Asianet Suvarna News Asianet Suvarna News

ಭೂಪತಿ- ಶ್ವೇತಾ ಕಿತ್ತಾಟಕ್ಕೆ ಬ್ರೇಕ್: ಇನ್ಮುಂದೆ ಲಕ್ಷಣ ಸೀರಿಯಲ್ ಬರಲ್ಲ?

ಭೂಪತಿ-ಲಕ್ಷಣ ಕಿತ್ತಾಡಕ್ಕೆ ಬ್ರೇಕ್. ಕಥೆ ಎಲ್ಲಿಗೆ ಬಂದು ನಿಂತಿದೆ ಗೊತ್ತಿಲ್ಲ ಆದರೆ ಸೀರಿಯಲ್ ಅಂತ್ಯವಾಗುತ್ತಿದೆ.....

Colors Kannada Lakshana serial may stop telecasting due to Sudeep Bigg boss season 10 vcs
Author
First Published Sep 9, 2023, 10:16 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷಣ ಪ್ರಸಾರ ಶೀಘ್ರದಲ್ಲಿ ಅಂತ್ಯವಾಗಲಿದೆ ಅನ್ನೋದು ಅಲ್ಲಿಂದ ಇಲ್ಲಿಂದ ಕೇಳಿ ಬರುತ್ತಿರುವ ಮಾತುಗಳು. ಈಗಷ್ಟೇ ಟ್ವಿಸ್ಟ್‌ ಪಡೆಯುತ್ತಿರುವ ಸೀರಿಯಲ್ ಯಾಕೆ ನಿಲ್ಲಿಸುತ್ತಿದ್ದಾರೆ ಎಂದು ವೀಕ್ಷಕರು ಕೊಂಚ ಬೇಸರ ಮಾಡಿಕೊಂಡಿದ್ದಾರೆ. ಆದರೆ ಅಸಲಿ ಕಥೆ ಬೇರೆನೇ ಇದೆ....

ಹೌದು! ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಸೀಸನ್ 10 ಶೀಘ್ರದಲ್ಲಿ ಪ್ರಸಾರವಾಗಲಿದೆ. ಈಗಾಗಲೆ ಒಂದೆರಡು ಪ್ರೋಮೋ ಕೂಡ ರಿಲೀಸ್ ಮಾಡಿದ್ದಾರೆ. ಪ್ರೋಮೋದಲ್ಲಿ ಸುದೀಪ್ ಕಾಣಿಸುತ್ತಿಲ್ಲ ಅವರು ಕೂಡ ಶೋಯಿಂದ ಹೊರ ಬಂದಿದ್ದಾರಾ ನಮಗೆ ಕ್ಲಾರಿಟಿ ಕೊಡಿ ಎಂದು ಅಭಿಮಾನಿಗಳು ಸಾಕಷ್ಟು ಮನವಿ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ ಹೇಗಿರಲಿದೆ? ಯಾರೆಲ್ಲಾ ಬರಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ನಡುವೆ ಬಹುಷ ಧಾರಾವಾಹಿ ಅಂತ್ಯವಾಗುವುದು ಬೇಸರ ತರುವುದಿಲ್ಲ.

ಕಪ್ಪು ಇರುವುದಕ್ಕೆ ಅವಕಾಶ ಸಿಗುತ್ತಿಲ್ಲ; ಟ್ರೋಲಿಗರ ಕೆಲಸದಿಂದ ಭಾವುಕಳಾದ 'ಲಕ್ಷಣ' ನಟಿ

ಎಲ್ಲಿಗೆ ಬಂದು ನಿಂತಿದೆ ಲಕ್ಷಣ:

ಶ್ವೇತಾಳನ್ನು ನಂಬಿಕ ಶಕುಂತಲಾ ದೇವಿ ಇಡೀ ಕುಟುಂಬದ ಆಸ್ತಿಗೆ ಆಕೆಯನ್ನು ನಾಮಿನಿ ಮಾಡುತ್ತಾರೆ. ಅದನ್ನೇ ಉಪಯೋಗ ಮಾಡಿಕೊಂಡು ಶ್ವೇತಾ ಇಡೀ ಮನೆ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳುತ್ತಾಳೆ. ಅಲ್ಲದೆ ಮನೆಯಲ್ಲಿದ್ದ ಪ್ರತಿಯೊಬ್ಬರನ್ನು ಹೊರ ಹಾಕುತ್ತಾಳೆ. ಇದರಿಂದ ದಾರಿ ತೋರದೆ ದುಖಃದಲ್ಲಿರುವ ಕುಟುಂಬಕ್ಕೆ ಧೈರ್ಯ ಹೇಳಿದ ನಕ್ಷತ್ರ ತಮ್ಮ ಹಳೆ ಮನೆ ತಮ್ಮ ಹಳೆ ಹೋಟೆಲ್‌ ಕಡೆ ಮುಖ ಮಾಡುತ್ತಾಳೆ. ಯಾವ ಸಮಯದಲ್ಲಿ ಹಣ ಮತ್ತು ಹೆಸರು ಮಾಡಬೇಕು ಎನ್ನುತ್ತಿದ್ದರು ಆಗ ಕೈ ಹಿಡಿದ ಈ ಸಣ್ಣ ಹೋಟೆಲ್‌ನಲ್ಲಿ ಮತ್ತೊಮ್ಮೆ ಶಕುಂತಲಾ ದೇವಿ ಜೀವನ ಶುರು ಮಾಡುವ ಪರಿಸ್ಥಿತಿ ಬಂದಿದೆ. 

ಲಕ್ಷಣ ಸೀರಿಯಲ್ ಭೂಪತಿ ಪತ್ನಿ ಸೀರಿಯಲ್‌ನಲ್ಲೂ ನಟಿಸಿದ್ದರು!

ತನ್ನ ಮಗಳ ಕುಟುಂಬ ಸಣ್ಣ ಗುಡಿಸಿನಲ್ಲಿ ಜೀವನ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಚಂದ್ರಶೇಖರ್ ಸಹಾಯಕ್ಕೆ ಬಂದಿದ್ದಾರೆ. ಆಗ ಲಕ್ಷಣ ಬೇಕಿದ್ದರೆ ತವರು ಮನೆಗೆ ಹೋಗಲಿ ನಾನು ಮಾಡಿದ ತಪ್ಪಿದೆ ಇಲ್ಲೇ ಇರುವೆ ಎಂದು ಶಕುಂತಲಾ ದೇವಿ ನಿರಾಕರಿಸುತ್ತಾರೆ. ಮಾವನ ಸಹಾಯಕ್ಕೆ ಮನಸೋತ್ತು ಭೂಪತಿ ವಂದನೆಗಳನ್ನು ತಿಳಿಸುತ್ತಾನೆ. ಕಥೆ ಇಲ್ಲಿದೆ ಬಂದು ನಿಂತಿದೆ...ಮುಂದೆ ಹೇಗೆ ಅನ್ನೋದು ಬಿಗ್ ಬಾಸ್‌ ಟೀಸರ್ ಅನೌನ್ಸ್ ಆದ್ಮೇಲೆ ತಿಳಿಯುತ್ತದೆ. 

Follow Us:
Download App:
  • android
  • ios