಿಸುತ್ತೀನಿ. ಚಿತ್ರೀಕರಣದ ಸಮಯದಲ್ಲಿ ನನಗೆ prompte ಮಾಡುತ್ತಾರೆ' ಎಂದಿದ್ದಾರೆ.

ಅಭಿಮಾನಿಗಳ ರಿಯಾಕ್ಷನ್:

'ಅಭಿಮಾನಿಗಳ ರಿಯಾಕ್ಷನ್ ಅದ್ಭುತವಾಗಿದೆ. ಲಕ್ಷಣ ಧಾರಾವಾಹಿ ಶೆರ್ಲಿ ಎಂದು ಜನರು ಗುರುತಿಸುತ್ತಿದ್ದಾರೆ. ಶಾಪಿಂಗ್ ಹೋಗಿರಲಿ ಅಥವಾ ಹಾಗೆ ಸುಮ್ಮನೆ ವಾಕಿಂಗ್ ಮಾಡುತ್ತಿದ್ದರು ನನ್ನ ಜೊತೆ ಮಾತನಾಡುತ್ತಾರೆ. ನನ್ನ ಬಳಿ ಬಂದು ಸೆಲ್ಫಿ ಕೇಳಿದಾಗ ಖುಷಿಯಾಗುತ್ತದೆ. ಇಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಗುತ್ತದೆ ಎಂದುಕೊಂಡಿರಲಿಲ್ಲ. ನನ್ನ ಪತಿ ಜೊತೆ ಮನೆ ಹುಡುಕುತ್ತಿದ್ದೆ. ಆದರ ಮನೆ ಮಾಲೀಕರು ಉತ್ಸಾಹದಿಂದ ಬಂದು ನನ್ನನ್ನು ಮಾತನಾಡಿಸಿದರು. ಲಕ್ಷಣ ಧಾರಾವಾಹಿಯನ್ನು ನೋಡುತ್ತೀವಿ ನಿಮ್ಮ ಅಭಿಮಾನಿ ನಾವು ಎಂದು ಹೇಳಿದರು. ಆದು ಅನಿಸಿತ್ತು ನೂರಾರು ಜನರ ಆಶೀರ್ವಾದ ನನಗೆ ಸಿಗುತ್ತಿದೆ ಎಂದು'

ರಿಯಲ್‌ ಲೈಫಲ್ಲಿ ನಾನು ಕೂಲ್‌ ಆಗಿರಬೇಕು ಎನ್ನುತ್ತಾಳೆ ರಿಯಲ್ ಮಗಳು: ಲಕ್ಷಣ ನಟ ಕೀರ್ತಿ ಭಾನು

'ಲಕ್ಷಣ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವುದಕ್ಕೆ ಖುಷಿ ಇದೆ. ರಿಯಲ್ ಲೈಫ್‌ನಲ್ಲೂ ಕಲಾವಿದರಿಂದ ಸಪೋರ್ಟ್ ಸಿಗುತ್ತಿದೆ. ನನ್ನ ಕೋ ಸ್ಟಾರ ರಶ್ಮಿ ನನಗೆ ಸ್ಕ್ರಿಪ್ಟ್‌ ಓಡಲು ಸಹಾಯ ಮಾಡುತ್ತಾರೆ. ನನ್ನ ಅತ್ತೆ ಪಾತ್ರ ಮಾಡುತ್ತಿರುವ ಸುಧಾ ಬೆಳವಾಡಿ (Sudha Belwadi) ಅವರು ರಿಯಲ್ ಲೈಫ್‌ನಲ್ಲಿ ಚಿನ್ನದಂತ ವ್ಯಕ್ತಿ. ಸೆಟ್‌ನಲ್ಲಿ ಇರುವುದಕ್ಕೆ ಖುಷಿ ಕೊಡುತ್ತದೆ. ಒಳ್ಳೆಯ ಪಾತ್ರ ಸಿಕ್ಕಿರುವುದಕ್ಕೆ ಖುಷಿ ಇದೆ' ಎಂದಿದ್ದಾರೆ.

Follow Us:
Download App:
  • android
  • ios