Asianet Suvarna News Asianet Suvarna News

ಜೂ.21ರಂದು ಮತ್ತೆ ಶುರು ಬಿಗ್‌ಬಾಸ್!

ಬಿಗ್ ಬಾಸ್ ಶೋ ಮತ್ತೆ ಆರಂಭವಾಗಲಿದೆ. ಅರ್ಧದಲ್ಲಿ ಮೊಟಕುಗೊಂಡಿದ್ದ ಬಿಗ್‌ಬಾಸ್ ೮ನೇ ಆವೃತ್ತಿ ಜೂ.೨೧ರ ಸೋಮವಾರದಿಂದ ಮತ್ತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.
 

Colors Kannada Bigg boss season 8 to begin from June 21st vcs
Author
Bangalore, First Published Jun 16, 2021, 12:31 PM IST

ಆ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಸ್ಪಽಗಳನ್ನು ಕ್ವಾರಂಟೈನ್ ಮಾಡಿ ಕೋವಿಡ್ ಪರೀಕ್ಷೆ ಮಾಡಿದ ನಂತರ ಬಿಗ್‌ಬಾಸ್ ಮನೆಗೆ ಕಳುಹಿಸುವ ತಯಾರಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ನಿಯಮಗಳ ಕಾರಣಕ್ಕೆ ಬಿಗ್ ಬಾಸ್ 8ನೇ ಆವೃತ್ತಿ 72 ದಿನಗಳಿಗೆ ಮುಕ್ತಾಯಗೊಳಿಸಿ, 12 ಮಂದಿ ಸ್ಪರ್ಧಿ ಗಳನ್ನು ಬಿಗ್‌ಬಾಸ್ ಮನೆಯಿಂದ ಆಚೆ ಕರೆಯಲಾಗಿತ್ತು.

ಜೂನ್ ಕೊನೆಯಲ್ಲಿ ಅಥವಾ ಜುಲೈನಲ್ಲಿ ಬಿಗ್ ಬಾಸ್‌ ಸೀಸನ್ 8 ಮತ್ತೆ ಆರಂಭ? 

ಈಗ ಪೂರ್ತಿ ನೂರು ದಿನಗಳನ್ನು ಪೂರೈಸುವ ಯೋಜನೆ ವಾಹಿನಿಯದ್ದು. ಹೀಗಾಗಿ ಈಗ ಮತ್ತೆ  28 ದಿನಗಳ ಕಾಲ ಮತ್ತೆ ಶೋ ಪ್ರಸಾರ ಮಾಡುವ ಅಥವಾ 40 ದಿನಗಳಿಗೆ ಶೋ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಳೆಯ 12 ಮಂದಿ ಸ್ಪರ್ಧಿಗಳ ಜತೆಗೆ ಇಬ್ಬರು ಹೊಸ ಸ್ಪರ್ಧಿಗಳನ್ನೂ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಈ ಹೊಸ ಸ್ಪರ್ಧಿಗಳು ಯಾರೆಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಸ್ತುತ ನಾನ್ ಫಿಕ್ಷನ್ ಕಾಯಕ್ರಮಗಳು ಯಾವುದೂ ಇಲ್ಲ. ಹೀಗಾಗಿ ಅರ್ಧದಲ್ಲಿ ನಿಂತಿದ್ದ ಬಿಗ್‌ಬಾಸ್ ಶೋ ಮತ್ತೆ ತನ್ನ ಪ್ರಸಾರ ಆರಂಭಿಸಲಾಗುತ್ತಿದೆ.

' ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ. ಇದೊಂಥರಾ ಎರಡನೇ ಇನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನಿಂಗ್ಸಿನ ಸ್ಕೋರ್‍ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುವುದು.. ಎರಡನೇ ಇನಿಂಗ್ಸಿನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ ಬಾಸ್ ಶೋದಲ್ಲೂ ಎರಡನೇ ಇನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ. ಜೂನ್ ತಿಂಗಳು. ಹೊರಗಡೆ ಮಳೆ. ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯ' ಎಂದು ಪರಮೇಶ್ವರ್ ಗುಂಡ್ಕಲ್ ಬರೆದುಕೊಂಡಿದ್ದಾರೆ. 

Follow Us:
Download App:
  • android
  • ios