Asianet Suvarna News Asianet Suvarna News

ನಾನು ಎಷ್ಟೇ ಕೆಟ್ಟವಳಾದರೂ ಜನರು ನೆಗೆಟಿವ್ ಹೇಳುತ್ತಿಲ್ಲ; ಕೀರ್ತಿ ಪಾತ್ರ ಮಾಡಲು ತನ್ವಿ ಫುಲ್ ಖುಷ್

ಕೀರ್ತಿ ಪಾತ್ರದಲ್ಲಿ ಮಿಂಚುತ್ತಿರುವ ತನ್ವಿ ರಾವ್‌ 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನ ಬಿಗ್ ಹೈಲೈಟ್ ಎನ್ನಬಹುದು. ಕೀರ್ತಿ ತಮ್ಮ ಪಾತ್ರದ ಬಗ್ಗೆ ಏನ್ ಹೇಳಿದ್ದಾರೆ....

Colors Kannada Lakshmi Baramma Thanvi rao talks about Keerthi character vcs
Author
First Published Apr 20, 2024, 3:48 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಕೀರ್ತಿ ಪಾತ್ರದಲ್ಲಿ ಮಿಂಚುತ್ತಿರುವ ತನ್ವಿ ರಾವ್ ದಿನದಿಂದ ದಿನಕ್ಕೆ ಅಪಾರ ಸಂಖ್ಯೆಯಲ್ಲಿ ವೀಕ್ಷಕರ ಪ್ರೀತಿಯನ್ನು ಗಳಿಸುತ್ತಿದ್ದಾರೆ. ಸೀರಿಯಲ್‌ನಲ್ಲಿ ಲಕ್ಷ್ಮಿ ಒಂದು ಹೈಲೈಟ್ ಆದರೆ ಮತ್ತೊಂದು ಹೈಲೈಟ್‌ ಕೀರ್ತಿ. ಪಾಗಲ್ ಪ್ರೇಮಿ ರೀತಿ ಕಾಣಿಸಿಕೊಳ್ಳುತ್ತಿರುವ ಕೀರ್ತಿಗೆ ಅನೇಕರು ನೆಗೆಟಿವ್ ಪ್ರತಿಕ್ರಿಯೇ ನೀಡುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಪಾಸಿಟಿವ್ ಬರುತ್ತಿರುವುದಕ್ಕೆ ಖುಷಿಯಾಗಿದ್ದಾರೆ.

'ಸದ್ಯಕ್ಕೆ ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ನಡೆಯುತ್ತಿರುವ ಕಥೆಯನ್ನು ಗಮನಿಸಿದರೆ ವೀಕ್ಷಕರು ಕೀರ್ತಿಯನ್ನು ದ್ವೇಷ ಮಾಡಬೇಕು ಏಕೆಂದರೆ ಅಷ್ಟು ಹುಚ್ಚುತನದಲ್ಲಿ ವೈಷ್ಣವ್‌ನ ಪ್ರೀತಿ ಮಾಡುತ್ತಾರೆ, ಆತನಿಗೆ ಮದುವೆ ಆಗಿದ್ದರೂ ಕೇರ್ ಮಾಡದಂತೆ ವರ್ತಿಸುತ್ತಾಳೆ. ಆದರೆ ನಾನು ಅಂದುಕೊಂಡಿದ್ದಕ್ಕಿಂತ ಉಲ್ಟಾ ಆಗಿದೆ ಜನರು ತುಂಬಾ ಪ್ರೀತಿ ಮತ್ತು ಸಪೋರ್ಟ್ ಕೊಡುತ್ತಿದ್ದಾರೆ. ನೆಗೆಟಿವ್ ಪಾತ್ರ ನಿರ್ವಹಿಸುತ್ತಿದ್ದರೂ ನನ್ನನ್ನು ಪಾಸಿಟಿವ್ ಆಗಿ ಸ್ವೀಕರಿಸಿ ನಟನೆ ಮೆಚ್ಚುತ್ತಿರುವುದಕ್ಕೆ ಖುಷಿಯಾಗುತ್ತಿದೆ' ಎಂದು ಕೀರ್ತಿ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಸೀರೆಯುಟ್ಟು ಮುದ್ದಾಗಿ ನಕ್ಕ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ ಕೀರ್ತಿ, ನೋಡಿದ್ರೆ ಕೋಪ ಬರುತ್ತೆ ಅನ್ನೋದಾ ನೆಟ್ಟಿಗರು!

ನಾಯಕಿಯಾಗಿ ಮಿಂಚಬೇಕು ಎಂದು ಆಸೆ ಪಟ್ಟು ಸಾಕಷ್ಟು ಆಡಿಷನ್ ಕೊಡುತ್ತಿದ್ದ ತನ್ವಿ ಕಣ್ಣುಗಳನ್ನು ನೋಡಿ ವಿಲನ್‌ ಪಾತ್ರ ಸಿಗುತ್ತಿತ್ತಂತೆ. ತಮ್ಮ ವೃತ್ತಿ ಬದುಕಿನಲ್ಲಿ ಕೀರ್ತಿ ಪಾತ್ರ ಎಷ್ಟು ಮುಖ್ಯವಾಗುತ್ತದೆ ಎಷ್ಟು ಸಪೋರ್ಟ್ ಮಾಡುತ್ತದೆ ಎಂದು ಪದೇ ಪದೇ ಹೇಳುತ್ತಾರೆ. 

Follow Us:
Download App:
  • android
  • ios