ತುಕಾಲಿ ಸಂತು ಖಾತೆಯಲ್ಲಿ 2 ಲಕ್ಷ ಮಾಯಾ; ಬಿಗ್ ಬಾಸ್‌ಗೆ ಕಾಲಿಟ್ಟು ನಷ್ಟ?

ಬಿಗ್ ಬಾಸ್‌ ಮನೆಯಲ್ಲಿದ್ದು ಹೊರಗೆ ನಡೆಯುವ ದಾನ ಧರ್ಮಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಸಂತು....ಸುದೀಪ್ ಸಲಹೆ ಏನು?

Colors Kannada Bigg boss Tukali Santhosh misses festival and donation vcs

ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯತೆ ಪಡೆದುಕೊಂಡ ತುಕಾಲಿ ಸಂತೋಷ್‌ ಈ ಸಲ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ಎಪಿಸೋಡ್‌ನಿಂದಲೂ ಸಣ್ಣ ಪುಟ್ಟ ತಮಾಷೆ ಮಾಡಿಕೊಂಡು ಇದ್ದ ಸಂತು ಡ್ರೋನ್ ಪ್ರತಾಪ್ ಬಗ್ಗೆ ಹಾಸ್ಯ ಮಾಡಲು ಶುರು ಮಾಡಿ ಜನರ ಕಣ್ಣಲ್ಲಿ ಟಾರ್ಗೆಟ್ ಆಗಿ ಬಿಟ್ಟರು. ಸುದೀಪ್ ಸಲಹೆ ಮತ್ತು ಮನೆಯ ಇನ್ನಿತ್ತರ ಸದಸ್ಯರ ಕಿವಿ ಮಾತುಗಳನ್ನು ಕೇಳಿ ಸಂತು ಬೇರೆ ರೀತಿನೇ ಕಾಮಿಡಿ ಮಾಡಲು ಶುರು ಮಾಡಿದ್ದರು. 

ಬಿಗ್ ಬಾಸ್ ಆರಂಭವಾದ ನಂತರ ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬ ಇತ್ತು. ಹೀಗಾಗಿ ಸದಸ್ಯರು ಫ್ಯಾಮಿಲಿನ ಮಿಸ್ ಮಾಡಿಕೊಳ್ಳಬಾರದು ಎಂದು ಬಿಬಿಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದರು. ಆದರೂ ಫ್ಯಾಮಿಲಿ ಮತ್ತು ದಾನ ಧರ್ಮಗಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತುಕಾಲಿ ಸಂತು ಸುದೀಪ್ ಬಳಿ ಹೇಳಿಕೊಂಡಿದ್ದಾರೆ.

ಭಾಗ್ಯಶ್ರೀ ಕಣ್ಣೀರು ದೌರ್ಬಲ್ಯ ಅಲ್ಲ, ಆಕೆಯನ್ನು ಬೇಕೆಂದು ಟಾರ್ಗೆಟ್ ಮಾಡ್ತಿದ್ದಾರೆ: ಪತಿ ಭರತ್ ಹೇಳಿಕೆ ವೈರಲ್

'ಮನೆಯ ಹಬ್ಬವನ್ನು ಸಖತ್ ಮಿಸ್ ಮಾಡಿಕೊಳ್ಳುತ್ತೊದ್ದೀನಿ. ಹೊರಗಿದ್ದರೆ ದಾನ ಧರ್ಮ ಮಾಡುತ್ತಿದ್ದೆ. ಆದರೆ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ' ಎಂದು ಸಂತೋಷ್ ಹೇಳಿದ್ದಾರೆ. ಇದೇ ವಿಚಾರ ಇಟ್ಟುಕೊಂಡು ಸುದೀಪ್ 'ಅಷ್ಟೇನಾ?...ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಬಳಸಿಕೊಳ್ಳುತ್ತೇವೆ. ಆ ಹಣದಿಂದ ದಾನ ಧರ್ಮ ಮಾಡುತ್ತೇವೆ. ಪ್ರತಿ ವಾರ ನಿಮಗೆ ಕ್ರೆಡಿಟ್‌ ಆಗುವ ಸಂಭಾವನೆಯನ್ನು ದಾನ ಧರ್ಮಕ್ಕೆ ಬಳಸಿಕೊಳ್ಳುತ್ತೇವೆ' ಎನ್ನುತ್ತಾರೆ. ಮರು ದಿನವೂ ಸುದೀಪ್‌ ಇದನ್ನು ಚರ್ಚೆ ಮಾಡುತ್ತಾರೆ. 'ತುಕಾಲಿ ಅವರೇ ನಿಮ್ಮ ಖಾತೆಯಿಂದ ಎರಡು ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡಿದ್ದೇವೆ. ಆ ಹಣವನ್ನು ದಾನ ಧರ್ಮ ಮಾಡಿದ್ದೇವೆ' ಎನ್ನುತ್ತಾರೆ. 'ದಯವಿಟ್ಟು ಬೇಡ ಅಣ್ಣ. ಆ ದುಡ್ಡು ಎಲ್ಲಿ ಹೋಯಿತು ಎಂದು ಹೆಂಡತಿ ಹೇಳ್ತಾಳೆ. ದಯವಿಟ್ಟು ಹಣ ವಾಪಸ್ ಮಾಡಿ' ಎಂದು ತುಕಾಲಿ ಮನವಿ ಮಾಡುತ್ತಾರೆ. ಆದರೂ ಕಿಚ್ಚ ' ನೀವು ಮದುವೆ ಆದವರು. ನಿಮ್ಮ ಹೆಂಡತಿ. ನಿಮ್ಮದೇ ಬ್ಯಾಂಕ್ ಖಾತೆ. ನಾವೇಕೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು' ಎಂದು ಸುದೀಪ್ ನಗುತ್ತಾರೆ. 

ಹೊಡೆದಾಡುವ ಮಟ್ಟಕ್ಕೆ ಕಾಟ ಕೊಟ್ಟಿದ್ದರು; ತುಕಾಲಿ ಸಂತು ಅಸಲಿ ಮುಖ ಬಿಚ್ಚಿಟ್ಟ ಯತಿರಾಜ್

ಈ ವಿಚಾರದಲ್ಲಿ ಜನರಿಗೆ ಕೊಂಚ ಗೊಂದಲವಿದೆ. ಸುದೀಪ್ ತಮಾಷೆ ಮಾಡಲು 2 ಲಕ್ಷ ಹಣ ಎಂದು ಹೇಳಿದ್ರಾ? ಅಥವ ತುಕಾಲಿ ವಾರಕ್ಕೆ 2 ಲಕ್ಷ ಹಣವನ್ನು ಬಿಗ್ ಬಾಸ್ ಸಂಭಾವನೆಯಾಗಿ ಕೊಟ್ಟಿದ್ದಾರಾ ಅನ್ನೋದು ಜನರ ಪ್ರಶ್ನೆ. 

Latest Videos
Follow Us:
Download App:
  • android
  • ios