ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ; ಲಾಸ್ಟ್ ಕಿಸ್ ಫೋಟೋ ಲೀಕ್!
ಮರಾಠಿ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನೇಹಾ ಪೆಂಡ್ಸ್ ಇತ್ತೀಚಿಗೆ ತಮ್ಮ ಬಾಯ್ ಫ್ರೆಂಡ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಮದುವೆ ಫೋಟೋ ರಿವೀಲ್ ಮಾಡುವ ಮುನ್ನ ಭಾವೀ ಪತಿಗೆ ಕೊಟ್ಟ 'ಲಾಸ್ಟ್ ಸಿಂಗಲ್ ಕಿಸ್' ಫೋಟೋ ಶೇರ್ ಮಾಡಿಕೊಂಡಿದ್ದಾರೆ!
'ಓಂ' ಪ್ರೇಮಾ ಅಭಿನಯದ, 2005ರಲ್ಲಿ ಬಿಡುಗಡೆಯಾಗಿದ್ದ 'ಇನ್ಸ್‌ಪೆಕ್ಟರ್ ಝಾನ್ಸಿ' ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಈಕೆ. ಮರಾಠಿ ಚಿತ್ರರಂಗದಲ್ಲಿ ನೇಹಾರದ್ದು ಬಹಳ ದೊಡ್ಡ ಹೆಸರು. ಅಷ್ಟೇ ಅಲ್ಲದೇ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿಯೂ ಮಿಂಚಿದವರು. ಇದೀಗ ತಮ್ಮ ಬಾಯ್ ಫ್ರೆಂಡ್ ಜತೆ ಸಪ್ತಪದಿ ತುಳಿದಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಕಿರುತೆರೆ ನಟಿ ನಿತ್ಯಾ ರಾಮ್!
ಬೆಳ್ಳಿತೆರೆ ಹಾಗೂ ಕಿರುತೆರೆಯ ಖ್ಯಾತ ನಟಿ ನೇಹಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದವನೊಂದಿಗೆ ಮರಾಠಿ ಸಂಪ್ರದಾಯದಂತೆ ಜನವರಿ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿತಾ ಚಂದ್ರಶೇಖರ್
ನಟಿ ನೇಹಾ ಮತ್ತು ಶಾರ್ದೂಲ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರಿಬ್ಬರೂ ಪಾರ್ಟಿಯೊಂದರಲ್ಲಿ ಭೇಟಿಯಾಗಿ, ಪರಿಚಿತರಾದವರು. ಅಲ್ಲಿಂದಲೇ ಶುರುವಾದ ಸ್ನೇಹ ಪ್ರೀತಿಯಾಗಿ ಅರಳಿತ್ತು. ಫ್ರೆಂಡ್ಸ್ ಆಗಿ ಕೇವಲ 3 ತಿಂಗಳಲ್ಲಿಯೇ ಶಾರ್ದೂಲ್ ನೇಹಾಗೆ ಪ್ರಪೋಸ್ ಮಾಡಿದ್ದರಂತೆ. ಕುಟುಂಬದವರಿಗೆ ತಿಳಿಸಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನೇಹಾ ಹಾಗೂ ಶೂರ್ದಾಲ್ ಕಿಸ್ ಮಾಡಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರಿಬ್ಬರ ಲವ್ ಹಾಗೂ ಕಾಂಬಿನೇಷನ್‌ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.