ಸೆರೆಮನೆಯಂಥ ಅರಮನೆಯಲ್ಲಿ ಬಂಧಿಯಾಗಿರುವ ಸ್ಟಾರ್‌ಗಳು ಇನ್ನೇನು ಫಿನಾಲೆ ಮುಟ್ಟಲು ಕೇವಲ 4 ದಿನಗಳು ಉಳಿದಿವೆ. ಫಿನಾಲೆ ವಾರಕ್ಕೆ ಭೂಮಿ ಶೆಟ್ಟಿ, ದೀಪಿಕಾ ದಾಸ್, ಶೈನ್ ಶೆಟ್ಟಿ, ಕುರಿ ಪ್ರತಾಪ್‌ ಮತ್ತು ವಾಸುಕಿ ವೈಭವ್‌ ಆಯ್ಕೆಯಾಗಿದ್ದಾರೆ. ಇವರನ್ನು ಭೇಟಿಯಾಗಿ, ಶುಭ ಕೋರಲು ಈಗಾಗಲೇ ಕೆಲವು ದಿನಗಳ ಮನೆಯೊಳಗಿದ್ದು, ಎಲಿಮನೇಟ್ ಆಗಿರುವ ಸ್ಪರ್ಧಿಗಳು ಒಬ್ಬೊಬ್ಬರೇ ಆಗಮಿಸುತ್ತಾರೆ. ಬಹುತೇಕ ಈಗಾಗಲೇ ಎಲ್ಲರೂ ಈ ಮನೆಗೆ ಭೇಟಿ ನೀಡಿದ್ದರು. ಎಲ್ಲರೂ ಬಂದು ಹೋಗಿಯಾಗಿದೆ. ಆದರೆ, ಹಾಯ್ ಬೆಂಗಳೂರು ಎಂಬ ಪತ್ರಿಕೆ ಆರಂಭಿಸಿ, ಬೆಳೆಯಿಸಿದ ಕನ್ನಡದ ಮಹಾನ್ ಪತ್ರಕರ್ತ ರವಿ ಸರ್ ಮಾತ್ರ ಬಂದೇ ಅಲ್ವಲ್ಲಾ ಎಂದು ಯೋಚಿಸುತ್ತಿರುವವರಿಗೆ ಸರ್ಪ್ರೈಸ್ ಕೊಟ್ಟದೆ ಬಿಗ್ ಬಾಸ್. 

ಕ್ರಿಕೆಟರ್‌ ಅಯ್ಯಪ್ಪ - ಕಿರುತೆರೆ ನಟಿ ಅನು ಪೋವಮ್ಮ ಪೇಮ ಕಥೆ ರಿವೀಲ್‌! ಇಲ್ಲಿದೆ ನೋಡಿ

ಮಿಡ್‌ನೈಟ್‌ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರ ಹೋದ ಹರೀಶ್ ರಾಜ್‌ ಅವರನ್ನು ಸರಿಯಾಗಿ ಮಾತನಾಡಿಸಿ ಬೈ ಹೇಳಲು ಸಾಧ್ಯವಾಗಲಿಲ್ಲ ಎಂದು ಸ್ಪರ್ಧಿಗಳು ಬೇಸರದಲ್ಲಿದ್ದರು. ಹರೀಶ್ ಮನೆಯಿಂದ ಹೊರ ಹೋದ ಮಾರನೇ ದಿನವೇ ಮನೆಗೆ ರವಿ ಆಗಮಿಸಿದ್ದರಿಂದ ಎಲ್ಲ ಸ್ಪರ್ಧಿಗಳು ಖುಷಿಯಾದರು. ಸ್ಪರ್ಧಿಗಳನ್ನು ರೇಗಿಸುತ್ತಾ ಕಾಲು ಎಳೆಯುತ್ತಿದ್ದ ರವಿ ಎಂಬ ಜ್ಞಾನದ ಖನಿ, ಯಾರು ಮೊದಲು ಮದುವೆ ಆಗುತ್ತಾರೆ ಎಂದು ಕೇಳಿದರು. ತಕ್ಷಣವೇ 'ಭೂಮಿ ಆಗಬಹುದು..' ಎಂದು ಕುರಿ ಹಾಗೂ ಶೈನ್‌ ಕಾಲೆಳೆದರು. ಆದರೆ ಭೂಮಿ 'ನಾನಿನ್ನೂ 5 ವರ್ಷ ಮದುವೆ ಆಗೋಲ್ಪಪ್ಪ, ಆರಾಮಾಗಿ ಇರಬೇಕು,' ಎಂದು ಹೇಳಿ ಎಲ್ಲರನ್ನೂ ಸುಮ್ಮನಾಗಿಸಿದರು.

ಮನೆಗೆ ಬಂದ ಅತಿಥಿಗೆ ಕಾಫಿ ಮಾಡಿಕೊಂಡು ಬಂದ ದೀಪಿಕಾ ದಾಸ್‌ ಅವರನ್ನು ನೋಡಿ ರವಿ ನೀನು ತುಂಬಾ ಸಣ್ಣ ಆಗಿದ್ಯಾ. ಚೆನ್ನಾಗಿ ತಿನ್ನೆಂದು ಬುದ್ಧಿ ಹೇಳಿದರು. ನಂತರ 'ಸ್ಟಿಫ್‌ ಆಗಿ ಇರ್ತಿದ್ಲು, ಎರಡನೇ ದಿನಕ್ಕೆ ಸರಿಯಾಗಿ ಸ್ಟ್ರೀಮ್‌ಗೆ ಬಂದಿದ್ದಾಳೆ,' ಎಂದು ಹೇಳಿ ಎಲ್ಲರನ್ನೂ ನಗಿಸಿದರು. ಅಷ್ಟೇ ಅಲ್ಲದೇ ಏನಾದ್ರೂ ಕಥೆ ಹೇಳಿ ಎಂದು ಸ್ಪರ್ಧಿಗಳು ಕೇಳಿದಾಗ, ಬೇಂದ್ರೆ ಅವರನ್ನು ನೆನಪಿಸಿಕೊಳ್ಳುತ್ತಾರೆ ಕನ್ನಡದ ಹಿರಿಯ ಪತ್ರಕರ್ತ. ಮಂಕಿ ಕ್ಯಾಪ್‌ ಹಾಕ್ಕೊಂಡು ಸಾಧನಕೆರೆ ಮನೆಯ ಗೇಟಿಗೆ ಒರಗಿಕೊಂಡು ಬೇಂದ್ರೆ ಕೂರುತ್ತಿದ್ದರು. ಅವರ ಇನ್‌ ಡೆಪ್ತ್‌ ಜೀವನವನ್ನು ಅರ್ಥ ಮಾಡಿಕೊಂಡರೆ, ರೋಮಾಂಚನವಾಗುತ್ತದೆ, ಎಂದು ಕನ್ನಡ ಹಿರಿ ಕವಿಯ ವ್ಯಕ್ತಿತ್ವವನ್ನು ಪರಚಿಯಿಸಿಕೊಟ್ಟು ಫಿನಾಲೆ ಪ್ರವೇಶಿಸಿದ ಸ್ಪರ್ಧಿಗಳಿಗೆ ಶುಭ ಕೋರಿ ಮನೆಯಿಂದ ಹೊರ ಹೋಗಿದ್ದಾರೆ ರವಿ ಬೆಳಗೆರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ; ಲಾಸ್ಟ್‌ ಕಿಸ್‌ ಫೋಟೋ ಲೀಕ್!

ರವಿ ಬೆಳಗೆರೆ ಹೊರ ಹೋಗುತ್ತಿದ್ದಂತೆ, ಸ್ಪರ್ಧಿಗಳು ರವಿ ಕಾಲಿಗೆ ನಮಸ್ಕರಿಸುತ್ತಾರೆ. ಯಾರಿಗೂ ಭಾಗದ ದೀಪಿಕಾ ದಾಸ್‌ ಸಹ ರವಿ ಬೆಳಗೆರೆ ಮುಂದೆ ತಲೆ ಬಗ್ಗಿಸಿದರೆಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡುತ್ತಿದ್ದಾರೆ.

ಅದರಿಲಿ ನಿಮ್ಮ ಅಭಿಪ್ರಾಯದಲ್ಲಿ ಈ ಬಾರಿಯ ಬಿಗ್‌ಬಾಸ್ ಕಿರೀಟ ಯಾರ ಮುಡಿಗೆ ಸೇರುತ್ತೆ?