ಬಿಗ್ ಬಾಸ್ ಸೀಸನ್ - 7 ಸ್ಪರ್ಧಿಗಳಾದ ದೀಪಿಕಾ ದಾಸ್, ವಾಸುಕಿ ವೈಭವ್ ಹಾಗೂ ಶೈನ್ ಶೆಟ್ಟಿಗೆ ಮನೆಗೆ ಮರಳಿದ್ದಾರೆ. 112 ದಿನಗಳ ಕಾಲ ಮನೆಯವರಿಂದ ದೂರವಿದ್ದ ಇವರನ್ನು ಕುಟುಂಬದ ಸದಸ್ಯರು ಆತ್ಮೀಯವಾಗಿ ಬರ ಮಾಡಿಕೊಂಡಿದ್ದು ಹೀಗೆ...
ರಾತ್ರಿ 9 ರಿಂದ 10 ಗಂಟೆವರೆಗೂ ನಾನ್ ಸ್ಟಾಪ್ ಮನೋರಂಜನೆ ನೀಡುತ್ತಿತ್ತು ಈ ರಿಯಾಲಿಟಿ ಶೋ 'ಬಿಗ್ ಬಾಸ್'. ಕಿರುತೆರೆ - ಬೆಳ್ಳಿತೆರೆಯ ಹೆಸರಾಂತ ವ್ಯಕ್ತಿಗಳು ಸ್ಪರ್ಧಿಗಳಾಗಿ, ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ಮನೋರಂಜಿಸಿದ್ದಾರೆ.
ಬುಸುಗುಡುವ ನಾಗಿಣಿ ದೀಪಿಕಾ ದಾಸ್ ಬಿಗ್ ಬಾಸ್‌ನಲ್ಲಿ ಪಡೆದ ಸಂಭಾವನೆ ಲೀಕ್!
112 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಕಳೆದು ರಿಯಾಲಿಟಿ ಲೈಫ್‌ನಿಂದ ರಿಯಲ್ ಲೈಫ್‌ಗೆ ಹಿಂದಿರುಗಿದ್ದಾರೆ. ಸೀಸನ್-7ರ ವಿನ್ನರ್ ಶೈನ್ ಶೆಟ್ಟಿ ಅವರನ್ನು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ರಸ್ತೆಯಲ್ಲಿರುವ ಫುಡ್ ಟ್ರಕ್ ಬಳಿ, ಅಭಿಮಾನಿಗಳು ಕೇಕ್ ಕತ್ತರಿಸಿ ಸ್ವಾಗತಿಸಿದರು. ಆ ನಂತರ ಮನೆಯಲ್ಲಿ ಪೋಷಕರು ಕೇಕ್ ಕಟ್ ಮಾಡಿ ವಿಜಯಿಯಾಗಿ ಮರಳಿದ ಮನೆ ಮಗನನ್ನು ಕುಟುಂಬ ಸ್ವಾಗತಿಸಿತು.
ಉಡುಪಿ ಶೆಟ್ಟಿ ಹುಡುಗನ ವಿಭಿನ್ನ ಹೆಸರು; 'ಶೈನ್' ಹೆಸರ ರಹಸ್ಯ ರಿವೀಲ್!
ಇನ್ನು ವಾಸುಕಿ ವೈಭವ್ ಅವರು ನಟ ಹಾಗೂ ನಿರ್ದೇಶಕ ನಾಗಾಭರಣ ಅವರ ಕುಟುಂಬದ ಸದಸ್ಯರಾಗಿದ್ದು, ಅವರ ನಿವಾಸದಲ್ಲಿಯೇ ಕೇಕ್ ಕಟ್ ಮಾಡಿದ್ದಾರೆ. ದೀಪಿಕಾ ದಾಸ್ ಅವರ ಕುಟುಂಬ ಚಿಕ್ಕದು. ಅವರು ತಾಯಿ ಹಾಗೂ ಇಬ್ಬರು ಅಣ್ಣಂದಿರ ಜೊತೆ ಮನೆಯಲ್ಲಿ ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿದರು.
