ಭಾರೀ ಕುತೂಹಲ ಮೂಡಿಸಿರುವ ಬಿಗ್ ಬಾಸ್ 7 ಗೆ ಕ್ಷಣಗಣನೆ ಆರಂಭವಾಗಿದೆ. ಹಿಂದೆಂಗಿಗಿಂತ ಈ ಬಾರಿಯ ಬಿಗ್ ಬಾಸ್ ಭಾರೀ ಸರ್ಪ್ರೈಸ್ ಗಳನ್ನು ಇಟ್ಟಿದೆ. 

ಅಕ್ಟೋಬರ್ 13, ಸಂಜೆ 6 ಗಂಟೆಯಿಂದ ಬಿಗ್ ಬಾಸ್ ಲಾಂಚ್ ಆಗಲಿದೆ. ಬಿಗ್ ಬಾಸ್ ಗ್ರ್ಯಾಂಡ್ ಲಾಂಚನ್ನು ಟಿವಿ ಮಾತ್ರವಲ್ಲವಲ್ಲ, ಮಲ್ಟಿಪ್ಲೆಕ್ಸ್ ನಲ್ಲೂ ನೋಡಬಹುದಾಗಿದೆ. 

ಬಿಗ್ ಬಾಸ್ ಓಪನಿಂಗ್‌ಗೆ ಕ್ಷಣಗಣನೆ, ಬೆಳೆಗೆರೆ ಸೇರಿ ಕಂಟೆಸ್ಟಂಟ್ ಗಳ ಫೈನಲ್ ಲಿಸ್ಟ್!

ಬೆಂಗಳೂರಿನ ಮಂತ್ರಿ ಮಾಲ್, ಗರುಡ ಮಾಲ್, ಜೆ ಪಿ ನಗರದಲ್ಲಿರುವ ಸೆಂಟ್ರಲ್, ಮೈಸೂರಿನ ಮಾಲ್ ಆಫ್ ಮೈಸೂರು, ಬೆಳಗಾವಿ, ಮಣಿಪಾಲದ ಸೆಂಟ್ರಲ್ ಸಿನಿಮಾ ಐನಾಕ್ಸ್ ನಲ್ಲಿ ಬಿಗ್ ಬಾಸ್ 7 ನೇರ ಪ್ರಸಾರವನ್ನು ನೋಡಬಹುದಾಗಿದೆ. ಇನ್ನೂ ಖುಷಿಯ ವಿಚಾರ ಅಂದ್ರೆ ಈ ಲೈವ್ ನೋಡಲು ಹಣ ಕೊಡಬೇಕಾಗಿಲ್ಲ. ಮೊದಲೇ ಬುಕ್ಕಿಂಗ್ ಮಾಡಬೇಕು ಎಂದು ಕಲರ್ಸ್ ಕನ್ನಡ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.  

ಕುರಿ ಪ್ರತಾಪ್, ಜೈ ಜಗದೀಶ್, ರಾಜಾ- ರಾಣಿ ಧಾರಾವಾಹಿಯ ಚುಕ್ಕಿ ಪಾತ್ರಧಾರಿ ಚಂದನ ಅನಂತಕೃಷ್ಣ, ಹಾಸ್ಯಗಾರ ರಾಜು ತಾಳಿಕೋಟೆ, ಕಿನ್ನರಿ ಧಾರಾವಾಹಿಯ ಭೂಮಿ ಶೆಟ್ಟಿ, ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್, ಗಾಯಕ, ನಟ ವಾಸುಕಿ ವೈಭವ್ , ದುನಿಯಾ ರಶ್ಮಿ, ಪಂಕಜ್ ಎಸ್ ನಾರಾಯಣ್, ನಿರೂಪಕಿ ಚೈತ್ರಾ ವಾಸುದೇವನ್, ರಾಧಾ ರಮಣ ವಿಲನ್ ಸುಜಾತಾ, ರವಿ ಬೆಳಗೆರೆ ಹೆಸರು ದಟ್ಟವಾಗಿ ಕೇಳಿ ಬರುತ್ತಿದೆ. 

ಬಿಗ್ ಬಾಸ್ ಕಂಟೆಸ್ಟಂಟ್ ಗಳ ಬಗ್ಗೆ ವಾಹಿನಿ ಸೀಕ್ರೆಟ್ ಬಿಟ್ಟು ಕೊಟ್ಟಿಲ್ಲ. ಕೊನೆ ಕ್ಷಣದವರೆಗೂ ಗೌಪ್ಯತೆ ಕಾಪಾಡಿ ಸರ್ಪ್ರೈಸ್ ನೀಡಲು ನಿರ್ಧರಿಸಿದೆ. ಈ ಸಲ ಒಟ್ಟು 17 ಸ್ಪರ್ಧಿಗಳು ಇರಲಿದ್ದಾರೆ.