ರೇಶ್ಮಾ ಆಂಟಿ ರೀಲ್ಸ್ ನೋಡುತ್ತಾ ಮಷಿನ್‌ನಿಂದ ಕೈ ಕಟ್ ಮಾಡಿಕೊಂಡ ಕಾರ್ಮಿಕ; 4 ಲಕ್ಷ ಡಿಮ್ಯಾಂಡ್ ಇಟ್ಟ ತರ್ಲೆಗಳು!
ಪ್ರಮೋಷನ್ ಹೆಸರಿನಲ್ಲಿ ರೀಲ್ಸ್ ರೇಶ್ಮಾಗೆ ಯಾಮಾರಿಸಿದ ತರ್ಲೆ ಕಾರ್ ತಂಡ. ಕಾರ್ಮಿಕಾ ಕೈ ಕಟ್ ಮಾಡಿಕೊಂಡಿರುವುದು ನಿಜವೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಸೀಸನ್ 3ರಲ್ಲಿ ರೀಲ್ಸ್ ಖ್ಯಾತಿಯ ರೇಶ್ಮಾ ಆಂಟಿ ಸ್ಪರ್ಧಿಸಿ ಸೆಮಿ ಫಿನಾಲೆಗೆ ಕಾಲಿಟ್ಟಿದ್ದಾರೆ. ಹಾಯ್ ಫ್ರೆಂಡ್ಸ್ ಬೈ ಫ್ರೆಂಡ್ಸ್ ಅನ್ನೋಂದು ಜನರನ್ನು ಮನೋರಂಜಿಸುವ ರೇಶ್ಮಾ ಅಂಟಿ ಇತ್ತೀಚಿಗೆ ಖಾಸಗಿ ಪ್ರಮೋಷನ್‌ಗಳಲ್ಲಿ ಭಾಗಿಯಾಗುತ್ತಾರೆ. ಫೋಟೋಶೂಟ್, ಮೇಕಪ್, ಬ್ರ್ಯಾಂಡ್ ಪ್ರಮೋಷನ್, ಅಂಗಡಿ ಪ್ರಮೋಷನ್ ಅಲ್ಲದೆ ಸಾಕಷ್ಟು ಇಂಟರ್ವ್ಯೂಗಳನ್ನು ನೀಡಿದ್ದಾರೆ. ಹೀಗೆ ಪ್ರಮೋಷನ್ ಮಾಡಬೇಕು ಎಂದು ಹೇಳಿ ರೇಶ್ಮಾರನ್ನು ಭೇಟಿ ಮಾಡಿದ ತರ್ಲೆ ಕಾರು ಗ್ಯಾಂಗ್ ಏನ್ ಮಾಡಿದೆ ನೋಡಿ......
ರೀಲ್ಸ್ ರೇಶ್ಮಾ ಅವರ ಮನೆ ಬಳಿ ತರ್ಲೆ ಗ್ಯಾಂಗ್ ಪಿಕ್ ಮಾಡಿದ್ದಾರೆ. ಸೈಲೆಂಟ್ ಆಗಿ ಕಾರು ಏರಿದ ಆಂಟಿಗೆ ರೇಶ್ಮಾ ಅಂಟಿ ಕಾಲೆಳೆಯಲು ಶುರು ಮಾಡಿದ್ದಾರೆ. ನಮ್ಮ ಮಷಿನ್ ಫ್ಯಾಕ್ಟರಿಯಲ್ಲಿ ಹುಡುಗನೊಬ್ಬ ನಿನ್ನ ವಿಡಿಯೋ ನೋಡಿಕೊಂಡು ಮಷಿನ್‌ಗೆ ಕೈ ಕೊಟ್ಟಿದ್ದಾನೆ, ಇದರಿಂದ ಆತನ ಕೈ ಕಟ್ ಆಗಿದೆ. ಆಪರೇಷನ್ ಮಾಡಿದರೆ ಕೈ ಸರಿ ಆಗುತ್ತದೆ ಎಂದು ಡಾಕ್ಟರ್ ಹೇಳಿದರೂ ಈಗ ಗಾಬರಿಕೊಂಡು ಸತ್ತೋಗುವ ಹಾಗೆ ವರ್ತಿಸುತ್ತಿದ್ದಾನೆ. ಅಲ್ಲದೆ ಆಪರೇಷನ್‌ಗೆ 8 ಲಕ್ಷ ರೂಪಾಯಿ ಖರ್ಚು ಆಗುತ್ತದೆ. ರೇಶ್ಮಾ ಅವರನ್ನು ಒಮ್ಮೆ ನೋಡಬೇಕು ಎಂದು ಕಾರ್ಮಿಕ ಹಠ ಮಾಡುತ್ತಿದ್ದಾರೆ. 4 ಲಕ್ಷ ಕಂಪನಿಕಡೆಯಿಂದ ಸಿಗುತ್ತದೆ ಡಾಕ್ಟರ್ ಕೂಡ ಸಹಾಯ ಮಾಡುತ್ತಿದ್ದಾರೆ ನೀವು ಒಮ್ಮೆ ಆತನನ್ನು ಭೇಟಿ ಮಾಡಿ ಮಾತನಾಡಿದಿ ಉಳಿದ 4 ಲಕ್ಷ ಹಣ ಕೊಡಬೇಕು ಎಂದು ತರ್ಲೆ ಗ್ಯಾಂಗ್ ರೇಶ್ಮಾ ತಲೆಗೆ ಹುಳ ಬಿಡುತ್ತಾರೆ.
ಭೀಮನ ಅಮಾವಾಸ್ಯೆ ಪ್ರಯುಕ್ತ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್!
ಅಯ್ಯೋ ನಾನು ಪ್ರಮೋಷನ್ ಕೆಲಸ ಅಂದುಕೊಂಡು ನಿಮ್ಮ ಜೊತೆ ಬಂದಿರುವುದು ನೀವು ಯಾಕೆ ಸುಳ್ಳು ಹೇಳಿದ್ದೀರಾ? ಮೊದಲೇ ಹೇಳಬೇಕು ಹುಡುಗನಿಗೆ ಹೀಗೆ ಆಗಿದ್ದೆ ಅಂತ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದೆ ಈಗ ನನಗೆ ಟೈಂ ಇಲ್ಲ ಶೂಟಿಂಗ್ ಇದೆ ಎಂದು ರೇಷ್ಮಾ ಸಾಕಷ್ಟು ಯಾಮಾರಿಸುತ್ತಾರೆ. ಆದರೂ ತರ್ಲೆ ಗ್ಯಾಂಗ್ ಮಾತು ಕೇಳುವುದಿಲ್ಲ. ನೋಡಿ ನಾನು ಎಂದೂ ಒಬ್ಬಳೆ ಬರುವುದಿಲ್ಲ ಮನೆ ಹತ್ತಿರ ಪ್ರಮೋಷನ್ ಎಂದು ಹೇಳಿದ್ದಕ್ಕೆ ಬಂದೆ. ನಮ್ಮ ಯಜಮಾನರು ಇದ್ರೆ ಮಾತ್ರ ನಾನು ಹೊರಗಡೆ ಹೋಗುವುದು ಈಗ ಆಗುವುದಿಲ್ಲ. ಅಲ್ಲದೆ ನನ್ನ ಬಳಿ 4 ಲಕ್ಷ ಹಣ ಎಲ್ಲಿಂದ ಬರುತ್ತೆ? ನಾನು ದರ್ಶನ್ ಸುದೀಪ್ ಅಂತ ಇನ್ಯಾವ ದೊಡ್ಡ ಸ್ಟಾರ್ ಅಲ್ಲ ಲಕ್ಷ ಲಕ್ಷ ಹಣ ಇಟ್ಟುಕೊಂಡು ಸಹಾಯ ಮಾಡುವುದಕ್ಕೆ ಇಗಷ್ಟೇ ಫೀಲ್ಡ್‌ಗೆ ಇಳಿದಿರುವ ವ್ಯಕ್ತಿ ಎಂದು ರೇಶ್ಮಾ ಹೇಳುತ್ತಾರೆ. ಒಂದು ನಿಮಿಷ ಆತಂಕ ಆಗಿದ್ದು ನಿಜ ಅದರಿಂದ ಕಣ್ಣೀರಿಟ್ಟರು, ಕಿಟಕಿ ಬಿಡಿದು ಸಹಾಯ ಮಾಡಿ ಎಂದು ಜೋರಾಗಿ ಕೂಗಿದ್ದಾರೆ. ಆದರೂ ಸಹಾಯಕ್ಕೆ ಯಾರೂ ಬಾರದ ಕಾರಣ ಪೊಲೀಸ್‌ಗೆ ಫೋನ್ ಮಾಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಪ್ರ್ಯಾಂಕ್ ವಿಚಾರ ತಿಳಿಸಿದ್ದಾರೆ.